Friday, April 18, 2025

Latest Posts

ದುಬೈನಲ್ಲಿ ಹುಲಿ ಜೊತೆ ಪೋಸ್ ಕೊಟ್ಟ ಡಿ ಬಾಸ್ ದರ್ಶನ್..

- Advertisement -

Movie News: ದರ್ಶನ್ ತೂಗುದೀಪ್ ಅವರಿಗೆ ಪ್ರಾಣಿಗಳು ಅಂದ್ರೆ ಎಷ್ಟು ಪ್ರೀತಿ ಅಂತಾ ಎಲ್ಲ ಕನ್ನಡಿಗರಿಗೂ ಗೊತ್ತು. ಅವರು ಹಲವು ಪ್ರಾಣಿಗಳನ್ನು ದತ್ತು ತೆಗೆದುಕೊಂಡು ತಮ್ಮ ಫಾರ್ಮ್‌ಹೌಸ್‌ನಲ್ಲಿ ಸಾಕುತ್ತಿರುವುದು ಎಲ್ಲರಿಗೂ ಗೊತ್ತು. ಇದೀಗ ದರ್ಶನ್ ತಮ್ಮ ಸಿನಿಮಾ ಕಾಟೇರ ಚಿತ್ರದ ಪ್ರಮೋಷನ್‌ಗಾಗಿ ದುಬೈಗೆ ಹಾರಿದ್ದಾರೆ. ಅಲ್ಲಿ ಪ್ರಮೋಷನ್ ಮುಗಿಸಿ, ತಮ್ಮ ಗೆಳೆಯರೊಂದಿಗೆ ಜೂಗೆ ಹೋಗಿದ್ದಾರೆ.

ಜೂನಲ್ಲಿ ಹುಲಿಯೊಂದಿಗೆ ಪೋಸ್ ಕೊಟ್ಟಿದ್ದಾರೆ. ಅಲ್ಲದೇ, ಇನ್ನೂ ಹಲವು ಪ್ರಾಣಿಗಳೊಂದಿಗೆ ದರ್ಶನ್ ಸಮಯ ಕಳೆದಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಆಗುತ್ತಿದ್ದಂತೆ, ಡಿ ಬಾಸ್ ಫ್ಯಾನ್ಸ್, ಹುಲಿಯೊಂದಿಗೆ ಇರುವ ತಮ್ಮ ಬಾಸ್‌ಗೆ ಹುಷಾರು ಎಂದು ಹೇಳಿದ್ದಾರೆ.

ಇನ್ನು ದುಬೈನಲ್ಲಿ ಕಾಟೇರ ತಂಡಕ್ಕೆ ಅದ್ಧೂರಿ ಸ್ವಾಗತ ಸಿಕ್ಕಿದೆ. ದುಬೈ ಕನ್ನಡಿಗರು ದರ್ಶನ್‌ಗೆ ಭರ್ಜರಿ ಸ್ವಾಗತ ನೀಡಿ, ಕಾಟೇರ ಚಿತ್ರ ನೋಡಿ, ಅಭಿನಂದಿಸಿದ್ದಾರೆ. ದುಬೈನಲ್ಲಿ ಹೌಸ್‌ಫುಲ್ ಪ್‌ರದರ್ಶನ ಕಂಡಿದ್ದು, ಭಾರತದಲ್ಲೂ ಕಾಟೇರ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.

“ಬೊಂಬಾಟ್ ಭೋಜನ”ಕ್ಕೆ ಸಾವಿರದ ಸಂಭ್ರಮ..ಮಕರ ಸಂಕ್ರಾಂತಿಯಿಂದ ನಾಲ್ಕನೇ ಆವೃತ್ತಿ ಆರಂಭ..

ರಾಮಮಂದಿರಕ್ಕೆ 1 ಲಕ್ಷ ರೂಪಾಯಿ ದೇಣಿಗೆ ನೀಡಿದ ನಟಿ ಪ್ರಣಿತಾ..

ಸಂಗೀತ ಮಾಂತ್ರಿಕ ಉಸ್ತಾದ್ ರಷೀದ್ ಖಾನ್‌ ಇನ್ನಿಲ್ಲ..

- Advertisement -

Latest Posts

Don't Miss