Jump Deposit: ಜಂಪ್ ಡಿಪಾಸಿಟ್ ಅನ್ನೋ ಕಾನ್ಸೆಪ್ಟ್ ಬಗ್ಗೆ ನಾವು ನಿಮಗೆ ಈಗಾಗಲೇ ವಿವರಿಸಿದ್ದೇವೆ. ನಿಮ್ಮ ಅಕೌಂಟ್‌ಗೆ ಒಂದೆರಡು ಸಾವಿರ ರೂಪಾಯಿ ಟ್ರಾನ್ಸಫರ್ ಮಾಡಿ, ವಿತ್‌ಡ್ರಾವಲ್ ರಿಕ್ವೆಸ್ಟ್ ಕಳುಹಿಸಿ, ನೀವು ಬ್ಯಾಲೆನ್ಸ್ ಚೆಕ್ ಮಾಡಲು ಪಿನ್ ಹಾಕಿದಾಗ, ನಿಮ್ಮ ಅಂಕೌಂಟ್‌ನಲ್ಲಿದ್ದ ದುಡ್ಡೆಲ್ಲ, ಸ್ಕ್ಯಾಮರ್ ಪಾಲಾಗುತ್ತದೆ. ಇದನ್ನೇ ಜಂಪ್ ಡಿಪೆಸಾಟ್ ಎನ್ನಲಾಗುತ್ತದೆ. ಈ ಬಗ್ಗೆ ಷೇರು ಮಾರುಕಟ್ಟೆ ತರಬೇತುದಾರರಾಗಿರುವ ಡಾ.ಭರತ್ ಚಂದ್ರ ಅವರು ಸಂಪೂರ್ಣವಾಗಿ ವಿವರಿಸಿದ್ದಾರೆ.
ಡಾ.ಭರತ್ ಚಂದ್ರ ಅವರು ಹೇಳುವ ಪ್ರಕಾರ, ವರದಿಯೊಂದರ ಪ್ರಕಾರ, ಭಾರತದಲ್ಲಿ ನಿಮಿಷಕ್ಕೊಮ್ಮೆ ಕ್ರೈಂ ನಡೆಯುತ್ತಿದೆ. ಹಾಗಾಗಿ ಈ ಬಗ್ಗೆ ಮಾಹಿತಿ ತಿಳಿದು, ನಾವು ಇಂಥ ಮೋಸದ ಜಾಲಕ್ಕೆ ಬೀಳದೇ, ಎಚ್ಚರವಹಿಸಬೇಕು. ಪೊಲೀಸರು ಚಾಣಾಕ್ಷರಾದರೆ, ಸೈಬರ್ ಕಳ್ಳರು ರಂಗೋಲಿ ಕೆಳಗೆ ತೂರುವಷ್ಟು ಚಾಣಾಕ್ಷರು. ಯಾಕಂದ್ರೆ ಸೈಬರ್ ಕ್ರೈಮ್‌ಗೆ ಒಳಗಾಗಿ ಪರಿಹಾರ ಕಂಡುಕೊಂಡವರು ಕೇವಲ 14 ಪರ್ಸೆಂಟ್ ಜನ ಮಾತ್ರ.
ಈ ಸ್ಕ್ಯಾಮ್ ಹೇಗೆ ನಡೆಯುತ್ತದೆ ಎಂದರೆ, ಸ್ಕ್ಯಾಮರ್ ನಮಗೆ ಹಣ ಕಳುಹಿಸುತ್ತಾನೆ. ಕೆಲವರಿಗೆ ಹಣ ಬಂದ ತಕ್ಷಣ, ಬ್ಯಾಂಕ್ ಬ್ಯಾಲೆನ್ಸ್ ಎಷ್ಟು ಇದೆ ಅಂತಾ ನೋಡೋ ಅಭ್ಯಾಸವಿರುತ್ತೆ. ಆಗ ಅವರು ಗೂಗಲ್ ಪೇ ಪಿನ್ ಹಾಕಿದ ತಕ್ಷಣವೇ ಅವರ ಅಕೌಂಟ್‌ನಿಂದ ಬ್ಯಾಲೆನ್ಸ್ ಜಿರೋ ಆಗುತ್ತದೆ. ಯಾಕಂದ್ರೆ ಸ್ಕ್ಯಾಮರ್ ಅದಾಗಲೇ ದುಡ್ಡು ಹಾಕುವುದರ ಜೊತೆಗೆ ನಿಮಗೆ ವಿತ್‌ಡ್ರಾವಲ್ ರಿಕ್ವೆಸ್ಟ್ ಕಳುಹಿಸಿರುತ್ತಾನೆ. ಹಾಗಾಗಿ ನಿಮ್ಮ ಅಕೌಂಟ್ ಖಾಲಿಯಾಗುತ್ತದೆ. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ವೀಡಿಯೋ ನೋಡಿ.