ಹಾಸನ: ತಾಲೂಕಿನ ಶ್ರವಣಬೆಳಗೊಳ ಜೈನ ಮಠದ ಪೀಠಾಧ್ಯಕ್ಷ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ವಿಧಿವಶರಾಗಿದ್ದಾರೆ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜೀ, 74 ವರ್ಷದವರಾಗಿದ್ದರು. ಇಂದು ವಾಯುವಿಹಾರ ಮಾಡುವಾಗ ಕುಸಿದು ಬಿದ್ದ ಪರಿಣಾಮ ತಲೆಗೆ ತೀವ್ರವಾಗಿ ಪೆಟ್ಟಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
1949 ಮೇ 3 ರಂದು ಕಾಕರ್ಳದ ವರಂಗ ಗ್ರಾಮದಲ್ಲಿ ಜನಿಸಿದ್ದರು, 1970 ರಲ್ಲಿ ಶ್ರವಣಬೆಳಗೊಳದ ಜೈನ ಮಠಕ್ಕೆ ಪೀಠಾದಿಪತಿಯಾಗಿ ದೀಕ್ಷೆ ಪಡೆದಿದ್ದರು. 20 ನೇ ವಯಸ್ಸಿನಲ್ಲಿಯೇ ಪೀಠಾಧಿಪತಿಯಾಗಿ ಧಾರ್ಮಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.
ಪೂರ್ವಾಶ್ರಮದ ಹೆಸರು ರತ್ನವರ್ಮ. ಪೀಠಾಧಿಪತಿಗಳಾದ ಮೇಲೆ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಗಳಾಗಿ ಜಗತ್ತಿಗೆ ಅಹಿಂಸಾ ಸಂದೇಶ ಸಾರುವಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಕನ್ನಡ, ಸಂಸ್ಕೃತ, ಪ್ರಾಕೃತ ಭಾಷೆಯ ಎಂ.ಎ.ಪದವೀದರರು. ಶ್ರವಣಬೆಳಗೊಳ ಬಾಹುಬಲಿಗೆ 12 ವರ್ಷಕ್ಕೆ ನಡೆಯುವ ಮಹಾಮಸ್ತಕಾಭಿಷೇಕವನ್ನು ಅತಿ ಹೆಚ್ಚು ಮಾಡಿದ ಕೀರ್ತಿ ಇವರದ್ದು. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸಹ ಇವರು ಸಂಘಟಿಸಿದ್ದರು ಸಾಹಿತ್ಯ ಕ್ಷೇತ್ರಕ್ಕೆ ಕೊಡುಯನ್ನು ಸಹ ನೀಡಿದ್ದಾರೆ. ಪ್ರಾಕೃತ ವಿಶ್ವವಿದ್ಯಾನಿಲಯವನ್ನು ಶ್ರವಣಬೆಳಗೊಳದಲ್ಲಿ ಸ್ಥಾಪನೆ ಮಾಡಲು ಪ್ರಮುಖ ಪಾತ್ರವಹಿಸಿದ್ದರು.
ಮಗಳಿಗೆ ಹೊಡೆದ ಆರೋಪ: ಶಿಕ್ಷಕರ ಮೇಲೆ ಹಲ್ಲೆ ಮಾಡಿದ ತಂದೆ ತಾಯಿ ಅರೆಸ್ಟ್..
ಚಲಿಸುತ್ತಿರುವ ರೈಲು ಹತ್ತಲು ಹೋಗಿ ಕಾಲು ಜಾರಿ ಬೀಳುತ್ತಿದ್ದವನನ್ನ ಕಾಪಾಡಿದ RPF : ವೀಡಿಯೋ ವೈರಲ್..
‘ಕಾಂಗ್ರೆಸ್ ಹೀನಾಯ ಸ್ಥಿತಿಗೆ ಬರಲು ಕಾರಣ ಇಂತಹ ಸುಳ್ಳು ಭರವಸೆಗಳು..’