- Advertisement -
ಕರ್ನಾಟಕ ಟಿವಿ : ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಚಿತ್ರೀಕರಣಕ್ಕೆ ಕೆಜಿಎಫ್ JMFC ನ್ಯಾಯಾಲಯ ತಡೆ ನೀಡಿದೆ. ಚಿತ್ರೀಕರಣದಿಂದ ಪರಿಸರಕ್ಕೆ ಹಾನಿ ಎಂದು ಕೆಜಿಎಫ್ ನ ರಾಷ್ಟ್ರೀಯ ಪ್ರಜಾ ಚಕ್ರವ್ಯೂಹ ಪಕ್ಷದ ಅಧ್ಯಕ್ಷ್ಯ ಶ್ರೀನಿವಾಸ್ ದೂರು ದಾಖಲಿಸಿದ್ರು. ಈ ಹಿನ್ನೆಲೆ ಚಿತ್ರೀಕರಣಕ್ಕೆ ತಡೆ ನೀಡಿ ನಿರ್ಮಾಪಕ ವಿಜಯ್ ಕಿರಗಂದೂರಿಗೆ ನೋಟಿಸ್ ಜಾರಿ ಮಾಡಿದೆ.
ತಡೆಯಾಜ್ಞೆ ಹಿನ್ನೆಲೆ ಚಿತ್ರೀಕರಣ ಸ್ಟಾಪ್
ನ್ಯಾಯಾಲಯದಿಂದ ಚಿತ್ರೀಕರಣಕ್ಕೆ ತಡೆ ಹಿನ್ನಲೆ ಚಿತ್ರತಂಡ ಸ್ಥಳ ಖಾಲಿ ಮಾಡ್ತಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯ್ ಕೆಜಿ ಎಫ್ ಮೊದಲ ಭಾಗ ಸೂಪರ್ ಡೂಪರ್ ಹಿಟ್ ಆಗಿತ್ತು. ಕೆಜಿಎಸ್ ೨ ನಲ್ಲಿ ಬಾಲಿವುಡ್ ನಟ ಸಂಜಯ್ ದತ್ ಸಹ ಅಭಿನಯಿಸುತ್ತಿದ್ದು ಭಾರೀ ಕುತೂಹಲ ಹುಟ್ಟಿಸಿದೆ. ಆದ್ರೆ ಚಿತ್ರೀಕರಣಕ್ಕೆ ಕೋರ್ಟ್ ತಡೆ ನೀಡಿರೋದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ
- Advertisement -