ಬೆಂಗಳೂರು: ಮೈತ್ರಿ ಸರ್ಕಾರವನ್ನು ಪತನಗೊಳಿಸೋ ನಿಟ್ಟಿನಲ್ಲಿ ಬಿಜೆಪಿ ಮೈತ್ರಿ ಶಾಸಕರಿಗೆ 10 ಕೋಟಿ ನೀಡುವ ಆಮಿಷವೊಡ್ಡಿ ಸೆಳೆಯಲು ಡೀಲ್ ಮಾಡ್ತಿದೆ ಅಂತ ಸಿಎಂ ಕುಮಾರಸ್ವಾಮಿ ಸ್ಫೋಟಕ ಮಾಹಿತಿ ಹೊರಹಾಕಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ, ರಾತ್ರಿ 11 ಗಂಟೆಗೆ ಬಿಜೆಪಿಯ ಪ್ರಮುಖ ಮುಖಂಡರು ಮೈತ್ರಿ ಶಾಸಕರಿಗೆ ಕರೆ ಮಾಡಿ ಈಗಾಗಲೇ ಮೈತ್ರಿ ಪಕ್ಷದ 10 ಮಂದಿ ಶಾಸಕರು ಬಿಜೆಪಿ ಸೇರ್ಪಡೆಗೆ ಸಿದ್ಧವಾಗಿದ್ದಾರೆ. ನೀವು ಬರೋದಾದರೆ 10 ಕೋಟಿ ಕೊಡಿಸುತ್ತೇವೆಂದು ಆಮಿಷವೊಡ್ಡುತ್ತಿದ್ದಾರೆ ಅಂತ ಕುಮಾರಸ್ವಾಮಿ ಬಿಜೆಪಿ ವಿರುದ್ಧ ಆರೋಪ ಮಾಡಿದ್ದಾರೆ.
ಇನ್ನು ಮೈತ್ರಿ ಸರ್ಕಾರ ಪತನಗೊಳಿಸೋದಕ್ಕೆ ಬಿಜೆಪಿ ಶತಃ ಪ್ರಯತ್ನ ನಡೆಸ್ತಿದೆ ಆದ್ರೆ ಅವರು ಏನೇ ಮಾಡಿದ್ರೂ ಸರ್ಕಾರ ಬೀಳೋದಿಲ್ಲ. ಹಾಗೆ ಯಾವೊಬ್ಬ ಶಾಸಕರೂ ಬಿಜೆಪಿಗೆ ಹೋಗೋದಿಲ್ಲ ಅಂತ ಇದೇ ವೇಳೆ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ರು.
ಅತೃಪ್ತರನ್ನು ಸಮಾಧಾನಪಡಿಸೋದಕ್ಕೆ ಕಾಂಗ್ರೆಸ್ ಹೊಸ ಫಾರ್ಮುಲಾ..!ಮಿಸ್ ಮಾಡದೇ ಈ ವಿಡಿಯೋ ನೋಡಿ