Saturday, April 5, 2025

Latest Posts

ಕಾಂಗ್ರೆಸ್ 60 ವರ್ಷ ಜನರಿಗೆ ಮಕ್ಮಲ್ ಟೋಪಿ ಹಾಕಿದ್ದಾರೆ: ಕೇಂದ್ರ ಸಚಿವ ಜೋಶಿ..!

- Advertisement -

Hubli News: ಹುಬ್ಬಳ್ಳಿ: ಮಾಸ್ ರೆಪಿಸ್ಟ್ ಅಂತ ರಾಹುಲ್ ಗಾಂಧಿ ಬಹಳಷ್ಟು ದೊಡ್ಡದಾಗಿ ಭಾಷಣ ಮಾಡುತ್ತಿದ್ದಾರೆ. ಆದರೆ ಪ್ರಜ್ವಲ್ ರೇವಣ್ಣ ವಿಚಾರದಲ್ಲಿ ನಿಮ್ಮ ಸರ್ಕಾರ‌ ಏನು ಮಾಡತ್ತಿದೆ. ಎಫ್ ಐ ಆರ್ ಯಾಕೆ ತಡವಾಯಿತು ಎನ್ನುವ ಪ್ರಶ್ನೆಗೆ ಕಾಂಗ್ರೆಸ್ ನ ಒಬ್ಬನೇ ಒಬ್ಬ ಉತ್ತರ ಕೊಟ್ಟಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಕಾಂಗ್ರೆಸ್ ಎಷ್ಟು ಸುಳ್ಳು ಹೇಳುತ್ತಿದೆ ಇಲ್ಲಿ ಗೊತ್ತಾಗುತ್ತದೆ.‌ ಅವರು ಹೊಂದಾಣಿಕೆ ಮಾಡಿಕೊಂಡು ಈಗ ಕೇಂದ್ರದ ಸರ್ಕಾರ ಜವಾಬ್ದಾರಿ ಅಂತ ಹೇಳುತ್ತಿದ್ದಾರೆ ಎಂದರು.

ಮಕ್ಮಲ್ ಟೋಪಿ ಜಾಹೀರಾತು ವಿಚಾರವಾಗಿ ಮಾತನಾಡಿದ ಅವರು,‌ ಕಾಂಗ್ರೆಸ್ 60 ವರ್ಷ ದೇಶದ ಜನತೆಗೆ ಟೋಪಿ ಹಾಕಿದೆ.ಹೀಗಾಗಿ ಜನ ಅಧಿಕೃತ ವಿಪಕ್ಷ ಸ್ಥಾನ ಸಹ ನೀಡಲ್ಲ. 2004 ರಿಂದ 14 ವರಿಗೆ ರಾಜ್ಯದ ಬರ ಪ್ರವಾಹದ ಒಟ್ಟು ಬೇಡಿಕೆ 44,638 ಕೋಟಿ ಬೇಡಿಕೆ ಇಟ್ಟಿತ್ತು.‌ ಆಗ ಆಡಳಿತದಲ್ಲಿ ಕಾಂಗ್ರೆಸ್ ನೀಡಿದ್ದು,‌ 7,193 ಕೋಟಿ ಅದು ರಾಜ್ಯದ ಪರಿಹಾರ ಸೇರಿ. ನಾವು ಆಡಳಿತದಲ್ಲಿದ್ದಾಗ ನೀಡಿದ್ದು 15,308 ಕೋಟಿ. ನಾವು ಕೊಟ್ಟ ಪರಿಹಾರ 51% ಕಾಂಗ್ರೆಸ್ ಪರಿಹಾರ 15% ಎಂದು ಅವರು ಹೇಳಿದರು.

ರಾಜ್ಯದಲ್ಲಿ ಭ್ರಷ್ಟಾಚಾರ ಮಾಡಿ‌‌ ನಿಮ್ಮ ಶಹಾಜಾನ್ ಗೆ ಕೊಟ್ಟಿದ್ದಿರಾ?. ಇಲ್ಲ ವಸೂಲಿ ಗೆ ಒಬ್ಬರು ಬರ್ತಾರಲ್ಲಾ ಅವರಿಗೆ ಕೊಟ್ಟಿದ್ದಿರಾ?.‌ಪರೋಕ್ಷವಾಗಿ ರಾಹುಲ್ ಗಾಂಧಿ ಮತ್ತು ಸುರ್ಜೆವಾಲಾ ಗೆ ಜೋಶಿ ಟಾಂಗ್ ನೀಡಿದರು.

ಕಾಂಗ್ರೆಸ್ ನಾಯಕರಿಗೆ ನಾಚಿಕೆ, ಮಾನ, ಮರ್ಯಾದೆಯೇ ಇಲ್ಲ: ಕೇಂದ್ರ ಸಚಿವ ಜೋಶಿ

ಶೋಷಿತರ ಶ್ರೇಯೋಭಿವೃದ್ಧಿಗಾಗಿ ಗ್ಯಾರಂಟಿ ಜಾರಿ: ವಿನೋದ ಅಸೂಟಿ

ದತ್ತು ಪುತ್ರನೊಂದಿಗೆ ಸಲ್ಲಾಪ: ರೆಡ್‌ಹ್ಯಾಂಡ್‌ ಆಗಿ ಗಂಡನ ಎದುರು ಸಿಕ್ಕಿಬಿದ್ದ ಮಹಿಳಾ ರಾಜಕಾರಣಿ

- Advertisement -

Latest Posts

Don't Miss