Sunday, September 8, 2024

Latest Posts

Speaker Wishes : ಚಂದ್ರನ ಅಂಗಳದಲ್ಲಿ ವಿಕ್ರಮ: ಬಸವರಾಜ ಹೊರಟ್ಟಿ ಕೋಟಿ ಕೋಟಿ ಅಭಿನಂದನೆ..

- Advertisement -

ಬೆಂಗಳೂರು:ಚಂದ್ರನ ಅಂಗಳದಲ್ಲಿ ಭಾರತದ‌ ಐತಿಹಾಸಿಕ ಸಾಧನೆಗೆ ಅತೀವ ಸಂತಸ ವ್ಯಕ್ತಪಡಿಸಿರುವ ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಮಾನ್ಯಶ್ರೀ ಬಸವರಾಜ ಹೊರಟ್ಟಿ, ಈ ವಿಕ್ರಮಕ್ಕೆ ಕಾರಣರಾದ ಭಾರತೀಯ ವಿಜ್ಞಾನಿಗಳಿಗೆ ಕೋಟಿ ಕೋಟಿ ಅಭಿನಂದನೆ ಸಲ್ಲಿಸಿದ್ದಾರೆ…

ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ ಚಂದ್ರಯಾನ 3 ಚಂದ್ರನ ಮೇಲೆ ವ್ಯವಸ್ಥಿತವಾಗಿ ಇಳಿದಿದೆ ಅಂದರೆ ಚಂದ್ರನ ಮೇಲೆ ಭಾರತ ಎನ್ನಬಹುದೇನೋ. ಇದೊಂದು ಐತಿಹಾಸಿಕ ಘಟನೆ ಜಗತ್ತಿನ ಇತರ ಯಾವುದೇ ದೇಶಕ್ಕೆ ಆಗದಂತಹ ಒಂದು ವಿಷಯವನ್ನು ಭಾರತದ ಬಾಹ್ಯಾಕಾಶ ಸಂಸ್ಥೆ ಇಂದು ವ್ಯವಸ್ಥಿತವಾಗಿ ನೇರ ಪ್ರಸಾರದಲ್ಲಿ ಇಡೀ ಜಗತ್ತಿಗೆ ತೋರಿಸಿದೆ ಈ ಕಾರ್ಯಾಚರಣೆಗೆ ಮೊದಲಿನಿಂದಲೂ ಕಾರ್ಣಿಕರ್ತರಾದಂತಹ ಎಲ್ಲಾ ವಿಜ್ಞಾನಿಗಳು ಇತರೆ ಸಿಬ್ಬಂದಿಗಳು ಹಾಗೂ ಇಸ್ರೋದ ಪ್ರತಿಯೊಬ್ಬರು ಅಭಿನಂದನೆಗೆ ಅರ್ಹರು ಎಂದು ಮಾನ್ಯಶ್ರೀ ಹೊರಟ್ಟಿ ಬಣ್ಣಿಸಿದ್ದಾರೆ.

ಚಂದ್ರನ ದಕ್ಷಿಣ ದ್ರುವದ ಮೇಲೆ ಹೆಜ್ಜೆ ಇಟ್ಟ ಪ್ರಪಂಚದ ಪ್ರಪ್ರಥಮ ದೇಶ ಎಂಬ ಹೆಗ್ಗಳಿಕೆಗೆ ಭಾರತ ಭಾಜನವಾಗಿದ್ದು, ವಿಜ್ಞಾನಿಗಳ ಹಲವಾರು ವರ್ಷಗಳ ಶ್ರಮದ ಫಲವಾಗಿ ಇಂದು ಭಾರತ ಐತಿಹಾಸಿಕ ಸಾಧನೆ ಮಾಡಿದೆ. ಈ ಮೂಲಕ ಅಂತರಿಕ್ಷ ಸಂಶೋಧನೆಯ ಕ್ಷೇತ್ರದಲ್ಲಿ ಹೊಸ ಯುಗಕ್ಕೆ ನಾಂದಿ ಹಾಡಿದೆ ಎಂದು ಮಾನ್ಯಶ್ರೀ ಬಸವರಾಜ‌ ಹೊರಟ್ಟಿ ಸಂತಸ‌ ವ್ಯಕ್ತಪಡಿಸಿದ್ದಾರೆ.

Drought Area: ನಾಯಕನಹಟ್ಟಿನ್ನು ಬರ ಪೀಡಿತ ಪ್ರದೇಶ ಎಂದು ಘೋಷಿಸಲು ಒತ್ತಾಯ..!

 

DKS Wishes: ಇಸ್ರೋ ಸಂಸ್ಥೆಗೆ ಭೇಟಿ ನೀಡಿ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ ಡಿಸಿಎಂ..!

CM siddaramaiah; ದೂರವಾಣಿ ಮೂಲಕ‌ ಇಸ್ರೋ ಅಧ್ಯಕ್ಷರಿಗೆ ಅಭಿನಂದಿಸಿದ ಸಿಎಂ ..!

- Advertisement -

Latest Posts

Don't Miss