Tuesday, May 21, 2024

Latest Posts

ಈಗ ಭಾರತ ಚಂದ್ರನ ಮೇಲಿದೆ: ಪ್ರಧಾನಿ ನರೇಂದ್ರ ಮೋದಿ..

- Advertisement -

ISRO News: ಚಂದ್ರಯಾನ 3 ಯಶಸ್ವಿ ಉಡಾವಣೆಯಾಗಿದ್ದು, ಚಂದ್ರನ ದಕ್ಷಿಣ ಧ್ರುವಕ್ಕೆ ಇಳಿದ ಪ್ರಪಂಚದ ಮೊದಲ ದೇಶವೆಂಬ ಹೆಗ್ಗಳಿಕೆಗೆ ನಮ್ಮ ಭಾರತ ದೇಶ ಪಾತ್ರವಾಗಿದೆ. ಈ ಬಗ್ಗೆ ಪ್ರಧಾನಿ ಮೇದಿ ಮಾತನಾಡಿದ್ದು, ಇಸ್ರೋಗೆ ಧನ್ಯವಾದ ತಿಳಿಸಿದ್ದಾರೆ.

ಈಗ ಭಾರತ ಚಂದ್ರನ ಮೇಲಿದೆ ಎಂದು ಸಂತಸ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ಈ ಐತಿಹಾಸಿಕ ಕ್ಷಣಕ್ಕೆ ನಾವು ಸಾಕ್ಷಿಯಾಗಿದ್ದೇವೆ. ದೂರದಲ್ಲಿರುವ ಚಂದ್ರನನ್ನು ತಲುಪಲು ನಾವು ಯಶಸ್ವಿಯಾಗಿದ್ದೇವೆ. ಇಸ್ರೋ ವಿಜ್ಞಾನಿಗಳು ಇತಿಹಾಸ ಸೃಷ್ಟಿಸಿದ್ದಾರೆ. ಚಂದ್ರಯಾನ- 3ರ ಯಶಸ್ಸಿಗೆ ಕಾರಣರಾದ ಪ್ರತೀ ವಿಜ್ಞಾನಿಗೂ ನಾನು ಧನ್ಯವಾದ ಹೇಳುತ್ತೇನೆ. ಐತಿಹಾಸಿಕ ಸಾಧನೆಯಿಂದ ಭಾರತದ ವಿಶ್ವಾಸ ಮತ್ತಷ್ಟು ಹೆಚ್ಚಾಗಿದೆ ಎಂದು ಮೋದಿ ಹೇಳಿದ್ದಾರೆ.

ಸತತ 40 ದಿನಗಳಿಂದ ಚಂದ್ರಯಾನ- 3 ಯಶಸ್ಸಿಕಾಗಿ ಕಾಯುತ್ತಿದ್ದ ಭಾರತಕ್ಕೆ ಇಂದು ಐತಿಹಾಸಿಕ ದಿನವಾಗಿದೆ. ಕೊನೆಗೂ ವಿಕ್ರಂ ಲ್ಯಾಂಡರ್ ಚಂದ್ರನ ಕಕ್ಷೆ ತಲುಪಿದೆ. ಅದರಲ್ಲೂ ಚಂದ್ರನ ದಕ್ಷಿಣ ಧ್ರುವಕ್ಕೆ ಇಳಿದ ಪ್ರಪಂಚದ ಮೊದಲ ದೇಶವೆಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.

ಚಂದ್ರಯಾನ-3 ಯಶಸ್ವಿ ಉಡಾವಣೆ , ದಕ್ಷಿಣ ಧ್ರುವಕ್ಕಿಳಿದ ವಿಕ್ರಮ್ ಲ್ಯಾಂಡರ್

ಈ 5 ಅಭ್ಯಾಸವೇ ನಿಮ್ಮ ಸಮಯವನ್ನು ಹಾಳು ಮಾಡುತ್ತದೆ..

ಕ್ರಿಕೇಟ್ ಲೋಕ ತ್ಯಜಿಸಿದರೂ ಧೋನಿ ಕೋಟಿ ಕೋಟಿ ಸಂಪಾದನೆ ಮಾಡುತ್ತಾರೆ.. ಹೇಗೆ ಗೊತ್ತಾ..?

- Advertisement -

Latest Posts

Don't Miss