Thursday, December 5, 2024

Latest Posts

‘ನಾನ್ಯಾಕೆ ರಾಜೀನಾಮೆ ಕೊಡಬೇಕು?’- ಸಿಎಂ ಕುಮಾರಸ್ವಾಮಿ

- Advertisement -

ಬೆಂಗಳೂರು: ಶಾಸಕರ ಸಾಲು ಸಾಲು ರಾಜೀನಾಮೆಯಿಂದ ಸರ್ಕಾರ ಸಂಖ್ಯಾಬಲವನ್ನೇ ಕಳೆದುಕೊಂಡಿದ್ದು ಸಿಎಂ ರಾಜೀನಾಮೆ ನೀಡಬೇಕು ಅನ್ನೋ ಬಿಜೆಪಿ ಒತ್ತಾಯಕ್ಕೆ ಪ್ರತಿಕ್ರಿಯೆ ನೀಡಿರೋ ಕುಮಾರಸ್ವಾಮಿ, ನಾನೇಕೆ ರಾಜೀನಾಮೆ ಕೊಡಬೇಕು ಅಂತ ಪ್ರಶ್ನಿಸಿದ್ದಾರೆ.

ಬೆಂಗಳೂರಿನ ಕೆ.ಕೆ ಗೆಸ್ಟ್ ಹೌಸ್ ಬಳಿ ಕಾಂಗ್ರೆಸ್ ನಾಯಕರೊಂದಿಗೆ ಚರ್ಚೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಎಚ್. ಡಿ ಕುಮಾರಸ್ವಾಮಿ, ನಾನ್ಯಾಕೆ ರಾಜೀನಾಮೆ ಕೊಡಬೇಕು, ಅಂತಹ ಅಗತ್ಯವಾದ್ರೂ ಏನಿದೆ ಅಂತ ಪ್ರಶ್ನಿಸಿದ್ರು. ಇನ್ನು ಬಿಜೆಪಿಯ ರಾಜೀನಾಮೆ ನೀಡಬೇಕೆನ್ನುವ ಒತ್ತಾಯ ಕುರಿತಂತ ಮಾತನಾಡಿದ ಸಿಎಂ, 2009-10ರಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದ ಸಮಯದಲ್ಲಿ 18 ಮಂದಿ ಶಾಸಕರು ರಾಜೀನಾಮೆ ನೀಡಿ ಬೆಂಬಲ ವಾಪಸ್ ಪಡೆದಿದ್ರು. ಆ ವೇಳೆ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ರಾ ಅಂತ ಪ್ರಶ್ನಿಸಿದ ಸಿಎಂ, ನಾನು ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವವಾಗೋದಿಲ್ಲ ಅಂತ ಹೇಳಿದ್ದಾರೆ.

ಇನ್ನು ಸರ್ಕಾರ ಉಳಿಸಿಕೊಳ್ಳೋ ನಿಟ್ಟಿನಲ್ಲಿ ದೋಸ್ತಿ ನಾಯಕರ ಕಸರತ್ತು ಮುಂದುವರಿಸಿದ್ದು ನಾನಾ ಆಯಾಮಗಳಲ್ಲಿ ಚರ್ಚೆ ನಡೆಸುತ್ತಿದ್ದಾರೆ.

- Advertisement -

Latest Posts

Don't Miss