Sunday, September 8, 2024

Latest Posts

ಚೀನಾ ತೈವಾನ್ ಬಿಕ್ಕಟ್ಟು ಹಿನ್ನಲೆ : ಭಾರತದಲ್ಲಿಯೇ ಉಳಿಯುತ್ತೇನೆಂದ ದಲೈಲಾಮಾ

- Advertisement -


ಚೀನಾ ಮತ್ತು ತೈವಾನ್ ದೇಶಗಳ ನಡುವೆ ಒಂದಲ್ಲಾ ಒಂದು ವಿಷಯಕ್ಕೆ ಬಿಕ್ಕಟ್ಟು ಶುರುವಾಗಿರುವ ಹಿನ್ನಲೆಯಲ್ಲಿ ಎರಡು ದೇಶಗಳ ಸಂಭoದ ಸೂಕ್ಷ್ಮವಾಗಿದೆ .
ಹೀಗಾಗಿ ನಾನು ಭಾರತದಲ್ಲಿಯೇ ಪ್ರಶಾಂತವಾಗಿರಲು ಬಯಸಿದ್ದೇನೆ ಎಂದು ಬೌದ್ದ ಧಾರ್ಮಿಕ ಗುರು ದಲೈಲಾಮಾ ಹೇಳಿದ್ದಾರೆ .
ಟೋಕಿಯೋ ವಿದೇಶಿ ವರದಿಗಾರರ ಕ್ಲಬ್ ಆನ್‌ಲೈನ್‌ನ ಸಭೆಯಲ್ಲಿ ಬುಧುವಾರ ಮಾತನಾಡಿದ ಅವರು ಧಾರ್ಮಿಕ ಸೌಹಾರ್ದತೆಯ ಕೇಂದ್ರ ಬಿಂದುವಾಗಿರುವ ಭಾರತದಲ್ಲಿಯೇ ಪ್ರಶಾಂತವಾಗಿರಲು ಬಯಸುತ್ತೇನೆಂದು ಬೌದ್ದರ ಆಧ್ಯಾತ್ಮಿಕ ಗುರು ದಲೈಲಾಮ ಸ್ಪಷ್ಟ ಪಡಿಸಿದ್ದಾರೆ . ವಿಭಿನ್ನ ಸಂಸ್ಕೃತಿಗಳ ಪ್ರಾಮುಖ್ಯತೆಯನ್ನು ಚೀನಾದ ನಾಯಕರುಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ .ಆ ದೇಶದ ಕಮ್ಯುನಿಷ್ಟ್ ಸರ್ಕಾರ ಸಮಾಜವನ್ನು ಕಠಿಣವಾಗಿ ನಿಯಂತ್ರಿಸಲು ಹಾನಿಕಾರಕವಾದ ಕ್ರಮಗಳನ್ನು ಅನುಸರಿಸುತ್ತದೆ ಎಂದು ಅವರು ಹೇಳಿದ್ದಾರೆ .

ಸುದ್ದಿಗಾರರು ಕೇಳಿದ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದ ಅವರು ಟಿಬೆಟ್ ನಲ್ಲಿ ಚೀನಾ ಆಡಳಿತದ ವಿರುದ್ಧ ಬಂಡಾಯ ವಿಫಲವಾದ ಹಿನ್ನಲೆಯಲ್ಲಿ ಅವರು ಭಾರತದಲ್ಲಿದ್ದಾರೆ .ಸಾಮಾನ್ಯ ಭೌದ್ಧರ ಸನ್ಯಾಸಿ ರಾಜಕೀಯದಲ್ಲಿ ನಾನು ಹಸ್ತಕ್ಷೇಪ ಮಾಡಬಾರದು ಎಂದು ನಾನು ಭಾವಿಸುತ್ತೇನೆ . ಅದಕ್ಕಾಗಿಯೇ ಸ್ಥಳೀಯ ,ರಾಜಕೀಯ ಸಂಕೀರ್ಣತೆಗಳ ಭಾಗವಾಗಲು ಇಷ್ಟವಿಲ್ಲ , ಚೀನಾದಲ್ಲಿ ವಿವಿಧ ಜನಾಂಗೀಯ ಗುಂಪುಗಳಿದ್ದರೂ .. ಹಾನ್ ಸಮುದಾಯ ಹೆಚ್ಚು ಪ್ರಾಭಲ್ಯ , ನಿಯಂತ್ರಣ ಹೊಂದಿದೆ ಇದು ಸತ್ಯ ಎಂದು ಸ್ಪಷ್ಟಪಡಿಸಿದರು .

- Advertisement -

Latest Posts

Don't Miss