Dharwad News: ಧಾರವಾಡ: ಧಾರವಾಡದ ತಡಕೋಡ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಪ್ರಚಾರ ಸಭೆ ನಡೆದಿದ್ದು, ಸಭೆಯಲ್ಲಿ ಪ್ರಹ್ಲಾದ ಜೋಶಿ ಮತಯಾಚನೆ ಮಾಡಿದ್ದಾರೆ.
ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಸೀಮಾ ಮಸೂತಿ, ಅಮೃತ ದೇಸಾಯಿ, ಜೆಡಿಎಸ್ ಜಿಲ್ಲಾಧ್ಯಕ್ಷ ಗುರುರಾಜ ಹುಣಸೀಮರದ, ಇತರರು ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಮಾಜಿ ಶಾಸಕ ಅಮೃತ್ ದೇಸಾಯಿ, ಕಾಂಗ್ರೆಸ್ ಪಕ್ಷದ ಸುಳಿವ ಸರಿ ಇಲ್ಲ. ಕಾಂಗ್ರೆಸ್ ಪಕ್ಷಕ್ಕೆ 135 ಸೀಟು ಕೊಟ್ಟರು ಜನರು. ಅಧಿಕಾರ ಬಂದಾಗಿನಿಂದಲೂ ಬರಗಾಲ ಬಿದ್ದಿದೆ. ಯಡಿಯೂರಪ್ಪ ಅವರು ಮೈತ್ರಿ ಸರಕಾರದಲ್ಲಿ ಮಳೆ ಆಗಿದೆ. ಮಹಿಳೆಯರನ್ನ ಮರಳು ಮಾಡಿದ್ದಾರೆ ಕಾಂಗ್ರೆಸ್ ನವರು. ಮಹಿಳೆಯರಿಗೆ 2000 ರೂ ಕೊಟ್ಟಿದ್ದಾರೆ ಎಂದರು.
ಮೋದಿ ಅವರು ರೈತರ ಪರವಾಗಿ ಪರಿಹಾರವನ್ನ ಕೊಟ್ಟಿದ್ದಾರೆ. ರೈತರಿಗೆ ಕಿಸಾನ್ ಸಮ್ಮಾನ ಮೂಲಕ ಪರಿಹಾರ ಕೊಟ್ಟಿದ್ದಾರೆ. ಕಾಂಗ್ರೆಸ್ ಬಂದ ಮೆಲೆ ರಾಜ್ಯ ದಿವಾಳಿಯಾಗಿದೆ. ವಿದ್ಯುತ್ ಪ್ರಿ ಅಂತಾರೆ ರೈತರು ರಾತ್ರಿ ಸಮಯದಲ್ಲಿ ಕರೆಂಟ್ ಕೊಡ್ತಾರೆ. ಒಂದು ಸುಳ್ಳನ್ನ ನೂರು ಸಾರಿ ಹೇಳ್ತಾರೆ ಕಾಂಗ್ರೆಸ್ ನವರು. ದೇಶ ಧರ್ಮ ಉಳಿಬೇಕು ಎಂದು ಬಿಜೆಪಿ ಆಬ್ಯರ್ಥಿ ಗೆಲ್ಲಬೇಕು ಎಂದು ಅಮೃತ ದೇಸಾಯಿ ಹೇಳಿದ್ದಾರೆ.
