ಬೆಂಗಳೂರು: ರಾಜೀನಾಮೆ ನೀಡಿ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಲು ಹೊರಟಿರುವ ಕಾಂಗ್ರೆಸ್-ಜೆಡಿಎಸ್ ನ ಅತೃಪ್ತ ಶಾಸಕರಿಗೆ ಸಿಎಲ್ ಪಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ. ರಾಜೀನಾಮೆ ವಾಪಸ್ ಪಡೆಯಿರಿ ಇಲ್ಲದಿದ್ರೆ ಮುಂದಾಗೋ ಪರಿಣಾಮಗಳನ್ನು ಎದುರಿಸಬೇಕಾಗುತ್ತೆ ಅಂತ ವಾರ್ನಿಂಗ್ ನೀಡಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಲ್ ಪಿ ನಾಯಕ ಸಿದ್ದರಾಮಯ್ಯ, ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಇನ್ನಿಲ್ಲದ ಪ್ರಯತ್ನ ಮಾಡ್ತಿದೆ. ತನ್ನ ಅಧಿಕಾರ ಹಾಗೂ ಹಣ ಬಲದಿಂದ ನಮ್ಮ ಶಾಸಕರನ್ನು ಸೆಳೆಯೋ ಮೂಲಕ ಸರ್ಕಾರವನ್ನು ಅಸ್ಥಿರಗೊಳಿಸೋದಕ್ಕೆ ಮುಂದಾಗಿದ್ದಾರೆ. ಈ ಹಿಂದೆ ಸುಮಾರು ಬಾರಿ ಬಿಜೆಪಿ ಇಂತಹ ಪ್ರಯತ್ನ ಮಾಡಿ ವಿಫಲವಾಗಿದೆ. ಶಾಸಕರನ್ನು ಸೆಳೆಯಲು ಹಣದ ಆಮಿಷವೊಡ್ಡುತ್ತಿರೋ ಬಿಜೆಪಿಗೆ ಅಷ್ಟೊಂದು ದುಡ್ಡು ಎಲ್ಲಿಂದ ಬರುತ್ತೆ ಅಂತ ಸಿದ್ದರಾಮಯ್ಯ ಇದೇ ವೇಳೆ ಪ್ರಶ್ನಿಸಿದ್ರು. ಅಲ್ಲದೆ ಮುಂಬೈನಲ್ಲಿ ಬೀಡುಬಿಟ್ಟಿರುವ ಅತೃಪ್ತ ಶಾಸಕರು ಮತ್ತೆ ಪಕ್ಷಕ್ಕೆ ಮರಳಿ ಬಂದ್ರೆ ಅವರನ್ನು ಸ್ವಾಗತಸಿತ್ತೇವೆ. ಇಲ್ಲವಾದಲ್ಲಿ ಅವರೆಲ್ಲರ ಅನರ್ಹತೆಗಾಗಿ ಸ್ಪೀಕರ್ ರವರಿಗೆ ದೂರು ನೀಡುತ್ತೇವೆ ಎಂದರು. ಹೀಗೆ ದೂರು ನೀಡಿದ್ರೆ ಪಕ್ಷದ ಯಾವುದೇ ಸ್ಥಾನದಲ್ಲಿ ಉಳಿಯೋದಕ್ಕೂ ಸಾಧ್ಯವಿಲ್ಲ ಜೊತೆಗೆ ಮುಂದಿನ 6 ವರ್ಷಗಳ ವರೆಗೂ ಯಾವುದೇ ಚುನಾವಣೆಯಲ್ಲಿ ಭಾಗವಹಿಸುವಂತಿಲ್ಲ ಅಂತ ಸಿದ್ದು ಇದೇ ವೇಳೆ ಸ್ಪಷ್ಟಪಡಿಸಿದ್ರು.
ಹೀಗಾಗಿ ಅತೃಪ್ತ ಶಾಸಕರು ತಮ್ಮ ರಾಜೀನಾಮೆ ವಾಪಸ್ ಪಡೆದುಕೊಂಡು ಬನ್ನಿ ಅಂತ ಕಡೆ ಅವಕಾಶ ನೀಡಿದ್ದಾರೆ. ಅಲ್ಲದೆ ಬಿಜೆಪಿ ನಡೆಸುತ್ತಿರೋ ಷಡ್ಯಂತ್ರವನ್ನು ಖಂಡಿಸಿ ಗಾಂಧಿ ಪ್ರತಿಮೆ ಬಳಿ ಒಂದು ಗಂಟೆ ಕಾಲ ಧರಣಿ ನಡೆಸಿ ಬಳಿಕ ಸ್ಪೀಕರ್ ಗೆ ದೂರು ನೀಡಲಿದ್ದೇವೆ ಅಂತ ಸಿದ್ದರಾಮಯ್ಯ ಹೇಳಿದ್ರು.
ದೇವೇಗೌಡರ ಪುತ್ರನ ಸರ್ಕಾರಕ್ಕೆ ಸಂಕಷ್ಟ..! ಮಿಸ್ ಮಾಡದೇ ಈ ವಿಡಿಯೋ ನೋಡಿ