Tuesday, April 15, 2025

Latest Posts

ವೆಬ್‌ಸೈಟ್ ಮೂಲಕವೇ ಸಿನಿಮಾ ಟಿಕೆಟ್ ಮಾರಾಟ: ಹೊಸ ರೂಲ್ಸ್

- Advertisement -

ಸಿನಿಮಾ ನೋಡಬೇಕು ಅಂದರೆ, ಥಿಯೇಟರ್‌ಗೆ ಹೋಗಿ ಕ್ಯೂನಲ್ಲಿ ನಿಂತು ಟಿಕೆಟ್ ಖರೀದಿ ಮಾಡುತ್ತೇವೆ. ಕೆಲವರು ಆನ್‌ಲೈನ್ ವೆಬ್‌ಸೈಟ್ ಮೂಲಕ ಸಿನಿಮಾ ಟಿಕೆಟ್ ಬುಕ್ ಮಾಡುತ್ತಾರೆ. ಇದು ಹಲವು ವರ್ಷಗಳಿಂದ ನಡೆದು ಬಂದಿರುವ ಪದ್ಧತಿ. ಆದರೆ, ಈಗ ಈ ಎರಡೂ ಪದ್ಧತಿಗಳಿಗೂ ಶೀಘ್ರದಲ್ಲೇ ತಿಲಾಂಜಲಿ ಇಡಲಾಗುತ್ತಿದೆ. ಸರ್ಕಾರದ ಆನ್‌ಲೈನ್ ಪ್ಲಾಟ್‌ಫಾರಂ ಮೂಲಕವೇ ಸಿನಿಮಾ ಟಿಕೆಟ್ ಮಾರಾಟ ಮಾಡಲಾಗುತ್ತದೆ.

ಈ ಹೊಸ ನೀತಿಗೆ ಸಿನಿಮಾರಂಗದಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಯಾಕಂದ್ರೆ, ಸರ್ಕಾರ ಕೇವಲ ಟಿಕೆಟ್‌ಗಳನ್ನಷ್ಟೇ ಮಾರಾಟ ಮಾಡುವುದಿಲ್ಲ. ಬದಲಾಗಿ, ಎಷ್ಟು ಶೋಗಳನ್ನು ಪ್ರದರ್ಶನ ಮಾಡಬೇಕು. ಒಂದು ಟಿಕೆಟ್‌ಗೆ ಎಷ್ಟು ಹಣ ನಿಗದಿ ಮಾಡಬೇಕು ಅನ್ನುವುದನ್ನೂ ಸರ್ಕಾರವೇ ನಿರ್ಧರಿಸಲಿದೆ. ಅಂದ ಹಾಗೆ ಈ ಹೊಸ ರೂಲ್ಸ್ ಕರ್ನಾಟಕಕ್ಕೆ ಅನ್ವಯಿಸುವುದಿಲ್ಲ. ಆಂಧ್ರದ ಸಿಎಂ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರ ಈ ಹೊಸ ನೀತಿಯನ್ನು ಜಾರಿಗೆ ಮಾಡಿದೆ.
ಸರ್ಕಾರದಿಂದಲೇ ಸಿನಿಮಾ ಟಿಕೆಟ್ ಮಾರಾಟ ಆಂಧ್ರ ಪ್ರದೇಶ ಸರ್ಕಾರ ಬುಧವಾರ (ನವೆಂಬರ್ 24) ಸಿನಿಮಾ ಟಿಕೆಟ್ ವಿತರಣೆಗೆ ಸಂಬಂಧಿಸಿದಂತೆ ಹೊಸ ನೀತಿಯನ್ನು ಜಾರಿಗೆ ತಂದಿದೆ. ಸರ್ಕಾರದ ಆನ್‌ಲೈನ್ ವೇದಿಕೆ ಮೂಲಕವೇ ಚಿತ್ರಮಂದಿರಗಳು ಆನ್‌ಲೈನ್ ಟಿಕೆಟ್ ಮಾರಾಟ ಮಾಡುವುದು ಕಡ್ಡಾಯಗೊಳಿಸುವ ಮಸೂದೆಗೆ ಆಂಧ್ರದ ವಿಧಾನಸಭೆಯಲ್ಲಿ ಅಂಗೀಕಾರ ಸಿಕ್ಕಿದೆ. ಇಂದು ವಿಧಾನ ಪರಿಷತ್‌ನಲ್ಲಿ ಈ ಹೊಸ ಮಸೂದೆಯನ್ನು ಸರ್ಕಾರ ಪ್ರಸ್ತಾಪಿಸಲಿದೆ. ಈ ಮೂಲಕ ಆಂಧ್ರದಲ್ಲಿ ಸಿನಿಮಾ ಟಿಕೆಟ್ ಮಾರಾಟ ಹಕ್ಕು ಸರ್ಕಾರದ ಪಾಲಾಗಲಿದೆ. ಆಂಧ್ರ ಪ್ರದೇಶದ ಸಿನಿಮಾ ರೆಗ್ಯೂಲೇಷನ್ ಕಾಯ್ದೆ ಅಡಿಯಲ್ಲಿ ಈ ಮಸೂದೆಯನ್ನು ಜಾರಿಗೆ ತರಲಾಗಿದೆ.

- Advertisement -

Latest Posts

Don't Miss