Saturday, July 27, 2024

Latest Posts

ಕೊಬ್ಬರಿ ಮತ್ತು ಶೇಂಗಾ ಚಟ್ನಿ ಪುಡಿಯನ್ನು ಈ ರೀತಿ ತಯಾರಿಸಿ ನೋಡಿ..

- Advertisement -

ಚಟ್ನಿ ಪುಡಿ ಅಂದ್ರೆ ಉಪ್ಪಿನಕಾಯಿ ಇದ್ದಂಗೆ. ಉಪ್ಪಿನಕಾಯಿ ಜೊತೆಗಿದ್ರೆ ಹೇಗೆ ಊಟ ಇಷ್ಟವಾಗತ್ತೆ ಅಂತಾರೋ, ಅದೇ ರೀತಿ ಚಟ್ನಿ ಪುಡಿ ಇದ್ರೆ, ಚಪಾತಿ, ದೋಸೆ, ಇಡ್ಲಿ ರುಚಿಸುತ್ತೆ. ಹಾಗಾಗಿ ಇಂದು ನಾವು ಶೇಂಗಾ ಚಟ್ನಿ ಪುಡಿ ಮತ್ತು ಕೊಬ್ಬರಿ ಚಟ್ನಿ ಪುಡಿ ತಯಾರಿಸೋದು ಹೇಗೆ ಅಂತಾ ಹೇಳಲಿದ್ದೇವೆ..

 ಶೇಂಗಾ ಚಟ್ನಿ ಪುಡಿ: ಬೇಕಾಗುವ ಸಾಮಗ್ರಿ: ಒಂದು ಕಪ್ ಶೇಂಗಾಕಾಳು, ಒಂದು ಸ್ಪೂನ್ ಜೀರಿಗೆ, ಒಂದು ಸ್ಪೂನ್ ಕೊತ್ತೊಂಬರಿ ಕಾಳು, ಮೂರರಿಂದ ನಾಲ್ಕು ಬೆಳ್ಳುಳ್ಳಿ ಎಸಳು, 3 ಸ್ಪೂನ್ ಖಾರದ ಪುಡಿ, ಸಣ್ಣ ತುಂಡು ಹುಣಸೆಹಣ್ಣು, ಅರ್ಧ ಸ್ಪೂನ್ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಒಂದು ಪ್ಯಾನ್‌ನಲ್ಲಿ ಶೇಂಗಾ ಕಾಳು ಹಾಕಿ ಹುರಿದುಕೊಳ್ಳಿ, ನಂತರ ಅದೇ ಪ್ಯಾನ್‌ಗೆ ಎಣ್ಣೆ ಹಾಕಿ, ಬೆಳ್ಳುಳ್ಳಿ ಎಸಳನ್ನು ಹುರಿದುಕೊಳ್ಳಿ, ನಂತರ ಅದಕ್ಕೆ ಜೀರಿಗೆ, ಕೊತ್ತಂಬರಿ ಕಾಳು ಹಾಕಿ ಹುರಿದುಕೊಳ್ಳಿ. ಈಗ ಇದಕ್ಕೆ ಹುರಿದ ಶೇಂಗಾ, ಬೆಳ್ಳುಳ್ಳಿ, ಹುಣಸೆ ಹಣ್ಣು, ಖಾರದ ಪುಡಿ, ಉಪ್ಪು ಸೇರಿಸಿ ಮಿಕ್ಸ್ ಮಾಡಿ, ಮಿಕ್ಸಿ ಜಾರ್‌ಗೆ ಹಾಕಿ, ಪುಡಿ ಮಾಡಿದ್ರೆ ಶೇಂಗಾ ಚಟ್ನಿಪುಡಿ ರೆಡಿ.

ಕೊಬ್ಬರಿ ಚಟ್ನಿ ಪುಡಿ: ಬೇಕಾಗುವ ಸಾಮಗ್ರಿ: ಒಂದು ಕಪ್ ಒಣ ಕೊಬ್ಬರಿ ತುರಿ, ಅರ್ಧ ಕಪ್ ಶೇಂಗಾ, 5 ಎಸಳು ಬೆಳ್ಳುಳ್ಳಿ, ಒಂದು ಸ್ಪೂನ್ ಖಾರದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಒಂದು ಪ್ಯಾನ್‌ಗೆ ಕೊಬ್ಬರಿ ಹಾಕಿ ಹುರಿದುಕೊಳ್ಳಿ, ನಂತರ ಅದೇ ಪ್ಯಾನ್‌ಗೆ ಶೇಂಗಾ ಹಾಕಿ ಹುರಿದುಕೊಳ್ಳಿ. ಈ ಅದೇ ಪ್ಯಾನ್‌ಗೆ ಕೊಂಚ ಎಣ್ಣೆ ಹಾಕಿ, ಬೆಳ್ಳುಳ್ಳಿ ಹುರಿಯಬೇಕು. ಈಗ ಇದಕ್ಕೆ ಶೇಂಗಾ ಮತ್ತು ಕೊಬ್ಬರಿ ತುರಿ, ಖಾರದ ಪುಡಿ, ಉಪ್ಪು ಹಾಕಿ ಮಿಕ್ಸ್ ಮಾಡಿ, ಮಿಕ್ಸಿ ಜಾರ್‌ಗೆ ಹಾಕಿ ಹುರಿದರೆ, ಕೊಬ್ಬರಿ ಚಟ್ನಿ ಪುಡಿ ರೆಡಿ.

- Advertisement -

Latest Posts

Don't Miss