ಬೆಂಗಳೂರು: ವಿಧಾನ ಮಂಡಲ ಕಲಾಪದಲ್ಲಿ ಇಂದು ಸಿಎಂ ಕುಮಾರಸ್ವಾಮಿ ತಮ್ಮ ದೃಢ ನಿರ್ಧಾರ ಹೇಳಿಕೊಂಡಿದ್ದಾರೆ. ಸರ್ಕಾರ ಉಳಿಸಿಕೊಳ್ಳೋ ನಿಟ್ಟಿನಲ್ಲಿ ಸಿಎಂ ವಿಶ್ವಾಸಮತ ಯಾಚನೆಗೆ ನಾನು ಸಿದ್ಧ ಅಂತ ಘೋಷಿಸಿದ್ದಾರೆ. ಹೀಗಾಗಿ ಬಿಜೆಪಿ ನಾಯಕರು ಇದೀಗ ಕಂಗಾಲಾಗಿದ್ದು ತಮ್ಮ ಶಾಸಕರನ್ನು ಸೇಫ್ ಮಾಡಿಕೊಳ್ತಿದ್ದಾರೆ.
ಅತೃಪ್ತ ಶಾಸಕರು ಮುಂಬೈನಲ್ಲಿ ವಾಸ್ತವ್ಯ ಹೂಡಿರುವ ಮಧ್ಯೆಯೇ ದೋಸ್ತಿಗಳು ಅಧಿವೇಶನ ನಡೆಸಿದ್ದಾರೆ, ತಮ್ಮನ್ನು ಧಿಕ್ಕರಿಸಿ ಹೋದೋರಿಗೆ ತಕ್ಕ ಪಾಠ ಕಲಿಸಬೇಕೆಂದುಕೊಂಡಿರೋ ಮೈತ್ರಿ ನಾಯಕರು ಅವರ ಅನರ್ಹತೆಗೂ ಅರ್ಜಿ ಹಾಕಿದ್ದಾರೆ. ಈ ಬೆನ್ನಲ್ಲೆ ಸಿಎಂ ತಾವು ವಿಶ್ವಾಸಮತ ಯಾಚನೆ ಮಾಡೋದಾಗಿ ಘೋಷಿಸಿದ್ದು ಸ್ಪೀಕರ್ ರಮೇಶ್ ಕುಮಾರ್ ರವರ ಬಳಿ ವಿಶ್ವಾಸಮತ ಸಾಬೀತುಪಡಿಸಲು ಸಮಯ ಕೋರಿದ್ದಾರೆ.
ಇನ್ನು ತಾವು ಆಪರೇಷನ್ ಕಮಲ ಮಾಡುತ್ತಿಲ್ಲ, ಬದಲಾಗಿ ಶಾಸಕರೇ ಸರ್ಕಾರದ ವಿರುದ್ಧ ಮುನಿಸಿಕೊಂಡು ರಾಜೀನಾಮೆ ನೀಡಿದ್ದಾರೆ ಅಂತ ಹೇಳ್ತಿದ್ದ ಬಿಜೆಪಿಗೆ, ಸಿಎಂ ವಿಶ್ವಾಸಮತ ಯಾಚನೆ ಮಾಡೋದಾಗಿ ಘೋಷಣೆ ಮಾಡುತ್ತಿದ್ದಂತೆಯೇ ಟೆನ್ಶನ್ ಶುರುವಾಗಿದೆ. ಎಲ್ಲಿ ಮೈತ್ರಿ ನಾಯಕರು ರಿವರ್ಸ್ ಆಪರೇಷನ್ ಮಾಡ್ತಾರೋ ಅನ್ನೋ ಭೀತಿಯಿಂದಾಗಿ ಇದೀಗ ಬಿಜೆಪಿ ನಾಯಕರು ತಮ್ಮೆಲ್ಲಾ ಶಾಸಕರನ್ನು ರೆಸಾರ್ಟ್ ವಾಸ್ತವ್ಯದಲ್ಲಿಡಲು ಸಿದ್ಧತೆ ನಡೆಸುತ್ತಿದ್ದಾರೆ.
ಒಟ್ಟಾರೆ ಇಷ್ಟೆಲ್ಲಾ ಅಡ್ಡಿಆತಂಕಗಳ ನಡುವೆಯೂ ಸಿಎಂ ಕುಮಾರಸ್ವಾಮಿ ದಿಟ್ಟವಾಗಿ ವಿಶ್ವಾಸಮತ ಯಾಚನೆ ಮಾಡ್ತೀನಿ ಅಂತ ಘೋಷಣೆ ಮಾಡಿರೋದು ಸಾಕಷ್ಟು ಕುತೂಲ ಕೆರಳಿಸಿದೆ.
ಹಳ್ಳಿಹಕ್ಕಿ ರಾಜೀನಾಮೆಗೆ ಇದೇ ಕಾರಣವಂತೆ..!ಮಿಸ್ ಮಾಡದೇ ಈ ವಿಡಿಯೋ ನೋಡಿ