Friday, June 2, 2023

Latest Posts

ಕೊಡಗಿನಲ್ಲಿ ಈ ವರ್ಷವೂ ಆಗುತ್ತಂತೆ ಅನಾಹುತ…!!

- Advertisement -

ಕೊಡಗು: ಜಿಲ್ಲೆಯ ಮಕ್ಕಂದೂರಿನಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಮಳೆಯಿಂದಾಗಿ ಅನಾಹುತವಾಬಹುದು ಅನ್ನೋ ಮಾಹಿತಿ ಹೊರಬಿದ್ದಿದೆ. ಈ ಹಿನ್ನೆಲೆಯಲ್ಲಿ ಮಕ್ಕಂದೂರು ಪ್ರದೇಶಕ್ಕೆ ಬರುವ ಪ್ರವಾಸಿಗರಿಗೆ ಹೋಂ ಸ್ಟೇ ಬುಕ್ಕಿಂಗ್ ಸ್ಥಗಿತಗೊಳಿಸಲಾಗಿದೆ. 

ಕಳೆದ ವರ್ಷ ಸುರಿದ ಧಾರಾಕಾರ ಮಳೆಯಿಂದಾಗಿ ಕೊಡಗು ಜಿಲ್ಲೆ ಅಕ್ಷರಶಃ ತತ್ತರಿಸಿಹೋಗಿತ್ತು. ಗುಡ್ಡಗಳ ಮೇಲಿನ ವಸತಿ ಪ್ರದೇಶಗಳೂ ಸೇರಿದಂತೆ ಜಮೀನು, ತೋಟಗಳೆಲ್ಲವೂ ಕೊಚ್ಚಿಹೋಗಿ, ಸಾವಿರಾರು ಜನರು ನಿರಾಶ್ರಿತರಾಗಿದ್ದರು. 

ಆದ್ರೆ ಈ ಬಾರಿಯೂ ಸುರಿಯುವ ಮಳೆಗೆ ಇದೇ ಪರಿಸ್ಥಿತಿ ಎದುರಾಗುತ್ತೆ ಅನ್ನೋ ಮಾಹಿತಿಯನ್ನ ತಜ್ಞರು ನೀಡಿದ್ದಾರೆ. ತಜ್ಞರ ಈ ಸೂಚನೆ ಹಿನ್ನೆಲೆಯಲ್ಲಿ ಮಕ್ಕಂದೂರು ಪ್ರದೇಶದಲ್ಲಿನ ಎಲ್ಲಾ ಹೋಂ ಸ್ಟೇಗಳ ಬುಕ್ಕಿಂಗ್ ಸ್ಥಗಿತಗೊಳಿಸಲು ಗ್ರಾಮ ಪಂಚಾಯ್ತಿ ಪಿಡಿಓ ಆದೇಶಿಸಿದ್ದಾರೆ. ಪ್ರವಾಸಿಗಳ ಸುರೃಕ್ಷತೆ ದೃಷ್ಟಿಯಿಂದಾಗಿ ಈ  ಕ್ರಮ ಕೈಗೊಂಡಿರೋದಾಗಿ ಪಿಡಿಓ ತಿಳಿಸಿದ್ದಾರೆ.

ಇಂದಿರಾ ಗಾಂಧಿಯವರ ಮದುವೆ ಜಾತಕ ಹೇಗಿತ್ತು…? ಮಿಸ್ ಮಾಡದೇ ಈ ವಿಡಿಯೋ ನೋಡಿ

- Advertisement -

Latest Posts

Don't Miss