Monday, December 11, 2023

Latest Posts

ನಟ ಯಶ್ ತಾಯಿ ಪುಷ್ಪಾ ಮೇಲಿನ ಎಫ್ಐಆರ್ ರದ್ದು

- Advertisement -

ಬೆಂಗಳೂರಿನಲ್ಲಿ: ರಾಕಿಂಗ್ ಸ್ಟಾರ್ ಯಶ್ ಬಾಡಿಗೆ ಮನೆ ಡ್ಯಾಮೇಜ್ ವಿವಾದ ಕುರಿತಂತೆ ಯಶ್ ತಾಯಿ ವಿರುದ್ಧ ದಾಖಲಾಗಿದ್ದ ಎಫ್ ಐಆರ್ ರದ್ದುಗೊಳಿಸಿ ಹೈಕೋರ್ಟ್ ಆದೇಶ ನೀಡಿದೆ.

ಬಾಡಿಗೆ ಮನೆ ಖಾಲಿ ಮಾಡುವ ವೇಳೆ ಮನೆಯ ಒಳಗೆ ಕಪಾಟುಗಳು, ಕಮೋಡ್, ಸಿಂಕ್ , ಟೈಲ್ಸ್ ಸೇರಿದಂತೆ ಇತರೆಡೆ ಡ್ಯಾಮೇಜ್ ಮಾಡಿದ್ರು ಅಂತ ಆರೋಪಿಸಲಾಗಿತ್ತು. ಮನೆಯ ಬಾಡಿಗೆ ಒಪ್ಪಂದ ಯಶ್ ತಾಯಿ ಪುಷ್ಪಾರ ಹೆಸರಲ್ಲಿದ್ದಿದ್ರಿಂದ ಅವರ ಮೇಲೆ ಮನೆ ಮಾಲೀಕ ಮುನಿಪ್ರಸಾದ್ ದಂಪತಿ ಗಿರಿನಗರ ಠಾಣೆಯಲ್ಲಿ ದೂರು ನೀಡಿದ್ರು. ಈ ಹಿನ್ನೆಲೆಯಲ್ಲಿ ಪುಷ್ಪಾರ ಮೇಲೆ ಎಫ್ಐಆರ್ ದಾಖಲಾಗಿತ್ತು. ಆದ್ರೆ ತಮ್ಮ ವಿರುದ್ಧ ದಾಖಲಾಗಿರೋ ಎಫ್ ಐಆರ್ ರದ್ದುಗೊಳಿಸಿ ಅಂತ ಯಶ್ ತಾಯಿ ಪುಷ್ಪಾ ಹೈಕೋರ್ಟ್ ಮೊರೆ ಹೋಗಿದ್ರು. ಈ ಅರ್ಜಿ ಕುರಿತಾದ ವಿಚಾರಣೆ ನಡೆಸಿದ ಉಚ್ಛನ್ಯಾಯಾಲಯ ಇದೀಗ ಎಫ್ಐಆರ್ ರದ್ದುಗೊಳಿಸುವಂತೆ ಆದೇಶಿಸಿದೆ.

ಟ್ರಾಲ್ ಮಾಡೋರಿಗೆ ಜೋಡೆತ್ತುಗಳು ಕೊಡ್ತಿದ್ದಾರೆ ಸೈಲೆಂಟಾಗೇ ಉತ್ತರ..! ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=rp80gR6BIb4

- Advertisement -

Latest Posts

Don't Miss