Wednesday, June 7, 2023

Latest Posts

‘ನಾನು ಯಾರಿಗೂ ಸವಾಲ್ ಹಾಕಿಲ್ಲ- ಸುಪ್ರೀಂಕೋರ್ಟ್ ಗಿಂತ ನಾನು ದೊಡ್ಡವನಲ್ಲ’- ಸ್ಪೀಕರ್ ರಮೇಶ್ ಕುಮಾರ್

- Advertisement -

ಕೋಲಾರ: ಅತೃಪ್ತ ಶಾಸಕರ ಅರ್ಜಿ ಕುರಿತ ತೀರ್ಪು ನಾಳೆಗೆ ಕಾಯ್ದಿರಿಸಿರುವ ಕುರಿತು ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ. ನಾನು ಯಾರಿಗೂ ಸವಾಲ್ ಹಾಕಿಲ್ಲ, ನಾಳಿನ ತೀರ್ಪು ನೋಡಿ ಪ್ರತಿಕ್ರಿಯಿಸ್ತೀನಿ ಅಂತ ಹೇಳಿದ್ದಾರೆ.

ಕೋಲಾರದಲ್ಲಿ ಮಾತನಾಡಿದ ಸ್ಪೀಕರ್ ರಮೇಶ್ ಕುಮಾರ್, ನಾನು ಸುಪ್ರೀಂಕೋರ್ಟ್ ಗಿಂತಲೂ ದೊಡ್ಡವನಲ್ಲ. ಅತೃಪ್ತ ಶಾಸಕರ ಅರ್ಜಿ ವಿಚಾರವಾಗಿ ಸುಪ್ರೀಂ ಕೋರ್ಟ್ ನಲ್ಲಿ ಇಂದು ವಾದ ಮಂಡನೆಯಾಗಿದೆ. ಅದರ ಅಂತಿಮ ತೀರ್ಪು ಹೊರಬೀಳುವವರೆಗೂ ನಾನು ಮಾತನಾಡುವುದಿಲ್ಲ ಎಂದರು.

ಇನ್ನು ಶಾಸಕರ ವಿಚಾರಣೆ, ಅನರ್ಹತೆ ವಿಚಾರ ಕುರಿತಾಗಿ ಪ್ರತಿಕ್ರಿಯಿಸಿದ ಸ್ಪೀಕರ್, ನನಗೆ ಕೊಟ್ಟಿರುವ ಜವಾಬ್ದಾರಿಯನ್ನು ನಾನು ನಿರ್ವಹಿಸುತ್ತೇನೆ. ಇದು ಸುಪ್ರೀಂ ಕೋರ್ಟ್ ಮತ್ತು ನನ್ನ ನಡುವಿನ ಸಂಘರ್ಷವಲ್ಲ ಅಂತ ರಮೇಶ್ ಕುಮಾರ್ ಇದೇ ವೇಳೆ ಸ್ಪಷ್ಟಪಡಿಸಿದೆ. ಸುಪ್ರೀಂ ಕೋರ್ಟ್ ಶಾಸಕರ ಕುರಿತಾಗಿ ಸ್ಪೀಕರ್ ನಾಳಿನ ತೀರ್ಪು ಹೊರಬೀಳುವವರೆಗೂ ಯಥಾಸ್ಥಿತಿ ಕಾಪಾಡುವಂತೆ ಸೂಚನೆ ನೀಡಿದೆ.

ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ರೆ, ನಿಮ್ಮ ಜೇಬಲ್ಲ, ಬ್ಯಾಂಕ್ ಅಕೌಂಟಲ್ಲಿರೋ ದುಡ್ಡೂ ಖಾಲಿ ಮಾಡ್ಕೊಳ್ತೀರಾ ಎಚ್ಚರ..! ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=jttCnosRy_k
- Advertisement -

Latest Posts

Don't Miss