ಬೆಂಗಳೂರು : ಇಂದು ಜಿಲ್ಲಾ ಪಂಚಾಯಿತಿ (District Panchayat) ಸಿಇಒ(CEO) ಗಳ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಗಳನ್ನು ಸಿಎಂ ಬಸವರಾಜ ಬೊಮ್ಮಾಯಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ವಿವಿಧ ಸರ್ಕಾರಿ ಯೋಜನೆಗಳ ಅನುಷ್ಠಾನದಲ್ಲಿ ವಿಳಂಬ ಮತ್ತು ನಿರ್ಲಕ್ಷ ತೋರಿದ ಅಧಿಕಾರಿಗಳಿಗೆ ಚಾಟಿ ಬೀಸಿದರು. ಜಲಜೀವನ್ ಮಿಷನ್(Jalajeevan Mission), ಬೆಳೆಪರಿಹಾರ , ನೆರೆ ಪರಿಹಾರ ಸೇರಿ ಹಲವು ಜನಪರ ಯೋಜನೆಗಳಡಿ ಪ್ರಗತಿ ಸಾಧಿಸದ ಅಧಿಕಾರಿಗಳ ಬೆಂಡೆತ್ತಿದ ಸಿಎಂ ಜನಪರ ಯೋಜನೆಗಳನ್ನು ಸರಿಯಾಗಿ ಜಾರಿಗೊಳಿಸಿದ ಮತ್ತು ಕಾಟಾಚಾರಕ್ಕೆ ವರದಿ ಒಪ್ಪಿಸಿದ ಅಧಿಕಾರಿಗಳ ಮೈ ಚಳಿ ಬಿಡಿಸಿದರು.



