Sandalwood: ರಾಜಕಾರಣದ ಬಗ್ಗೆ ಮಾತನಾಡಿರುವ ಲಹರಿ ವೇಲು ಅವರು, ಭಾರತದಲ್ಲಿ ಹಲವರ ಪರಿಸ್ಥಿತಿ ಬಗ್ಗೆ ಮಾತನಾಡಿದ್ದಾರೆ.
ಕೆಲವರಿಗೆ 2 ವೇಳೆ ಸರಿಯಾಗಿ ಆಹಾರ ಸೇವಿಸುವುದಕ್ಕಾಗುವುದಿಲ್ಲ. ಸರಿಯಾಗಿ ಹಾಕಲು ಬಟ್ಟೆ ಇರುವುದಿಲ್ಲ. ಇಂಥವರ ಬಗ್ಗೆ ನಿಮಗೆ ಕಾಳಜಿ ಇದೆಯಾ ಎಂದು ಲಹರಿ ಇಂದಿನ ರಾಜಕಾರಣಿಗಳಿಗೆ ಪ್ರಶ್ನಿಸಿದ್ದಾರೆ.
ಅಲ್ಲದೇ, ರಾಜಕಾರಣಿಗಳು ಜನರಿಂದ ಜನರಿಗೋಸ್ಕರ ಇರಬೇಕು ಎಂದು ಸಂವಿಧಾನದಲ್ಲಿ ಬರೆಯಲಾಗಿದೆ. ಆದರೆ ಇಂದಿನ ರಾಜಕಾರಣಿಗಳು ನನ್ನಿಂದ, ನನಗೋಸ್ಕರ, ನನ್ನ ಹೆಂಡತಿ ಮಕ್ಕಳಿಗೋಸ್ಕರ, ನನ್ನ ಚೇಲಾಗಳಿಗೋಸ್ಕರ ಅಂತಾ ಬದುಕುತ್ತಿದ್ದಾರಾ..? ಎಂದು ಲಹರಿ ವೇಲು ಪ್ರಶ್ನಿಸಿದ್ದಾರೆ.
ಮನುಷ್ಯನಿಗೆ ತಾನು ಅನುಭವಿಸಿದ ದುಃಖ ಇನ್ನ“ಬ್ಬರಿಗೆ ಬರಬಾರದು ಅನ್ನೋ ಮನಸ್ಸಿರಬೇಕು. ಅಲ್ಲದೇ ನಾನು ಸಂತೋಷವಾಗಿದ್ದೇನೆ ಅಂದ್ರೆ ನನ್ನ ರೀತಿ ಇತರರು ಸಂತೋಷವಾಗಿರಲು ಅನ್ನೋ ಮನಸ್ಸಿರಬೇಕು. ಅಂಥವರು ರಾಜಕಾರಣದಲ್ಲಿರಬೇಕು ಎಂದು ಲಹರಿ ವೇಲು ಹೇಳಿದ್ದಾರೆ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

