Tuesday, October 15, 2024

Latest Posts

ಕುಮಾರಸ್ವಾಮಿಗೆ ಸಿದ್ದು 5 ಸೂತ್ರ- ಇನ್ಮುಂದೆ ಬದಲಾಗ್ತಾರಂತೆ ಸಿಎಂ…!

- Advertisement -

ಬೆಂಗಳೂರು:  ದೋಸ್ತಿ ಸರ್ಕಾರ ಉಳಿಸಿಕೊಳ್ಳೋದಕ್ಕೆ ಮೈತ್ರಿ ನಾಯಕರು ರಾಜಕೀಯ ರಣತಂತ್ರದ ಮೊರೆ ಹೋಗ್ತಿದ್ದಾರೆ. ಈ ಮಧ್ಯೆ ಸಿದ್ದರಾಮಯ್ಯ ಸಿಎಂ ಕುಮಾರಸ್ವಾಮಿಗೆ ಕೆಲ ಸಲಹೆ ನೀಡೋ ಮೂಲಕ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳೋ ಪ್ರಯತ್ನ ಮಾಡ್ತಿದ್ದಾರೆ.

ಕಾಂಗ್ರೆಸ್ ಶಾಸಕರು ಮೈತ್ರಿ ವಿಚಾರವಾಗಿ ಅಷ್ಟೇನು ವಿರೋಧ ಮಾಡದಿದ್ರೂ ಕೆಲ ವಿಚಾರಗಳಿಂದಾಗಿ ಸಿಎಂ ಕುಮಾರಸ್ವಾಮಿ ಮತ್ತು ಜೆಡಿಎಸ್ ಮೇಲೆ ಮುನಿಸಿಕೊಂಡಿದ್ದಾರೆ.  ಹೀಗಾಗಿ ಎಲ್ಲಾ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇರೋದ್ರಿಂದ ಸಿದ್ದರಾಮಯ್ಯ ಸಿಎಂ ಕುಮಾರಸ್ವಾಮಿಗೆ ಒಂದಷ್ಟು ಸಲಹೆಗಳನ್ನ ನೀಡಿದ್ದಾರೆ.

ಕಾಂಗ್ರೆಸ್ ಶಾಸಕರ ಅಸಮಾಧಾನದ ಬಗ್ಗೆ ಗಮನ ಸೆಳೆದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಕಾಂಗ್ರೆಸ್ ಶಾಸಕರ ಕೆಲಸಗಳನ್ನು ಸಿಎಂ ಮಾಡಿಕೊಡುತ್ತಿಲ್ಲ. ಕಾಂಗ್ರೆಸ್ ಶಾಸಕರ ಫೈಲ್ ಗಳು ವಿಲೇವಾರಿಯಾಗುತ್ತಿಲ್ಲ, ಇದೇ ಕಾಂಗ್ರೆಸ್ ಶಾಸಕರ ಅಸಮಾಧಾನಕ್ಕೆ ಕಾರಣವಾಗಿದೆ.ಹೀಗಾಗಿ ತಕ್ಷಣ ಕಾಂಗ್ರೆಸ್ ಶಾಸಕರ ಕೆಲಸಗಳನ್ನ ಮಾಡಿಕೊಡಬೇಕು ಅಂತ ಸಲಹೆ ನೀಡಿದ್ದಾರೆ.

ಇನ್ನು ಕಾಂಗ್ರೆಸ್ ಶಾಸಕರಿಗೆ ಸಿಎಂ ಹೆಚ್ಚಿನ ಸಮಯ ನೀಡಬೇಕು. ಅವರ ಸಮಸ್ಯೆ ಮತ್ತು ಸಲಹೆಗಳನ್ನ ಆಲಿಸಬೇಕು. ಇದರಿಂದಾಗಿ ಶಾಸಕರು ಕೂಡ ಹೊಂದಿಕೊಂಡು ಹೋಗುವಂತಾಗುತ್ತೆ ಅಂತ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.

