ಮೋದಿ ಹೊಗಳಿದ ಕಾಂಗ್ರೆಸ್ ಹಿರಿಯ ಮುಖಂಡ

ಬೆಂಗಳೂರು:ಕಾಂಗ್ರೆಸ್ ಮುಖಂಡರಿಗೆ ಛೀಮಾರಿ ಹಾಕಿ ಬಿಜೆಪಿ ಸೇರೋ ಬಗ್ಗೆ ಸುಳಿವು ನೀಡಿದ್ದ ಕಾಂಗ್ರೆಸ್ ನ ಹಿರಿಯ ಮುಖಂಡ ರೋಷನ್ ಬೇಗ್ ಇದೀಗ ಮತ್ತೆ ಮೋದಿವರನ್ನ ಹೊಗಳಿದ್ದಾರೆ.

ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿದ ಇಬ್ಬರು ಸಚಿವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸೋ ಬೇಗ್ ಟ್ವೀಟ್ ಮೂಲಕ ಶುಭ ಕೋರಿದ್ದಾರೆ.

ಡಾ.ಜೈಶಂಕರ್ ಮತ್ತು ಹರ್ದೀಪ್ ಪುರಿಯವರಂತಹವರನ್ನು ಮೋದಿ ಸಂಪುಟದಲ್ಲಿ ನೋಡದಕ್ಕೆ ನನಗೆ ಖುಷಿಯಾಗುತ್ತದೆ. ಇದು ಮೋದಿ ಆಡಳಿತದ ಕಾರ್ಯವೈಖರಿಯನ್ನ ಎತ್ತಿ ತೋರುತ್ತದೆ.ಮೋದಿ ಸಂಪುಟದ ಎಲ್ಲಾ ಸಚಿವರಿಗೂ ನನ್ನ ಶುಭಾಶಯಗಳು ಅಂತ ರೋಷನ್ ಬೇಗ್ ಹೇಳಿಕೊಂಡಿದ್ದಾರೆ.

About The Author