Friday, July 11, 2025

Latest Posts

Raichur : ಮೀನುಗಾರಿಕೆ ನಂಬಿಕೊಂಡ ಸುಮಾರು 50 ಕುಟುಂಬಗಳು ಬೀದಿಗೆ..!

- Advertisement -

ರಾಯಚೂರು : ಅಲ್ಲಿ‌ ಅಧಿಕಾರಿಗಳ ದಿವ್ಯ‌ ನಿರ್ಲಕ್ಷಕ್ಕೆ ಮೀನುಗಳ ಮಾರಣಹೋಮವೇ (death of fish) ನಡೆದುಹೋಗಿದೆ. ಇನ್ನೂ ಪೂರ್ಣಗೊಳ್ಳದ ಕಾಲುವೆಗೆ ರಾತ್ರೋ ರಾತ್ರಿ ನೀರು ಹರಿಸಿದ್ದಕ್ಕೆ ಎಲ್ಲವೂ ಕೊಚ್ಚಿ 50 ಕುಟುಂಬ ಬೀದಿಗೆ ಬಂದಿವೆ . ಹೀಗೆ ಒಡೆದು ಹೋಗಿರೊ ಕಾಲುವೆ ನೀರಲ್ಲಿ ವಿಲವಿಲನೆ ಒದ್ದಾಡ್ತಿರೊ ಮೀನುಗಳೆಲ್ಲಾ ರಾಯಚೂರು (Raichur) ತಾಲ್ಲೂಕಿನ ಮನ್ಸಲಾಪುರ (Mansalapur) ಕೆರೆಯದ್ದು, ಇದೇ ಮನ್ಸಲಾಪುರ ಸಹಕಾರಿ ಸಂಘದಿಂದ ಲಕ್ಷಾಂತರ ರೂ.ವೆಚ್ಚದಲ್ಲಿ ಮತ್ಸ್ಯ ಕೃಷಿ ಮಾಡಲಾಗಿದೆ. ಇಲ್ಲಿನ ಮೀನುಗಳ ಮಾರಾಟಕ್ಕೆ ಗುತ್ತಿಗೆದಾರರು ಇದ್ದಾರೆ. ಪ್ರತಿ ವರ್ಷ ಹಂತಹಂತವಾಗಿ ಮೀನುಗಳನ್ನು ಹಿಡಿದು ಮಾರಾಟ ಮಾಡಲಾಗುತ್ತದೆ. ಆದ್ರೆ ಬೇಸಿಗೆಯಲ್ಲಿ ಅತೀ ಹೆಚ್ಚು ಮೀನುಗಳ ಮಾರಾಟವಾಗುತ್ತೆ. ಅದ್ರಲ್ಲೂ ಮಾರ್ಚ್ ನಲ್ಲೇ ಹೆಚ್ಚಾಗಿ ಮೀನುಗಳ ಡಿಮ್ಯಾಂಡ್ ಇರತ್ತೆ..ಹೀಗಾಗಿ ಈ ಮನ್ಸಲಾಪುರ ಕೆರೆಯ ಮೀನುಗಾರಿಕೆ ನಂಬಿಕೊಂಡೇ ಸುಮಾರು 50 ಕುಟುಂಬಗಳು ಬದುಕುತ್ತಿವೆ. ಅದರಂತೆ ಇನ್ನೋಂದೆರಡು ದಿನಗಳಲ್ಲಿ ಮೀನು ಹಿಡಿಯೋ ಕೆಲಸ ಶುರುವಾಗೋದಿತ್ತು, ಅಷ್ಟರಲ್ಲಾಗಲೇ ರಾತ್ರೋ ರಾತ್ರಿ ಕೆಬಿಜೆಎನ್ಎಲ್ ಅಧಿಕಾರಿಗಳ (KBJNL officers) ಎಡವಟ್ಟಿನಿಂದ ಲಕ್ಷಾಂತರ ಮೀನುಗಳ ಮಾರಣಹೋವೇ ನಡೆದುಹೋಗಿದೆ. ಹೌದು