ಹುಬ್ಬಳ್ಳಿ: ದೇಶಾದ್ಯಂತ ಇಂದು ಭಾರತ್ ಬಂದ್ ಗೆ ಕರೆ ನೀಡಿರುವ ರೈತರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಈ ಮಧ್ಯೆ ಭಾರತ ಬಂದ್ ಮಾಡಿ ಜನರಿಗೆ ತೊಂದರೆ ನೀಡುವ ಕೆಲಸ ಮಾಡಬಾರದು ಅಂತ ಸಿಎಂ ಬಸವರಾಜ ಬೊಮ್ಮಾಯಿ ಜನರಲ್ಲಿ ಮನವಿ ಮಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಸಿಎಂ ಬಸವರಾಜ ಬೊಮ್ಮಾಯಿ, ಜನರು ಈಗಷ್ಟೆ ಕೊರೋನಾ ಹೊಡೆತದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ನಿಮ್ಮ ವೈಚಾರಿಕತೆಯ ಹಿನ್ನೆಲೆಯಲ್ಲಿ ಹೋರಾಟ ಮಾಡಿ ಆದ್ರೆ, ಮತ್ತೆ ಈ ರೀತಿ ಬಂದ್ ಮಾಡಿ ಜನರಿಗೆ ಮತ್ತಷ್ಟು ತೊಂದರೆ ನೀಡಬೇಡಿ ಅಂತ ತಿಳಿಸಿದ್ದಾರೆ.
ಇನ್ನು ಬಳಿಕ ಕಾಂಗ್ರೆಸ್ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಕಾಂಗ್ರೆಸ್ ಗುಲಾಮಗಿರಿ ಪಾರ್ಟಿಯಾಗಿದೆ. ಅಲ್ಲದೇ ಬಿಜೆಪಿ ಆಡಳಿತ ನೋಡಿ ಮಾಜಿ ಸಿಎಂ ಸಿದ್ಧರಾಮಯ್ಯ ಹತಾಶರಾಗಿದ್ದಾರೆ. ಈ ಹಿಂದೆ ಅವರು ನಿಭಾಯಿಸಿದ ಸ್ಥಾನಕ್ಕೂ ಈಗ ನಡೆದುಕೊಳ್ಳದ್ದಕ್ಕೂ ತಕ್ಕದಲ್ಲ ಅಂತ ಸಿದ್ದು ವಿರುದ್ಧ ಬೊಮ್ಮಾಯಿ ವಾಗ್ದಾಳಿ ನಡೆಸಿದ್ರು.
ಕರ್ನಾಟಕ ಟಿವಿ, ಹುಬ್ಬಳ್ಳಿ