Saturday, April 12, 2025

Latest Posts

ಕಡೆಗೂ ಶಾಸಕ ಕುಮಟಳ್ಳಿ ಮನವೊಲಿಸಿದ ಸಿಎಂ- ಸಾಹುಕಾರ್ ಗೆ ಭರ್ಜರಿ ಆಫರ್..!?

- Advertisement -

ಬೆಂಗಳೂರು: ಅತೃಪ್ತ ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ ಜೊತೆ ಗುರುತಿಸಿಕೊಂಡಿದ್ದ ಮಹೇಶ್ ಕುಮಟಳ್ಳಿ ಮನವೊಲಿಲು ಸಿಎಂ ಕುಮಾರಸ್ವಾಮಿ ಸಫಲರಾಗಿದ್ದಾರೆ.

ವಿಧಾನಸೌಧದ ಸಿಎಂ ಕೊಠಡಿಯಲ್ಲಿ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಜೊತೆ ಸಿಎಂ ಕುಮಾರಸ್ವಾಮಿ ಚರ್ಚೆ ನಡೆಸಿದ್ರು. ಸುಮಾರು ಒಂದೂವರೆ ಗಂಟೆ ಕಾಲ ಚರ್ಚೆ ನಡೆಸಿದ ಕುಮಾರಸ್ವಾಮಿ ಕೊನೆಗೂ ಮಹೇಶ್ ಕುಮಟಳ್ಳಿ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ಸಂಪುಟದಿಂದ ಕೈಬಿಟ್ಟ ಹಿನ್ನೆಲೆಯಲ್ಲಿ ಅಸಮಾಧಾನಗೊಂಡು ಯಾವುದೇ ಸಮಯದಲ್ಲಾದ್ರೂ ಬಿಜೆಪಿಗೆ ಸೇರಬಹುದು ಅನ್ನೋ ಲೆಕ್ಕಾಚಾರದಲ್ಲಿರೋ ಶಾಸಕ ರಮೇಶ್ ಜಾರಕಿಹೊಳಿಗೆ ಇಂಧನ ಖಾತೆಯ ಆಫರ್ ನೀಡಿದ್ದಾರೆ ಎನ್ನಲಾಗಿದೆ.

ಅಲ್ಲದೆ ರಮೇಶ್ ಜಾರಕಿಹೊಳಿ ಆಪ್ತರಾಗಿರೋ ಅತೃಪ್ತ ಶಾಸಕರಿಗೂ ಸಿಎಂ ಕುಮಾರಸ್ವಾಮಿ ಭರ್ಜರಿ ಭರವಸೆ ನೀಡಿದ್ದಾರೆ. ಅತೃಪ್ತ ಶಾಸಕರ ಕ್ಷೇತ್ರಗಳಿಗೆ ಕೇಳಿದಷ್ಟು ಅನುದಾನ ನೀಡಲು ಸಿಎಂ ರೆಡಿಯಾಗಿದ್ದಾರೆ. ಶತಾಯಗತಾಯ ಅತೃಪ್ತರ ಮನವೊಲಿಸೋ ನಿಟ್ಟಿನಲ್ಲಿ ಸಿಎಂ ಕುಮಾರಸ್ವಾಮಿ ಶೀಘ್ರವೇ ಶಾಸಕ ರಮೇಶ್ ಜಾರಕಿಹೊಳಿ ಮತ್ತಿತರ ಶಾಸಕರೊಂದಿಗೆ ಸಭೆ ನಡೆಸಲಿದ್ದಾರೆ.

ನಿಖಿಲ್ ಸೋಲೋದಕ್ಕೆ ಇವರೇನಾ ಕಾರಣ…?ತಪ್ಪದೇ ಈ ವಿಡಿಯೋ ನೋಡಿ.

https://www.youtube.com/watch?v=LsmydDwEdrY
- Advertisement -

Latest Posts

Don't Miss