Friday, August 29, 2025

Latest Posts

doddaballapura : Congress ‘ಕೈ’ ಹಿಡಿದ ಸಕ್ಕರೆಗೊಲ್ಲಹಳ್ಳಿ ಗ್ರಾಮ ಪಂಚಾಯತಿ..!

- Advertisement -

ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ (sakkaregollahalli) ತಾಲ್ಲೂಕಿನ ಸಕ್ಕರೆಗೊಲ್ಲಹಳ್ಳಿ ಗ್ರಾಮಪಂಚಯ್ತಿ ಅದ್ಯಕ್ಷರ ಹಾಗೂ ಉಪಾಧ್ಯಕ್ಷರ ಆಯ್ಕೆ ಕುತೂಹಲ ಮೂಡಿಸಿತ್ತು, ಅಧ್ಯಕ್ಷರಾಗಿ ದೀಪಿಕಾ ರುದ್ರಮೂರ್ತಿ (Deepika Rudramurthy as President), ಉಪಾಧ್ಯಕ್ಷರಾಗಿ ನವೀನ್ (Naveen as Vice President) ಆಯ್ಕೆಯಾಗಿದ್ದಾರೆ. ದೇಶದೆಲ್ಲೆಡೆ ಕಾಂಗ್ರೆಸ್ (Congress) ಸೋಲಿನ ನಡುವೆಯು ಸಕ್ಕರೆಗೊಲ್ಲಹಳ್ಳಿಯ ಗ್ರಾಮ ಪಂಚಾಯತಿಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದು ಕಾಂಗ್ರೆಸ್ ಕಾರ್ಯಕರ್ತರ ಮುಖದಲ್ಲಿ ಮಂದಹಾಸ ಮೂಡಿದೆ, ಒಂದು ವರ್ಷದ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರಾಗಿದ್ದ ಬಿಜೆಪಿ (BJP) ಬೆಂಬಲಿತ ಸದಸ್ಯರು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಸಕ್ಕರೆಗೊಲ್ಲಹಳ್ಳಿ ಗ್ರಾಮಪಂಚಯ್ತಿಯಲ್ಲಿ  ನೂತನ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದೆ, ಒಟ್ಟು 18 ಸದಸ್ಯ ಬಲವನ್ನು ಹೊಂದಿರುವ ಸಕ್ಕರೆಗೊಲ್ಲಹಳ್ಳಿ ಗ್ರಾಮ ಪಂಚಾಯತಿಯಲ್ಲಿ ನೂತನ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ತೀವ್ರ ಹಣಾಹಣಿ ನಡೆಯಿತು. ಕಾಂಗ್ರೆಸ್ ಬೆಂಬಲಿತರಾಗಿ ದೀಪಿಕಾ ರುದ್ರಮೂರ್ತಿ, ನವೀನ್ ಉಮೇದುವಾರಿಕೆ ಸಲ್ಲಿಸಿದರು. ಬಿಜೆಪಿ ಬೆಂಬಲಿತರಾಗಿ ದಿವ್ಯಶ್ರೀ ತಿಮ್ಮೆಗೌಡ ಮತ್ತು ಗಿರೀಶ್ ನಾಮಪತ್ರ ಸಲ್ಲಿಸಿದರು. ಅಂತಿಮವಾಗಿ 10 ಮತಗಳನ್ನು ಪಡೆದ ಕಾಂಗ್ರೆಸ್ ಬೆಂಬಲಿತ ದಿಪೀಕಾ ರುದ್ರಮೂರ್ತಿ ಅಧ್ಯಕ್ಷೆಯಾಗಿ ಆಯ್ಕೆಯಾದರು, ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ತಲಾ 9 ಮತಗಳನ್ನು ಪಡೆದ ನವೀನ್ ಮತ್ತು ಗಿರೀಶ್ (girish) ಮಧ್ಯೆ ತೀವ್ರ ಪೈಪೋಟಿ ನಡೆದು ಸಮಬಲ ಸಾಧಿಸಿದರು. ಕೊನೆಗೆ ತಹಸೀಲ್ದಾರ್ ನಿರ್ದೇಶನದಂತೆ ಲಾಟರಿ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಿತು. ಲಾಟರಿ ಎತ್ತುವ ಮೂಲಕ ಕಾಂಗ್ರೆಸ್ ಬೆಂಬಲಿತ ನವೀನ್ ಗೆ ಅದೃಷ್ಟ ಕುಲಾಯಿಸಿ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಕುತೂಹಲಕಾರಿಯಾಗಿ ಕೂಡಿದ್ದ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಸದಸ್ಯರಿಗೆ ಬೌನ್ಸರ್ ಗಳ ಭದ್ರತೆ ನೀಡಿದ್ದರು. ಎರಡು ದಿನಗಳಿಂದ ಅಜ್ಞಾತ ಸ್ಥಳದಲ್ಲಿದ್ದ ಸದಸ್ಯರುಗಳು ಬೌನ್ಸರ್ (Bouncer)ಗಳ ಭದ್ರತೆಯಲ್ಲಿ ಪಂಚಾಯತಿ ಆವರಣಕ್ಕೆ ಆಗಮಿಸಿದ್ದು ಎಲ್ಲರ ಗಮನ ಸೆಳೆಯಿತು, ಸಕ್ಕರೆಗೊಲ್ಲಹಳ್ಳಿ ಗ್ರಾ. ಪಂ ನೂತನ ಅಧ್ಯಕ್ಷೆ ದೀಪಿಕಾ ರುದ್ರಮೂರ್ತಿ ಮತ್ತು ಉಪಾಧ್ಯಕ್ಷ ನವೀನ್ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದರು.

                                                                 ಅಭಿಜಿತ್ ಕರ್ನಾಟಕ ಟಿವಿ ದೊಡ್ಡಬಳ್ಳಾಪುರ.

- Advertisement -

Latest Posts

Don't Miss