ಮನ್ಸಲಾಪುರ ಕೆರೆಯಲ್ಲಿ ಈ ಬಾರೀ ಸುಮಾರು 16 ಮೀನುಗಳನ್ನು ಬಿಡಲಾಗಿತ್ತು. ಕರೋನಾ (corona) ಸಂಕಷ್ಟದ ಮಧ್ಯೆ ಮೀನುಗಾರರು ಈ ಬಾರೀ ಒಳ್ಳೆಯ ಆದಾಯದ ನಿರೀಕ್ಷೆಯಲ್ಲಿದ್ರು. ಆದ್ರೆ ಕೆಬಿಜೆಎನ್ ಎಲ್ ಅಧಿಕಾರಿಗಳು,ಇನ್ನೂ ಕಾಮಗಾರಿ ಪೂರ್ಣಗೊಳ್ಳದ ನಾರಾಯಣಪುರ ಬಲದಂಡೆ ಕಾಲುವೆಗೆ ನಿನ್ನೆ ರಾತ್ರೋ ರಾತ್ರಿ ನೀರು ಬಿಡಲಾಗಿದೆ. ಈ ಕಾಲುವೆಗೂ ಮನ್ಸಲಾಪುರ ಕೆರೆ ನಡುವೆ ಸಂಪರ್ಕವಿದೆ. ಹೀಗಾಗಿ ಅರ್ಧಂಬರ್ಧ ನಿರ್ಮಾಣವಾಗಿರೊ ಕಾಲುವೆಗೆ ಹರಿಸಿದ ನೀರು ನೇರವಾಗಿ ಮನ್ಸಲಾಪುರ ಕೆರೆಗೆ ಹರಿದುಹೋಗಿತ್ತು. ಆಗ ಹೊಸ ನೀರು ಬರ್ತಿದ್ದಂತೆ ಲಕ್ಷಾಂತರ ಮೀನುಗಳು,ಕಾಲುವೆ ನೀರಿನತ್ತ ಹೋಗ್ತಿವೆ. ಕೆರೆಯ ವಿರುದ್ಧ ದಿಕ್ಕಿನಲ್ಲಿ ನೀರನ‌ ಜೊತೆ ಮೀನುಗಳು ಹೋಗ್ತಿವೆ. ಈಗಾಗಲೇ ಸುಮಾರು‌ 50 ಕಿಮಿ ದೂರಕ್ಕೆ ಕಾಲುವೆ ನೀರಿನ ಜೊತೆ ಲಕ್ಷಾಂತರ ಮೀನುಗಳು ಹೋಗಿವೆ..ಅಲ್ಲದೇ ಏಕಾಏಕಿ ನೀರು ಹರಿದ ಪರಿಣಾಮ ಈಗಾಗಲೇ ಲಕ್ಷಾಂತರ ಮೀನುಗಳು ಸತ್ತುಹೋಗಿವೆ. ಹೀಗಾಗಿ ಕೈಗೆ ಬಂದ ತುತ್ತು ಬಾಯಿಗೆ ಬರ್ಲಿಲ್ಲ ಅಂತ ಮೀನುಗಾರರು ಕಣ್ಣೀರಿಡ್ತಿದ್ದಾರೆ. ಮೀನುಗಳ ಮಾರಣಹೋಮ ಅಷ್ಟೇ ಅಲ್ಲ, ಇದೇ ಕಾಲುವೆ ಪಕ್ಕದ ತೋಟಗಳು ಕೂಡ ಇದೇ ನೀರಿ ನಿಂದಜಲಾವೃತಗೊಂಡು,ಬೆಳೆಹಾನಿಯಾಗಿದೆ..ಇದಕ್ಕೆಲ್ಲಾ ಕೆಬಿಜೆಎನ್ ಎಲ್ ಅಧಿಕಾರಿಗಳೇ ಕಾರಣ,ನಮಗೆ ಸೂಕ್ತ ಪರಿಹಾರ ಕೊಡಬೇಕು ಅಂತ ಮೀನುಗಾರರು ಹಾಗೂ ರೈತರು ಆಗ್ರಹಿಸಿದ್ದಾರೆ.

- Advertisement -

Latest Posts

Don't Miss