ಇನ್ನು ಪಂಚತಾರಾ ಹೋಟೆಲ್ ನಲ್ಲಿ ಸಿಎಂ ಭೇಟಿಗೆ ಸಾರ್ವಜನಿಕರು ಮತ್ತು ಶಾಸಕರಿಗೆ ನಿರ್ಬಂಧ ಇರೋ ಹಿನ್ನೆಲೆಯಲ್ಲಿ ಸಿಎಂ ಕುಮಾರಸ್ವಾಮಿ ಕೂಡಲೇ ತಮ್ಮ ವಾಸ್ತವ್ಯವನ್ನ ಸರ್ಕಾರಿ ವಸತಿಗೃಹಕ್ಕೆ ಬದಲಾಯಿಸಿಕೊಳ್ಳಬೇಕು. ಇದರಿಂದ ಸಾರ್ವನಿಕರಾಗಲೀ, ಶಾಸಕರಾಗಲಿ ನಿಮ್ಮನ್ನು ಭೇಟಿ ಮಾಡಲು ಸುಲಭವಾಗುತ್ತೆ ಅಂತಲೂ ಸಿದ್ದು ಸಲಹೆ ನೀಡಿದ್ದಾರೆ.

ಉಭಯ ಪಕ್ಷದ ಅಸಮಾಧಾನಿತ ಶಾಸಕರಿಗೆ ಸಚಿವ ಸ್ಥಾನ ನೀಡಿದರೆ ಆಪರೇಷನ್ ಕಮಲಕ್ಕೆ ಹೆದರೋ ಅಗತ್ಯವಿರೋದಿಲ್ಲ ಅಂತ ಸಿಎಂಗೆ ಸಿದ್ದು ಸ್ಪಷ್ಟಪಡಿಸಿದ್ದಾರೆ.

ಇನ್ನು ಮುಖ್ಯವಾಗಿ ಜೆಡಿಎಸ್ ನಾಯಕರು ವ್ಯತಿರಿಕ್ತ ಹೇಳಿಕೆ ನೀಡದಂತೆ ತಡೆಯಬೇಕು. ಇದರಿಂದಾಗಿ ಮೈತ್ರಿಗೆ ಧಕ್ಕೆಯುಂಟಾಗುತ್ತದೆ ಹೀಗಾಗಿ ಹೇಗಾದರೂ ಮಾಡಿ ಅವರಿಂದ ವ್ಯತಿರಿಕ್ತ ಹೇಳಿಕೆಗಳನ್ನು ತಡೆಯಿರಿ ಅಂತ ಸಿಎಂಗೆ ಸಲಹೆ ನೀಡಿದ್ದಾರೆ.

ಸಿದ್ದರಾಮಯ್ಯ ನೀಡಿದ ಎಲ್ಲಾ ಸಲಹೆಗಳಿಗೂ ಓಕೆ ಅಂದಿರೋ ಮುಖ್ಯಮಂತ್ರಿ ಕುಮಾರಸ್ವಾಮಿ, ಇನ್ನು ಮುಂದೆ ತಮ್ಮ ಕಾರ್ಯವೈಖರಿ ಬದಲಾಯಿಕೊಳ್ಳೋದಾಗಿ ಭರವಸೆ ನೀಡಿದ್ದಾರೆ. ಈ ಮೂಲಕ ಕಾಂಗ್ರೆಸ್ ಶಾಸಕರ ಸಿಎಂ ಕುಮಾರಸ್ವಾಮಿ ಮೇಲಿನ ಅಸಮಾಧಾನ ಶಮನವಾಗುತ್ತಾ ಅಂತ ಕಾಲವೇ ಉತ್ತರಿಸಲಿದೆ.

ಜನ ಕುಮಾರಸ್ವಾಮಿಗೆ ಸರಿಯಾದ ಪಾಠವನ್ನೇ ಕಲಿಸಿದ್ದಾರಂತೆ…! ಈ ವಿಡಿಯೋ ತಪ್ಪದೇ ನೋಡಿ.

https://www.youtube.com/watch?v=n9iiNZj7l3Q
- Advertisement -

Latest Posts

Don't Miss