ಹುಬ್ಬಳ್ಳಿ : ಕಳೆದ ಕೆಲದಿನಗಳಿಂದ ಹುಬ್ಬಳ್ಳಿಯಲ್ಲಿ ಆತಂಕ ಸೃಷ್ಟಿಸಿರೋ ಚಿರತೆ ಈವರೆಗೂ ಪತ್ತೆಯಾಗಿಲ್ಲ. ನಗರದ ಕೇಂದ್ರೀಯ ವಿದ್ಯಾಲಯ ಬಳಿ ಕಾಣಿಸಿಕೊಂಡಿದ್ದ ಚಿರತೆ, ಸದ್ಯ ರಾಜ್ ನಗರದಲ್ಲಿ ಬೀಡುಬಿಟ್ಟಿದೆ ಅಂತ ಹೇಳಲಾಗ್ತಿದೆ.
ಚಿರತೆ ಕಾಣಿಸಿಕೊಂಡಾಗಿನಿಂದಲೂ ಭಯಭೀತರಾಗಿ ಜನ ರಸ್ತೆಗಳಲ್ಲಿ ಓಡಾಡೋದಕ್ಕೆ ಹೆದರುತ್ತಿದ್ದಾರೆ. ಇಡೀ ದಿನ ಬಾಗಿಲು ಹಾಕಿಕೊಂಡು ಮನೆಯೊಳಗೆ ಕಾಲ ಕಳೆಯೋ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನು ಅರಣ್ಯ ಇಲಾಖೆ ಸಿಬ್ಬಂದಿ ಕೂಡ ಕಳೆದ 8 ದಿನಗಳಿಂದ ಚಿರತೆ ಸೆರೆಗೆ ಇನ್ನಿಲ್ಲದ ಕಸರತ್ತು ನಡೆಸ್ತಿದ್ದಾರೆ. ಚಿರತೆ ಸೆರೆಗ ತಜ್ಞರ ತಂಡ ಆಗಮಿಸಿದ್ದು ಕೂಂಬಿಂಗ್ ಕಾರ್ಯದಲ್ಲಿ ನಿರತವಾಗಿದೆ. ಚಿರತೆ ವಾಸ್ತವ್ಯ ಹೂಡುವ ಸಾಧ್ಯತೆಯಿಂದಾಗಿ ಸುತ್ತಮುತ್ತಲಿನ ಪಾಳು ಬಿದ್ದ ಹಳೆಯ ಕಟ್ಟಡಗಳನ್ನು ಕೆಡವಲಾಗ್ತಿದೆ.
ಚಿರತೆ ದಾಳಿ ಭೀತಿಯಿಂದ ಜಿಲ್ಲಾಧಿಕಾರಿ ನಿತೀಶ್ ಪಾಟೀಲ್ ಮುಂಜಾಗ್ರತಾ ಕ್ರಮವಾಗಿ ರಾಜ್ ನಗರದ ಸಮೀಪದ ಪ್ರದೇಶವಾದ ನೃಪತುಂಗ ಬೆಟ್ಟದ ಸುತ್ತಮುಲಿನ ಒಟ್ಟು 12 ಖಾಸಗಿ ಮತ್ತು ಸರ್ಕಾರಿ ಶಾಲೆಗಳಿಗೆ ರಜೆ ಘೋಷಿಸಿದ್ದಾರೆ.
ಕರ್ನಾಟಕ ಟಿವಿ, ಹುಬ್ಬಳ್ಳಿ