Spiritual: ಚಾಣಕ್ಯರು ಮನುಷ್ಯ ತನ್ನ ಜೀವನವನ್ನು ಅತ್ಯುತ್ತಮವಾಗಿ ಜೀವಿಸಲು ಏನೇನು ಮಾಡಬೇಕು ಎಂಬ ಬಗ್ಗೆ ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಅದೇ ರೀತಿ ಸಮಯಕ್ಕೆ ಸರಿಯಾಗಿ ಮಾಡಬೇಕಾದ ಕೆಲಸವನ್ನು ಮಾಡಬೇಕು ಅಂತಲೂ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ.
ಕೆಲಸ: ಕೈ, ಕಾಲು ಗಟ್ಟಿ ಇದ್ದಾಗಲೇ, ನಾವು ನಮ್ಮಿಂದ ಸಾಧ್ಯವಾದಷ್ಟು ದುಡಿದು ಬಿಡಬೇಕು ಅಂತಾರೆ ಚಾಣಕ್ಯರು. ವಯಸ್ಸಾದ ಬಳಿಕ ಅಥವಾ ಶಕ್ತಿ ಕಡಿಮೆಯಾದ ಬಳಿಕ, ನಮಗೆ ನಾವು ಸಮಯ ವ್ಯರ್ಥ ಮಾಡಿದ್ದರ ಬಗ್ಗೆ ಯಾವುದೇ ಬೇಸರವಾಗಬಾರದು. ಹಾಗಾಗಿ ವಯಸ್ಸಿರುವಾಗಲೇ, ನಮ್ಮ ಕೈಲಾದಷ್ಟು ದುಡಿದು, ವೃದ್ಧಾಪ್ಯದ ಖರ್ಚಿಗಾಗುವಷ್ಟಾದರೂ, ಗಳಿಸಿ ಇಡಬೇಕು ಅಂತಾರೆ ಚಾಣಕ್ಯರು.
ದಾನ: ದುಡಿದ ದುಡ್ಡಿನಲ್ಲಿ ಸಣ್ಣ ಪಾಲಾದರೂ ನಾವು ದಾನ ಮಾಡಬೇಕು ಅಂತಾರೆ ಚಾಣಕ್ಯರು. ದಾನ ಮಾಡುವುದರಿಂದ ನಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗುತ್ತದೆ. ದಾನ ಮಾಡಿದ ಪುಣ್ಯ ಪ್ರಾಪ್ತಿಯಾಗುತ್ತದೆ. ವಯಸ್ಸಾದ ಬಳಿಕ ನಿಮ್ಮ ಬಳಿ ನಿಮ್ಮ ಖರ್ಚಿಗೆ ಹಣವಿರುವುದು ಡೌಟ್. ಹಾಗಾಗಿ ಕೈಯಲ್ಲಿ ಹಣವಿರುವಾಗ, ದುಡಿಯುವ ವಯಸ್ಸಿರುವಾಗ, ಸ್ವಲ್ಪ ದಾನವೂ ಮಾಡಿ ಅಂತಾರೆ ಚಾಣಕ್ಯರು.
ಸಾಲ: ನೀವೇನಾದರೂ ಸಾಲ ಮಾಡಿದ್ದರೆ, ಅದನ್ನು ಸರಿಯಾದ ಸಮಯಕ್ಕೆ ಪಾವತಿಸುವ ಅರ್ಹತೆ ಇಟ್ಟುಕೊಳ್ಳಿ. ದುಡಿಯುವಷ್ಟು ಅರ್ಹತೆ ಇದೆ. ಕೈ ಕಾಲು ಗಟ್ಟಿ ಇದೆ. ದೇಹದಲ್ಲಿ ದುಡಿಯುವಷ್ಟು ಚೈತನ್ಯವಿದೆ ಅಂದಾಗ ಮಾತ್ರ, ಸಾಲ ಮಾಡಿ. ಇಲ್ಲವಾದಲ್ಲಿ ನೀವು ಇಕ್ಕಟ್ಟಿಗೆ ಸಿಲುಕುವುದು ಗ್ಯಾರಂಟಿ.
ಆರೋಗ್ಯ: ಯಾವುದಕ್ಕೆ ಸಮಯ ವ್ಯರ್ಥ ಮಾಡಿದರೂ, ಆರೋಗ್ಯದ ವಿಷಯದಲ್ಲಿ ಮಾತ್ರ ಸಮಯ ವ್ಯರ್ಥ ಮಾಡಬೇಡಿ. ಏಕೆಂದರೆ, ಬೇರೆ ಸಮಸ್ಯೆಯನ್ನು ನೀವು ಹೇಗಾದರೂ ಸರಿ ಮಾಡಬಹುದು. ಆದರೆ ಒಮ್ಮೆ ಆರೋಗ್ಯ ಹಾಳಾದರೆ, ಅದನ್ನು ಸರಿಪಡಿಸಲು ಕಷ್ಟವಾಗುತ್ತದೆ. ಕೆಲವೊಮ್ಮೆ ಆರೋಗ್ಯದ ವಿಷಯದಲ್ಲಿ ನಾವು ಮಾಡಿದ ನಿರ್ಲಕ್ಷ್ಯ, ನಮ್ಮ ಜೀವಕ್ಕೆ ಆಪತ್ತು ತರಬಹುದು. ಹಾಗಾಗಿ ಆರೋಗ್ಯಕ್ಕೆ ಸಂಬಂಧಿಸಿದ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮಾಡಬೇಕು ಅಂತಾರೆ ಚಾಣಕ್ಯರು.