ಸೊಸೆ ಕಾಲ್ಗುಣಕ್ಕೆ ಹೋಲಿಸಿ ಸಿದ್ದರಾಮಯ್ಯ ವಿರುದ್ಧ ಅಮೃತ್ ದೇಸಾಯಿ ಲೇವಡಿ ಮಾಡಿದ್ದಾರೆ. ಕಾಂಗ್ರೆಸ್ ಸೂಳಿ ಬಹಳ ಕೆಟ್ಟದು. ಸುಳ್ಳು ಹೇಳಿ ಹೇಳಿ ಅಧಿಕಾರಕ್ಕೆ ಬಂದಿದ್ದಾರೆ.ಜನರನ್ನು ಮಳ್ಳ ಮಾಡಿ ಸಿದ್ದರಾಮಯ್ಯ ಎರಡನೇ ಸಲ ಸಿಎಂ ಆಗಿದ್ದಾರೆ.135 ಸೀಟ್ ಕೊಟ್ಟು ಚೆನ್ನಾಗಿ ಆಡಳಿತ ಮಾಡಿ ಅಂತಾ ಜನ ಆಶೀರ್ವಾದ ಮಾಡಿದ್ದರು.ಆದರೆ ಇವರಿಗೆ ಅಧಿಕಾರ ಕೊಟ್ಟಾಗಿನಿಂದ ಒಂದು ಹನಿ ಮಳೆಯಾಗಿಲ್ಲ. ಯಡಿಯೂರಪ್ಪ ಸಿಎಂ ಆಗಿದ್ದಾಗ ಸಾಕಷ್ಟು ಮಳೆಯಾಗಿತ್ತು. ಆದರೆ ಸಿದ್ದರಾಮಯ್ಯ ಬಂದ ಬಳಿಕ ಒಂದು ಹನಿ ಮಳೆ ಇಲ್ಲ.
ಮನೆಗೆ ಬರೋ ಸೊಸೆ ಕಾಲ್ಗುಣ ಚೆನ್ನಾಗಿರಬೇಕು. ಸೊಸೆ ಕಾಲ್ಗುಣ ಕೆಟ್ಟದಾಗಿರಬಾರದು. ಮನೆಗೆ ಬರೋ ಸೊಸೆ ಕಾಲ್ಗುಣ ಯಡಿಯೂರಪ್ಪ ತರಹ ಇರಬೇಕು. ಮನೆಗೆ ಬರೋ ಸೊಸೆ ಕಾಲ್ಗುಣ ಸಿದ್ದರಾಮಯ್ಯ ತರಹ ಇರಬಾರದು. ತಿಂಗಳಿಗೆ 2000ರೂ. ಗೃಹಲಕ್ಷ್ಮೀಗೆ ಕೊಟ್ಟಿದ್ದಾರೆ. ಅದು ಒಳ್ಳೆಯ ವಿಚಾರ. ಆದರೆ ಆ ಹಣ ಹೇಗೆ ಬರ್ತಾ ಇದೆ ಗೊತ್ತಲ್ವಾ? ಮೂರು ತಿಂಗಳ ಹಣ ಮೊನ್ನೆ ಬಂದಿದೆ. ಕೃಷಿ ಸಮ್ಮಾನ ಯೋಜನೆಗೆ ಬಿಎಸ್‌ವೈ 4000 ಸೇರಿಸಿದ್ದರು. ಇವರು ಬಂದು ಆ 4000 ಕಸಿದುಕೊಂಡರು. ಅದರಲ್ಲೇ 2000ರೂ. ಗೃಹ ಲಕ್ಷ್ಮಿಗೆ ಕೊಟ್ಟಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ಪ್ರಜ್ವಲ್ ಹೆಸರು ಹೇಳದೇ ಕೇವಲ ಬಿಜೆಪಿ ನಾಯಕರ ಸಲಹೆಯಂತೆ ಕೆಲಸ ಮಾಡೋಣವೆಂದ ಪ್ರೀತಂಗೌಡ
ನಿರುದ್ಯೋಗಿ ಅಂದ್ರೆ ಅದು ರಾಹುಲ್ ಗಾಂಧಿ ಒಬ್ಬರೇ: 70 ವರ್ಷದ ಕಾಂಗ್ರೆಸ್ ಆಡಳಿತ ಟೀಕಿಸಿದ ಮತದಾರ
ಪಾಕ್ ನಟಿಗೆ ಮೆಸೇಜ್ ಮಾಡುತ್ತಿದ್ದಾರಂತೆ ಶೋಯೇಬ್ ಮಲ್ಲಿಕ್.. 3ನೇ ಪತ್ನಿ ಸನಾ ಫುಲ್ ಟ್ರೋಲ್

