ಬೆಂಗಳೂರು: ರಾಜ್ಯ ದೋಸ್ತಿ ಸರ್ಕಾರ ಅಸ್ಥಿರತೆಯ ನಡುವೆಯೂ ಪೊಲೀಸರಿಗೆ ಸಿಹಿ ಸುದ್ದಿ ನೀಡಿದೆ. ಔರಾದ್ಕರ್ ವರದಿ ಜಾರಿಗೆ ಮುಂದಾಗಿರುವ ಸರ್ಕಾರ ಪೊಲೀಸರ ವೇತನ ಹೆಚ್ಚಳಕ್ಕೆ ಗ್ರೀನ್ ಸಿಗ್ನಲ್ ನೀಡಿದೆ.
ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಔರಾದ್ಕರ್ ವರದಿ ಜಾರಿ ಮಾಡುವ ಮೂಲಕ ದೋಸ್ತಿ ಸರ್ಕಾರ ಪೊಲೀಸರ ಬಹುದಿನಗಳ ಬೇಡಿಕೆ ಪೂರೈಸಿದೆ. ಈಗಾಗಲೇ ಸಿಎಂ ಎಚ್.ಡಿ ಕುಮಾರಸ್ವಾಮಿ ಔರಾದ್ಕರ್ ವರದಿಗೆ ಸಹಿ ಹಾಕಿದ್ದು ಪೊಲೀಸರ ವೇತನ ಪರಿಷ್ಕರಣೆಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಈ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿ ಸರ್ಕಾರದ ಅಸ್ಥಿರತೆಯ ನಡುವೆಯೂ ಖಾಕಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.
ಔರಾದ್ಕರ್ ವರದಿಯ ಶಿಫಾರಸ್ಸಿನಂತೆ ಪೊಲೀಸರ ವೇತನವನ್ನು ಶೇಕಡಾ 12.5ರಷ್ಟು ಹೆಚ್ಚಳ ಮಾಡಿ ಸರ್ಕಾರ ಆದೇಶಿಸಿದ್ದು ಈಗಾಗಲೇ ಆರ್ಥಿಕ ಇಲಾಖೆಗೆ ಕಡತ ಸಲ್ಲಿಸಲಾಗಿದೆ. ಇನ್ನು ಈ ವರದಿ ಜಾರಿಯಿಂದಾಗಿ ಸರ್ಕಾರಕ್ಕೆ ಹೆಚ್ಚುವರಿ 630 ಕೋಟಿ ಹೊರೆಯಾಗಲಿದೆ. ಪೊಲೀಸರ ವೇತನ ಪರಿಷ್ಕರಣೆ, ಸೌಲಭ್ಯ ವಿಸ್ತರಣೆ ಸೇರಿದಂತೆ ಇತ್ಯಾದಿಗಳ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ ನಿವೃತ್ತಿಯಾಗಿರುವ ಪೊಲೀಸರೂ ಸಹ ವೇತನ ಪರಿಷ್ಕರಣೆಗೆ ಒಳಪಡಲಿದ್ದು, ಪಿಂಚಣಿ ಹೆಚ್ಚಳವಾಗಲಿದೆ.
ಟ್ರಾಫಿಕ್ ರೂಲ್ಸ್ ಪಾಲಿಸದಿದ್ರೆ ನಿಮ್ಮ ಜೇಬಲ್ಲ, ಬ್ಯಾಂಕ್ ಅಕೌಂಟ್ ನಲ್ಲಿರೋ ದುಡ್ಡೂ ಖಾಲಿಯಾಗೋದು ಗ್ಯಾರೆಂಟಿ..! ಮಿಸ್ ಮಾಡದೇ ಈ ವಿಡಿಯೋ ನೋಡಿ