ISRO Chandrayana: ಸತತ 40 ದಿನಗಳಿಂದ ಚಂದ್ರಯಾನ- 3 ಯಶಸ್ಸಿಕಾಗಿ ಕಾಯುತ್ತಿದ್ದ ಭಾರತಕ್ಕೆ ಇಂದು ಐತಿಹಾಸಿಕ ದಿನವಾಗಿದೆ. ಕೊನೆಗೂ ವಿಕ್ರಂ ಲ್ಯಾಂಡರ್ ಚಂದ್ರನ ಕಕ್ಷೆ ತಲುಪಿದೆ. ಅದರಲ್ಲೂ ಚಂದ್ರನ ದಕ್ಷಿಣ ಧ್ರುವಕ್ಕೆ ಇಳಿದ ಪ್ರಪಂಚದ ಮೊದಲ ದೇಶವೆಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.
ಜುಲೈ 14ರಂದು ಇಸ್ರೋ ವಿಜ್ಞಾನಿಗಳು 615 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ, ನೌಕೆಯನ್ನು ತಯಾರಿಸಿದ್ದರು. ಇದು 3.84 ಲಕ್ಷ ಕಿಲೋ ಮೀಟರ್ ದೂರದವರೆಗೆ ಹೋಗಿ ತಲುಪಲು 40 ದಿನ ಬೇಕಿತ್ತು. ಆದರೆ ಈ ಮೊದಲು ಎಲ್ಲಿ ತಪ್ಪಾಗಿತ್ತು ಎನ್ನುವುದನ್ನು ಅರಿತಿದ್ದ ಇಸ್ರೋ ಈ ಬಾರಿ ಎಚ್ಚರಿಕೆಯಿಂದ ವಿಕ್ರಂ ಲ್ಯಾಂಡರ್ ಉಡಾವಣೆ ಮಾಡಿತ್ತು. ಎರಡು ಬಾರಿ ಚಂದ್ರನ ಬಳಿ ಹೋಗಲು ಯತ್ನಿಸಿ, ಸೋತಿದ್ದ ಭಾರತ ಈ ಬಾರಿ, ಚಂದ್ರನಂಗಳಕ್ಕಿಳಿದು, ಮೂರನೇ ಚಂದ್ರಯಾನವನ್ನು ಯಶಸ್ವಿಗೊಳಿಸಿದೆ.
ಚಂದ್ರಯಾನ-3 ಗೆಲ್ಲಲಿ, ತನ್ನ ಗುರಿ ತಲುಪಲಿ, ಭಾರತದ ದೇಶದ ಕೀರ್ತಿ ಪತಾಕೆ ಎಲ್ಲೆಡೆ ಹಾರಲಿ ಎಂದು ಕರ್ನಾಟಕ ಸೇರಿ, ಹಲವು ರಾಜ್ಯಗಳಲ್ಲಿ ಪೂಜೆ ಪುನಸ್ಕಾರಗಳು ನಡೆದಿತ್ತು. ಹಲವರು ತಮ್ಮ ಮನೆಯಲ್ಲೇ ಚಂದ್ರಯಾನದ ಯಶಸ್ಸಿಗಾಗಿ ದೀಪ ಹಚ್ಚಿದರೆ, ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ಕೂಡ ನಡೆದಿತ್ತು.
ಕ್ರಿಕೇಟ್ ಲೋಕ ತ್ಯಜಿಸಿದರೂ ಧೋನಿ ಕೋಟಿ ಕೋಟಿ ಸಂಪಾದನೆ ಮಾಡುತ್ತಾರೆ.. ಹೇಗೆ ಗೊತ್ತಾ..?