ಕನ್ನಡ ಚಿತ್ರರಂಗದಲ್ಲೀಗ ಏಕಾಏಕೀ ಬಾಷೆಗಳ ಸಮರ ಶುರುವಾಗಿದೆ. ಹಿಂದಿ ರಾಷ್ಟç ಭಾಷೆಯಲ್ಲ ಎಂಬ ಕಿಚ್ಚನ ಹೇಳಿಕೆಗೆ ಬಾಲಿವುಡ್ ನಟ ಅಜಯ್ ದೇವ್‌ಗನ್ ಕೊಟ್ಟ ಉತ್ತರಕ್ಕೆ ಈಗ ಪ್ರತಿಯೊಬ್ಬ ಕನ್ನಡಿಗನೂ ಕೆರಳಿದ್ದಾನೆ.
ಅಷ್ಟೇ ಅಲ್ಲ ಇದೀಗ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಹ ಕಿಚ್ಚನ ಹೇಳಿಕೆಗೆ ಸಾಥ್ ಕೊಟ್ಟಿದ್ದಾರೆ. ಹಿಂದಿ ರಾಷ್ಟç ಭಾಷೆಯಲ್ಲ ಎಂಬ ಕಿಚ್ಚನ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿರೋ ಸಿಎಮ್ ಬೊಮ್ಮಾಯಿ, ಹಿಂದಿ ರಾಷ್ಟç ಭಾಷೆಯಾದರೆ ನಿಮ್ಮ ಸಿನಿಮಾಗಳನ್ನೇಕೆ ಹಂದಿ ಭಾಷೆಗೆ ಡಬ್ ಮಾಡಿ ರಿಲೀಸ್ ಮಾಡುತ್ತೀರಿ ಎಂಬ ಅಜಯ್ ದೇವ್‌ಗನ್ ಪ್ರಶ್ನೆಗೆ ಸಿಎಮ್ ಪತ್ಯುತ್ತರ ನೀಡಿದ್ದಾರೆ.
ರಾಷ್ಟçಭಾಷೆ, ಮಾತೃಭಾಷೆ ಎಂದು ಯಾವುದೊಂದು ಭಾಷೆಗೂ ಕರೆಯಲಾಗದು. ಭಾಷಾವಾರು ಪ್ರಾಂತಗಳಾದ ಮೇಲೆಎಲ್ಲಾ ಭಾಷೆಯೂ ಮಾತೃಭಾಷೆಯೇ. ಎಲ್ಲಾ ಭಾಷೆಗಳಿಗೂ ಅದರದ್ದೇ ಆದ ಆದ್ಯತೆ ಇದೆ. ನಮ್ಮ ರಾಜ್ಯದಲ್ಲಿ ಕನ್ನಡವೇ ಸಾರ್ವಬೌಮ, ಇದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಕಿಚ್ಚನ ಹೇಳಿಕೆ ಸರಿಯಾಗಿದೆ ಎಂದು ಹೇಳಿದರು.
ಇನ್ನು ಈ ಟ್ವೀಟ್ಸಮರ ಶುರುವಾದ ಬೆನ್ನಲ್ಲೇ ಮಾಜಿ ಸಿಎಮ್ ಸಿದ್ಧರಾಮಯ್ಯ ಟ್ವೀಟ್ ಮಾಡಿ ಹಿಂದಿ ಎಂದೂ ನಮ್ಮ ರಾಷ್ಟç ಭಾಷೆ ಆಗಿರಲಿಲ್ಲ, ಆಗುವುದೂ ಇಲ್ಲ ಎಂದು ಅಜಯ್
ದೇವ್‌ಗನ್ ವಿರುದ್ಧ ಅಕ್ರೋಷ ವ್ಯಕ್ತಪಡಿಸಿದ್ದಾರೆ. ಇದೀಗ ಹೆಚ್.ಡಿ ಕುಮಾರಸ್ವಾಮಿ ಅವರೂ ಸಹ ಸರಣಿ ಟ್ವೀಟ್‌ಗಳ ಮೂಲಕ ಬಿಟೌನ್ ಅಜಯ್ ದೇವ್‌ಗನ್‌ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ನಳಿನಾಕ್ಷಿ, ಕರ್ನಾಟಕ ಟಿವಿ