ಫೈವ್ ಸ್ವಾರ್ ಹೋಟೆಲ್ ಗೆ ಸಿಎಂ ಟಾಟಾ…!!

ಬೆಂಗಳೂರು:  ಮೈತ್ರಿ ಸರ್ಕಾರದಲ್ಲಿ ಅಪಸ್ವರ ಶಮನ ಮಾಡೋದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ನೀಡಿದ್ದ ಸಲಹೆಯನ್ನು ಸಿಎಂ ಕುಮಾರಸ್ವಾಮಿ ಚಾಚೂ ತಪ್ಪದೇ ಪಾಲಿಸುತ್ತಿದ್ದಾರೆ.

ಕಾಂಗ್ರೆಸ್ ಶಾಸಕರು ಸಿಎಂ ಮೇಲೆ ಮುನಿಸಿಕೊಂಡಿದ್ದಕ್ಕೆ ಸಲಹೆ ನೀಡಿದ್ದ  ಸಿದ್ದರಾಮಯ್ಯ ನೀವು ಮೊದಲು ಈ ಫೈವ್ ಸ್ಟಾರ್ ಹೋಟೆಲ್ ಬಿಟ್ಟು ಸರ್ಕಾರಿ ವಸತಿ ಗೃಹಕ್ಕೆ ಶಿಫ್ಟ್ ಆಗಿ ಅಂತ ಹೇಳಿದ್ರು. ಅಲ್ಲದೆ ಇದರಿಂದ ನಿಮ್ಮನ್ನ ಭೇಟಿ ಮಾಡೋ ಜನರಿಗೂ ಅವಕಾಶ ಸಿಗುತ್ತೆ ಅಂತ ಹೇಳಿದ್ರು. ಇದಕ್ಕೆ ತಲೆಯಾಡಿಸಿದ್ದ ಸಿಎಂ ಕುಮಾರಸ್ವಾಮಿ ಇದೀಗ ತಮ್ಮ ವಾಸ್ತವ್ಯವನ್ನು ಬದಲಿಸಲು ನಿರ್ಧರಿಸಿದ್ದಾರೆ. ತಾಜ್ ವೆಸ್ಟೆಂಡ್ ನಲ್ಲಿ ತಂಗುತ್ತಿದ್ದ ಸಿಎಂ ಇನ್ಮುಂದೆ ಸರ್ಕಾರಿ ಬಂಗಲೆಯಲ್ಲಿ ವಾಸಿಸಲಿದ್ದಾರೆ.

ಇನ್ನು ಸಿಎಂ ಕುಟಂಬದವರಿಂದಲೂ ಸಹ ಪಂಚತಾರಾ ಹೋಟೆಲ್ ನಲ್ಲಿ ವಾಸ್ತವ್ಯದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಹೀಗಾಗಿ ಸಿಎಂ ಮಾಡಿರೋ ಈ ನಿರ್ಧಾರ ಎಷ್ಟರಮಟ್ಟಿಗೆ ವರ್ಕೌಟ್ ಆಗಲಿದೆ ಅನ್ನೋದನ್ನ ಕಾದುನೋಡಬೇಕಿದೆ.

ರಮ್ಯಾ ಮೇಡಂಗೆ ಫುಲ್ ಕ್ಲಾಸ್….!! ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=CrDIFbdLbaA

About The Author