ರಾಯಚೂರು: ಅಹವಾಲು ನೀಡೋಕೆ ಬಂದ ಜನರ ಮೇಲೆ ಸಿಎಂ ಕುಮಾರಸ್ವಾಮಿ ಕೂಗಾಡಿದ್ದಾರೆ. ವೋಟ್ ಮಾತ್ರ ಮೋದಿಗೆ, ಕೆಲಸಕ್ಕೆ ನಾನು ಬೇಕಾ ಅಂತ ಸಿಡಿಮಿಡಿಕೊಂಡು ಜನರನ್ನೇ ಪ್ರಶ್ನಿಸಿದ್ದಾರೆ. ರಾಜ್ಯದ ಎಲ್ಲಾ ವರ್ಗದ ಜನರನ್ನು ತಲುಪಬೇಕು ಅನ್ನೋ ಉದ್ದೇಶದಿಂದ ಸಿಎಂ ನಡೆಸ್ತಿರೋ ಗ್ರಾಮವಾಸ್ತವ್ಯ ಇದೀಗ ಅರ್ಥ ಕಳೆದುಕೊಂಡಂತಾಗಿದೆ
ಸಿಎಂ ಎರಡನೇ ದಿನದ ಗ್ರಾಮವಾಸ್ತವ್ಯ ಕೈಗೊಳ್ಳುತ್ತಿದ್ದಂತೆಯೇ ಅದ್ಯಾಕೋ ಸಹನೆ ಕಳೆದುಕೊಂಡಿದ್ದಾರೆ. ಬೆಳಗ್ಗಿನಿಂದ ಜನರ ಸಮಸ್ಯೆಯನ್ನು ತಾಳ್ಮೆಯಿಂದ ಆಲಿಸಿದ ಸಿಎಂ, ಜನ ಕೇಳಿದ್ದಕ್ಕೆಲ್ಲಾ ಓಕೆ ಓಕೆ ಅಂತ ಹೇಳಿದ್ರು. ಆದ್ರೆ ರಾಯಚೂರು ಜಿಲ್ಲೆಯ ಕೆರೇಗುಡ್ಡದಲ್ಲಿ ಗ್ರಾಮವ್ಯಾಸ್ತವ್ಯಕ್ಕೆ ತೆರಳುತ್ತಿದ್ದಾಗ ಸಿಎಂ ಪ್ರಯಾಣಿಸುತ್ತಿದ್ದ ಬಸ್ ನನ್ನು ವೈಟಿಪಿಎಸ್ ಸಿಬ್ಬಂದಿ ತಡೆದು ತಮ್ಮ ಅಹವಾಲು ನೀಡೋದಕ್ಕೆ ಮುಂದಾದ್ರು. ಆದ್ರೆ ಇದಕ್ಕೆ ಆಕ್ರೋಶಗೊಂಡ ಕುಮಾರಸ್ವಾಮಿ,’ವೋಟ್ ಮೋದಿಗೆ ಹಾಕ್ತೀರಾ, ಸಮಸ್ಯೆ ಮಾತ್ರ ನಾವ್ ಬಗೆಹರಿಸ್ಬೇಕಾ..? ಲಾಠಿ ಚಾರ್ಜ್ ಮಾಡಿಸ್ಬೇಕಾ ನಿಮ್ಮ ಮೇಲೆ? ನಿಮಗೆಲ್ಲಾ ಮರ್ಯಾದೆ ಕೊಡ್ಬೇಕಾ?’ ಅಂತ ಜನರ ಮೇಲೆ ಸಿಎಂ ಕೆಂಡಾಮಂಡಲರಾಗಿದ್ದಾರೆ. ಹೀಗಾಗಿ ಸಿಎಂ ಆದ್ರೂ ನಮ್ಮ ಸಮಸ್ಯೆ ಬಗೆಹರಿಸ್ತಾರೆ ಅಂತ ನಿರೀಕ್ಷೆಯಿಟ್ಟುಕೊಂಡಿದ್ದ ಜನರಿಗೆ ನಿರಾಸೆಯಾಗಿದೆ. ಅಲ್ಲದೆ ಸಿಎಂ ಕುಮಾರಸ್ವಾಮಿ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಸಿಎಂ ಕುಮಾರಸ್ವಾಮಿ ಪ್ರಥಮವಾಗಿ ಕೈಗೊಂಡಿದ್ದ ಗ್ರಾಮವಾಸ್ತವ್ಯ ಕಾರ್ಯಕ್ರಮವೇ ಅವರಿಗೆ ಸಾಕಷ್ಟು ಹೆಸರು ತಂದಿತ್ತು. ಜನರ ನಡುವೆ ಸಾಮಾನ್ಯರಂತೆ ವಾಸ್ತವ್ಯ ಹೂಡಿದ ಮೊದಲ ಸಿಎಂ ಅನ್ನೋ ಹೆಗ್ಗಳಿಕೆಯೂ ಕುಮಾರಸ್ವಾಮಿಯವರದ್ದಾಗಿತ್ತು. ಆದ್ರೆ ಇದೀಗ ಅದ್ಯಾವುದೋ ಕೋಪವನ್ನು ಗ್ರಾಮವಾಸ್ತವ್ಯದ ಸಂದರ್ಭದಲ್ಲಿ ಜನರ ಮೇಲೆ ತೋರ್ಪಡಿಸೋ ಮೂಲಕ ಸಿಎಂ ಗ್ರಾಮವಾಸ್ತವ್ಯದಿಂದ ಇಷ್ಟು ದಿನ ಗಳಿಸಿದ್ದ ಕೀರ್ತಿ ಇದೀಗ ನೀರಿನಲ್ಲಿ ಹುಣಸೇಹಣ್ಣು ತೊಳದಂತಾಗಿರೋದು ಮಾತ್ರ ಸುಳ್ಳಲ್ಲ. ಇನ್ನು ಪ್ರತಿಪಕ್ಷ ಬಿಜೆಪಿ ಈ ಘಟನೆಯ ಸಂಪೂರ್ಣ ಲಾಭವನ್ನು ಪಡೆಯಲೆತ್ನಿಸಿದ್ದು, ಈಗಾಗಲೇ ಟೀಕೆ ಶುರುವಿಟ್ಟುಕೊಂಡಿದೆ.
ರಾಜ್ಯದಲ್ಲಿ ಹೊಸ ಸರ್ಕಾರಕ್ಕೆ ಆಷಾಢ ಅಡ್ಡಿ..?ಶ್ರಾವಣಕ್ಕೆ ಸರ್ಕಾರ ರಚಿಸುತ್ತಾ ಬಿಜೆಪಿ..?ಮಿಸ್ ಮಾಡದೇ ಈ ವಿಡಿಯೋ ನೋಡಿ