Sukanya Samruddhi Yojana: ಹಲವರು ಕೇಂದ್ರ ಸರ್ಕಾರದ ಯೋಜನೆಯಾಗಿರುವ ಸುಕನ್ಯಾಾ ಸಮೃದ್ಧಿ ಯೋಜನೆಯಲ್ಲಿ ಹಲವರು ಹಣ ಹೂಡಿಕೆ ಮಾಡುತ್ತಿದ್ದಾರೆ. ಮಗುವಿಗೆ 5 ವರ್ಷ ತುಂಬುವುದರೊಳಗೆ, ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಬೇಕು. ಮಗುವಿಗೆ 18 ವರ್ಷವಾದ ಬಳಿಕ, ಈ ಹಣಕ್ಕೆ ಸರ್ಕಾರ ಇಂತಿಷ್ಟು ಲಾಭ ಹಾಕಿ ಕೊಡುತ್ತದೆ. ಈ ಹಣವನ್ನು ಮಗುವಿನ ಶಿಕ್ಷಣಕ್ಕೆ, ಮದುವೆಗೆ ಯಾವುದಕ್ಕಾದರೂ ಬಳಸಬಹುದು.
ನೀವು ಪ್ರತೀ ತಿಂಗಳು 1 ಸಾವಿರದಿಂದ 1ಲಕ್ಷದವರೆಗೆ ಎಷ್ಟು ಬೇಕಾದರೂ ಹಣ ಕಟ್ಟಬಹುದು. ಸರ್ಕಾರ ಈ ಹಣಕ್ಕೆ 8.2 ಪರ್ಸೆಂಟ್ ಲಾಭ ಕೊಡುತ್ತದೆ. ಆದರೆ ನಿಮಗೆ ನೀವು ಹಾಕುವ ಹಣಕ್ಕೆ ಇದಕ್ಕಿಂತ ಹೆಚ್ಚು ಲಾಭ ಬೇಕಾದ್ರೆ ಏನು ಮಾಡಬೇಕು ಎಂದು ಷೇರು ಮಾರುಕಟ್ಟೆ ತರಬೇತುದಾರರಾಗಿರುವ ಡಾ. ಭರತ್ ಚಂದ್ರ ಅವರು ವಿವರಿಸಿದ್ದಾರೆ.
ನೀವು 15ರಿಂದ 20 ವರ್ಷದ ತನಕ ಲಾಂಗ್ ಟರ್ಮ್ ಹೂಡಿಕೆ ಮಾಡುವವರಾಗಿದ್ದರೆ, ಪ್ರತೀ ತಿಂಗಳು 1 ಸಾವಿರ ರೂಪಾಯಿಯನ್ನು ನೀವು ಮ್ಯೂಚ್ಯುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಿದರೆ, ನಿಮಗೆ 12 ಪರ್ಸೆಂಟ್ ಲಾಭ ಸಿಗುತ್ತದೆ. ಶೇರ್ ಮಾರುಕಟ್ಟೆಯಲ್ಲಿ ಇನ್ವೆಸ್ಟ್ ಮಾಡಿದರೆ, 15ರಿಂದ 18 ಪರ್ಸೆಂಟ್ ಲಾಭ ಸಿಗುತ್ತದೆ. ಈ ಚಾರ್ಟ್ ನೋಡಿದರೆ ನಿಮಗೆ ಲೆಕ್ಕಾಚಾರ ತಿಳಿಯುತ್ತದೆ. ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.