National News: ಮತ್ತೆ ದೇಶದಲ್ಲಿ ಕೊರೋನಾ ಮಹಾಮಾರಿ ಹರಡುವ ಮುನ್ಸೂಚನೆ ಇರುವ ಹಿನ್ನೆಲೆ, ಕೇಂದ್ರದಿಂದ ಕೊರೋನಾ ಗೈಡ್‌ಲೈನ್ಸ್ ರಿಲೀಸ್ ಮಾಡಲಾಗಿದೆ. ಅಲ್ಲದೇ, ಪ್ರತೀ ರಾಜ್ಯವೂ ಈ ಗೈಡ್‌ಲೈನ್ಸ್‌ನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೇಳಿದೆ.
ಕೇರಳದಲ್ಲಿ ಕೊರೋನಾ ರೂಪಾಂತರಿ ಪ್ರಕರಣ ಕಂಡುಬಂದಿದ್ದು, ಈಗಾಗಲೇ ಇಬ್ಬರು ಈ ರೋಗಕ್ಕೆ ಬಲಿಯಾಗಿದ್ದಾರೆ. ಈ ಕಾರಣಕ್ಕೆ ದೇಶದಲ್ಲಿ, ಮತ್ತೆ ಇಂಥ ಪ್ರಕರಣಗಳು ಹೆಚ್ಚಾಗದಂತೆ ತಡೆಯಲು ಕೋವಿಡ್ ಗೈಡ್‌ಲೈನ್ಸ್ ಹೊರಡಿಸಲಾಗಿದೆ. ಕೋವಿಡ್‌ಗೆ ಸಂಬಂಧಿಸಿದ ಆರೋಗ್ಯ ತಪಾಸಣೆಗಳನ್ನು ಕಡ್ಡಾಯವಾಗಿ ಮಾಡಲೇಬೇಕೆನ್ನಲಾಗಿದೆ.
ಅಲ್ಲದೇ, ಮುಂದೆ ಬರುವ ಹಬ್ಬಗಳಲ್ಲಿ ರಾಜ್ಯ ಸರ್ಕಾರ ಎಚ್ಚರ ವಹಿಸಲೇಬೇಕಾಗಿದೆ. ಇಲ್ಲವಾದಲ್ಲಿ, ಮತ್ತೆ ಕೋವಿಡ್ ಎಲ್ಲೆಡೆ ಹರಡುವ ಭೀತಿ ಇದ್ದು, ಕೇಂದ್ರ ಈ ಬಗ್ಗೆ ಎಚ್ಚರಿಕೆ ಕೊಟ್ಟಿದೆ. ಉಸಿರಾಟದ ಖಾಯಿಲೆ ಇದ್ದಲ್ಲಿ, ಅಂಥವರಿಗೆ ಸರಿಯಾಗಿ ಪರೀಕ್ಷಿಸಿ, ಚಿಕಿತ್ಸೆ ಕೊಡಬೇಕು. ಎಲ್ಲ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ಈಗಿಂದಲೇ ಸಿದ್ಧರಾಗಿರಬೇಕು. ರೋಗ ಲಕ್ಷಣಗಳಿದ್ದಲ್ಲಿ, ತಪ್ಪದೇ ತಪಾಸಣೆ ನಡೆಸಬೇಕು. ಮಾಸ್ಕ್ ಧರಿಸಬೇಕು. ಹೀಗೆ ಕೇಂದ್ರ ಸರ್ಕಾರ, ಪ್ರತೀ ರಾಜ್ಯಕ್ಕೂ ಕಡ್ಡಾಯವಾಗಿ ಗೈಡ್‌ಲೈನ್ಸ್ ಪಾಲಿಸಬೇಕೆಂದು ಹೇಳಿದೆ.
ಕೋಲಾರದ ವಿದ್ಯಾರ್ಥಿಗಳನ್ನು ಭೇಟಿಯಾಗಿ, ಸಾಂತ್ವಾನ ಹೇಳಿದ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ
‘ಚಿತ್ರರಂಗದಲ್ಲಿ ಚಾಪುಮೂಡಿಸಲು ಸಲಕರಣೆ ಸಿಗದ ಅಲೆಮಾರಿಗಳು ಬೊಗಳಿದರೆ ಇತಿಹಾಸ ಬದಲಾಗುತ್ತಾ?’