Chikkodi News: ಮದುವೆ ಅಂದ್ರೆ ಎಷ್ಟೆಲ್ಲ ಕನಸು ಇರತ್ತೆ. ಅದರಲ್ಲೂ ಇಂದಿನ ಕಾಲದಲ್ಲಿ ಹೆಣ್ಣು ಸಿಗೋದೇ ಕಷ್ಟ ಅಂತಿರುವಾಗ, ಮದುವೆ ಫಿಕ್ಸ್ ಆಗೋದು ಕೂಡ ಒಂದು ಅದೃಷ್ಟ ಅನ್ನು ಕಾಲವಿದು. ಆದರೆ ಮದುವೆ ಫಿಕ್ಸ್ ಆಗಿ, ಮದುವೆಯ ತಯಾರಿ ನಡೆಯುತ್ತಿರುವಾಗಲೇ, ವರ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಬೆಳಗಾವಿಯ ಅಥಣಿ ತಾಲೂಕಿನ ಜುಂಜರವಾಡದಲ್ಲಿ ನಡೆದಿದೆ.
ಸೆಪ್ಟೆಂಬರ್ 5ರಂದು ಸದಾಶಿವ ರಾಮಪ್ಪ (31) ಎಂಬುವವರ ಮದುವೆ ಫಿಕ್ಸ್ ಆಗಿತ್ತು. ಸದಾಶಿವ ತಂದೆ ತಾಯಿಗೆ ಒಬ್ಬರೇ ಮಗನಾಗಿದ್ದು, ಅವರ ಮದುವೆ ತಯಾರಿಯನ್ನು ಅವರೇ ನೋಡಿಕೊಳ್ಳುತ್ತಿದ್ದರು. ಈ ವೇಳೆ ಮೊಬೈಲಿನಲ್ಲಿ ಮಾತನಾಡುತ್ತಾ, ಹೃದಯಾಘಾತದಿಂದ ಸದಾಶಿವ ಮೃತಪಟ್ಟಿದ್ದಾರೆ.
ಮಂಗಳವಾರ ರಾತ್ರಿ ಈ ಘಟನೆ ನಡೆದಿದ್ದು, ಮದುವೆ ಮುನ್ನ ನಡೆಯಬೇಕಿದ್ದ ಕೆಲ ಶಾಸ್ತ್ರಗಳನ್ನು ನಡೆಯುವ ಬಗ್ಗೆ ಸದಾಶಿವ ತಯಾರಿ ನಡೆಸುತ್ತಿದ್ದರು. ಈ ವೇಳೆ ಸದಾಶಿವ ಕುಸಿದು ಬಿದ್ದಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಿದಾಗ, ಅದಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ. ಇರುವ ಒಬ್ಬನೇ ಮಗನನ್ನು ಕಳೆದುಕೊಂಡಿರುವ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.