Monday, December 11, 2023

Latest Posts

ಇದು ದೇಶದ ನಂಬರ್ 1 ಪೊಲೀಸ್ ಠಾಣೆ..!

- Advertisement -

ರಾಜಸ್ಥಾನ: ದೇಶದ ಅತ್ಯುತ್ತಮ ಪೊಲೀಸ್ ಠಾಣೆಗಳಲ್ಲಿ ರಾಜಸ್ಥಾನದ ಕಲು ಪೊಲೀಸ್ ಠಾಣೆ ನಂಬರ್ 1 ಸ್ಥಾನ ಪಡೆದುಕೊಂಡಿದೆ.

ರಾಜಸ್ಥಾನ ರಾಜ್ಯದ ಬಿಕಾನೇರ್ ಜಿಲ್ಲೆಯಲ್ಲಿರೋ ಕಲು ಪೊಲೀಸ್ ಠಾಣೆ ದೇಶದ ಬೆಸ್ಟ್ ಪೊಲೀಸ್ ಸ್ಟೇಷನ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಪರಾಧ ತಡೆ, ತನಿಖೆ, ದಕ್ಷತೆ, ಪ್ರಕರಣಗಳ ತ್ವರಿತ ವಿಲೇವಾರಿ, ಠಾಣೆಯಲ್ಲಿನ ಸೌಲಭ್ಯ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಕಲು ಪೊಲೀಸ್ ಠಾಣೆ ದೇಶದಲ್ಲಿ ನಂಬರ್ 1 ಸ್ಥಾನ ಪಡೆದುಕೊಂಡಿದೆ.

ಇನ್ನು ಸಾರ್ವಜನಿಕರ ಅಭಿಪ್ರಾಯ, ಕುಡಿಯೋ ನೀರಿನ ಸೌಲಭ್ಯ, ಮಹಿಳಾ ಸಹಾಯವಾಣಿ, ಸಿಬ್ಬಂದಿಗೆ ಹೆಚ್ಚುವರಿ ಸೌಲಭ್ಯಗಳು, ವೈಫೈ, ಸಿಸಿಟಿವಿ ಅಳವಡಿಕೆ ಸೇರಿದಂತೆ ಎಲ್ಲಾ ವಿಚಾರಗಳಲ್ಲೂ ಕಲು ಪೊಲೀಸ್ ಠಾಣೆ ಅಗ್ರ ಸ್ಥಾನ ಪಡೆದಿವೆ. ಅತ್ಯುತ್ತಮ ಪೊಲೀಸ್ ಠಾಣೆಯನ್ನು ಗುರುತಿಸಲು ದೇಶದ ಸುಮಾರು 15666 ಪೊಲೀಸ್ ಠಾಣೆಗಳ ಕುರಿತಾಗಿ ಅಧ್ಯಯನ ನಡೆಸಲಾಗಿತ್ತು. ಇನ್ನು ಈ ರ್ಯಾಂಕಿಂಗ್ ಪಟ್ಟಿಯನ್ನು ಗೃಹ ಸಚಿವಾಲಯ ನಿನ್ನೆ ಬಿಡುಗಡೆ ಮಾಡಿದ್ದು, ಕಲು ಪೊಲೀಸ್ ಸ್ಟೇಷನ್ ದೇಶದ ಇತರೆ ಪೊಲೀಸ್ ಠಾಣೆಗಳಿಗೆ ಮಾದರಿಯಾಗಿದೆ.

ಇದು ವಿಶ್ವದ ಅತಿ ದೊಡ್ಡ ಸ್ಟೇಡಿಯಂ..! ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=P1qhcweQR78
- Advertisement -

Latest Posts

Don't Miss