ಚಿತ್ರದುರ್ಗ : ಕೊರೋನಾ (corona) ಮಹಾಮಾರಿ ಇಂದಾಗಿ ಕಳೆದೆರಡು ವರ್ಷಗಳಿಂದ ಸರಳ ಆಚರಣೆಯನ್ನು ಮಾಡಲಾಗಿತ್ತು ಆದರೆ ದೈವಕೃಪೆ ಅಂತೆ ಈ ವರ್ಷವು ಅದ್ದೂರಿಯಿಂದ ಜಾತ್ರೆ (jatre) ನಡೆಯಿತು ಭಕ್ತರ ಮೊಗ-ಮನದಲ್ಲಿ ಹರ್ಷ ತುಂಬಿತ್ತು. ಜಾತ್ರೆ ಅಂದರೆ ಪೂಜೆ ಸಂಭ್ರಮ ಇವೆರಡು ರೂಗಳು ಹೊರತಾಗಿ ಕಲಾತಂಡಗಳ ವಿಶೇಷ ಆಚರಣೆಯಿಂದ ಹೆಸರಾಗುತ್ತವೆ.ಅಂತಹ ವಿಶಿಷ್ಟ ಜಾತ್ರೆಗಳಲ್ಲಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ (Sri Guru Tippereduswamy) ಯ ಜಾತ್ರೆ ಕೂಡ ಒಂದು ಈ ಜಾತ್ರೆಯ ಮತ್ತೊಂದು ವಿಶೇಷತೆ ಅಂದರೆ ಕೊಬ್ಬರಿ ಸುಟ್ಟು ಹರಕೆ ತೀರಿಸುವುದು. ರಥಕ್ಕೆ ವಿವಿಧ ಹೂವು ಗಳ ಅಲಂಕಾರ ಭಕ್ತರ ಹರ್ಷೋದ್ಗಾರ ಕೊಬ್ಬರಿ ಸುಟ್ಟು ಸ್ವಾಮಿಯ ಆರಾಧನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕು (Childekere Taluk of Chitradurga District) ನಾಯಕನಹಟ್ಟಿ (nayakanahatti) ತಿಪ್ಪೇರುದ್ರಸ್ವಾಮಿ ಯ ಜಾತ್ರೆಯಲ್ಲಿ ಕಂಡುಬಂದ ದೃಶ್ಯವಿದು. 15ನೇ ಶತಮಾನದ ಪವಾಡ ಪುರುಷ ಸಮಾಜ ಸೇವಕ ತಿಪ್ಪೇರುದ್ರಸ್ವಾಮಿ ಯ ಜಾತ್ರೆಯನ್ನು ಇಂದಿಗೂ ಕೋಟೆನಾಡಿನ ಜನ ಜಾತಿಭೇದವಿಲ್ಲದೆ ಪೂಜಿಸುತ್ತಾ ಬರುತ್ತಿದ್ದಾರೆ .ಪಾಲ್ಗುಣ ಮಾಸದ ಚಿತ್ತ ನಕ್ಷತ್ರದಂದು ಸ್ವಾಮಿಯ ಹೆಸರಿನಲ್ಲಿ ಉತ್ಸವ ಮಾಡಲಾಗುತ್ತದೆ. ಈ ಜಾತ್ರೆ ಗೆ ಬರುವ ಜನ ಕೊಬ್ಬರಿ ಸುಟ್ಟು ಸ್ವಾಮಿಗೆ ಪೂಜೆ ಸಲ್ಲಿಸುವುದು ವಿಶೇಷ .ತಿಪ್ಪೇರುದ್ರಸ್ವಾಮಿ ರಾಯದುರ್ಗದಿಂದ ನಾಯಕನಹಟ್ಟಿ ಯತ್ತಾ ಹೊರಡುವ ವೇಳೆಗೆ ರಾತ್ರಿಯಾದ ಕಾರಣ ಸ್ವಾಮಿಯ ಭಕ್ತ ಪಣಿಯಾಪ್ಪ ಒಣಕೊಬ್ಬರಿ ಗಳನ್ನು ಸುಟ್ಟು ದಾರಿದೀಪವಾಗುತ್ತನೆ ಎಂಬ ನಂಬಿಕೆ ಇದೆ. ಹೀಗಾಗಿ ತಿಪ್ಪೇರುದ್ರಸ್ವಾಮಿ ಯ ಹೆಸರಿನಲ್ಲಿ ಕೊಬ್ಬರಿ ಸುಟ್ಟು ಹರಕೆ ತೀರಿಸುತ್ತಾರೆ. ಜಾತ್ರೆ ಮತ್ತೊಂದು ವಿಶೇಷವೆಂದರೆ ದೊಡ್ಡ ರಥೋತ್ಸವದ ಮುಕ್ತಿ ಬಾವುಟ ಹರಾಜು ಮಾಡಲಾಗುತ್ತದೆ .ಸುಮಾರು ವರ್ಷಗಳಿಂದ ಮುಕ್ತಿ ಬಾವುಟ ಹರಾಜು ಮಾಡುವ ಪದ್ಧತಿ ಇದ್ದು ಲಕ್ಷಾಂತರ ರೂಪಾಯಿಗೆ ಭಕ್ತರೂ ಖರೀದಿಸುತ್ತಾರೆ …ನಂತರ ನಡೆಯೋ ರಥೋತ್ಸವಕ್ಕೆ ಸಾಂಸ್ಕೃತಿಕ ಕಲಾತಂಡಗಳು ಮೆರುಗು ನೀಡುತ್ತವೆ ರಾಜ್ಯದ ಮೂಲೆಮೂಲೆಗಳಿಂದ ಹಾಗೂ ಹೊರರಾಜ್ಯಗಳಿಂದಲೂ ಭಕ್ತರು ಆಗಮಿಸಿ ಸ್ವಾಮಿಗೆ ಪೂಜೆಯನ್ನು ಸಲ್ಲಿಸಿ ಭಕ್ತಿ-ಭಾವದಲ್ಲಿ ಮಿಂದೇಳುತ್ತಾರೆ. ಒಟ್ಟಾರೆಯಾಗಿ ಮೆಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರೆ ರಾಜ್ಯದ ಅತಿ ದೊಡ್ಡ ಜಾತ್ರೆಗಳಲ್ಲಿ ಒಂದಾಗಿದೆ…. ಮಾಡಿದಷ್ಟು ನೀಡು ಭಿಕ್ಷೆ ಎಂಬ ವಾಕ್ಯ ಕೊಬ್ಬರಿ ಸುಟ್ಟು ಹರಕೆ ತಿಳಿಸುವುದು ಮುಕ್ತಿ ಬಾವುಟ ಹರಾಜು ಪದ್ಧತಿಗಳಿಂದ ಜಾತ್ರೆ ವಿಭಿನ್ನವಾಗಿದೆ.
ಆಂಜನೇಯ ಎಚ್, ಕರ್ನಾಟಕ ಟಿವಿ, ಚಿತ್ರದುರ್ಗ.