ಲಾರಾ ದಾಖಲೆ ಮುರಿದ ಗೇಲ್..!


ಯೂನಿವರ್ಸ್ ಬಾಸ್ ಅಂತಾನೇ ಫೇಮಸ್ ಆಗಿರುವ ವಿಂಡೀಸ್ ದೈತ್ಯ ಕ್ರಿಸ್ ಗೇಲ್ ಹೊಸ ದಾಖಲೆ ನಿರ್ಮಿಸಿದ್ದಾರೆ. ನಿನ್ನೆ ಭಾರತದ ಎದುರು ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ, ವೆಸ್ಟ್ ಇಂಡೀಸ್ ಪರ 300ನೇ ಏಕದಿನ ಪಂದ್ಯವನ್ನಾಡಿದ್ರು. ಈ ಮೂಲಕ ವಿಂಡೀಸ್ ಪರ 300 ಏಕದಿನ ಪಂದ್ಯಗಳನ್ನಾಡಿದಾಗ ಮೊದಲ ಬ್ಯಾಟ್ಸ್ ಮನ್ ಅನ್ನೋ ದಾಖಲೆ ನಿರ್ಮಿಸಿದ್ರು. ಅಷ್ಟೇ ಅಲ್ಲದೇ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ನಿರ್ಮಿಸಿದ್ರು. ಈ ಹಿಂದೆ ಬ್ರಿಯಾನ್ ಲಾರ ವಿಂಡೀಸ್ ಪರ 299 ಏಕದಿನ ಪಂದ್ಯಗಳಿಂದ 10405 ರನ್ ಗಳಿಸಿದ್ರು. ಸದ್ಯ ವಿಂಡೀಸ್ ಪರ 300 ಏಕದಿನ ಪಂದ್ಯಗಳನ್ನಾಡಿರುವ ಗೇಲ್ 10408 ರನ್ ಕಲೆ ಹಾಕಿದ್ದಾರೆ.

https://www.youtube.com/watch?v=Yyw6zr1EuCM

About The Author