Monday, December 23, 2024

Latest Posts

ಪುತ್ರನಿಗೆ ಟಿಕೆಟ್ ನೀಡಿ ಕಾಂಗ್ರೆಸ್ ಶಾಸಕನನ್ನು ಸೆಳೆದ ಬಿಜೆಪಿ..!?

- Advertisement -

ಬೆಂಗಳೂರು: ಪುತ್ರನಿಗೆ ಬಿಜೆಪಿ ಟಿಕೆಟ್ ನೀಡುವ ಮೂಲಕ ಕಾಂಗ್ರೆಸ್ ನ ಪ್ರಭಾವಿ ಶಾಸಕ ಎಂಟಿಬಿ ನಾಗರಾಜ್ ರನ್ನು ಬಿಜೆಪಿ ಸೆಳೆದಿದ್ದು, ಈ ಕಾರಣಕ್ಕಾಗಿಯೇ ಎಂಟಿಬಿ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್ ವಿರುದ್ಧ ಆಗ್ಗಾಗ್ಗೆ ತಮ್ಮ ಅಸಮಾಧಾನ ಹೊರಹಾಕುತ್ತಿದ್ದ ಕಾಂಗ್ರೆಸ್ ನ ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ್ ರಾಜೀನಾಮೆಗೆ ಕಾರಣ ಇದೀಗ ಬಯಲಾಗಿದೆ. ತಮ್ಮ ಪುತ್ರ ನಿತೀಶ್ ಪುರುಷೋತ್ತಮ್ ಗೆ ಮುಂದಿನ ಚುನಾವಣೆಯಲ್ಲಿ ಹೊಸಕೋಟೆಯಿಂದ ಸ್ಪರ್ಧಿಸಲು ಬಿಜೆಪಿ ಟಿಕೆಟ್ ನೀಡೋದಾಗಿ ಖಚಿತಪಡಿಸಿದ್ದರಿಂದ ಎಂಟಿಬಿ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.

ಇನ್ನು ಹೊಸಕೋಟೆ ಕ್ಷೇತ್ರದ ಪ್ರಭಾವಿ ಎದುರಾಳಿ ಬಚ್ಚೇಗೌಡರ ಮನವೊಲಿಸಿರುವ ಬಿಜೆಪಿ ಬಚ್ಚೇಗೌಡ ಪುತ್ರ ಶರತ್ ಗೆ ಬಾಗೇಪುಲ್ಲಿಯಿಂದ ಟಿಕೆಟ್ ನೀಡೋದಾಗಿ ಬಿಜೆಪಿ ಮಾತು ಕೊಟ್ಟಿದೆ ಎನ್ನಲಾಗಿದೆ. ಇನ್ನು ಮಗನ ರಾಜಕೀಯ ಭವಿಷ್ಯಕ್ಕೆ ಭದ್ರ ಬುನಾದಿ ಹಾಕೋ ಸಲುವಾಗಿ ಎಂಟಿಬಿ ನಾಗರಾಜ್ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದ್ದು ಮೈತ್ರಿ ನಾಯಕರಿಗೆ ಬಿಜೆಪಿ ಸದ್ದಿಲ್ಲದೆ ಮಾಸ್ಟರ್ ಸ್ಟ್ರೋಕ್ ನೀಡಿದೆ.

ಕೊನೆಗೂ ಸರ್ಕಾರ ಸೇಫ್..!ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=IYW7U_3rVgo
- Advertisement -

Latest Posts

Don't Miss