Hubli News: ಹುಬ್ಬಳ್ಳಿ: ಮಹಾಮಸ್ತಕಾಭಿಷೇಕ ಕಾರ್ಯಕ್ರಮದ ವೇದಿಕೆಯ ಮೇಲೆಯೇ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಆಗುವಂತೆ ರಾಷ್ಟ್ರಸಂತ ಗುಣಧರನಂದಿ ಮಹಾರಾಜರು ಆಶೀರ್ವಾದ ಮಾಡಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೈನರಿಗೆ ನಿಗಮ ಮಂಡಳಿ ಆಗಬೇಕು, ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಬೇಕೆಂಬ ಎರಡು ಕನಸಿದೆ. ವೇದಿಕೆಯ ಮೇಲೆ ಎಲ್ಲಾ ಆಚಾರ್ಯರು ಮತ್ತು ಜೈನ ಮುನಿಗಳು ಕೈ ಮೇಲೆ ಮಾಡಿ ಡಿಕೆಶಿವಕುಮಾರ್ ಗೆ ಆಶೀರ್ವಾದ ಮಾಡಿದರು.
ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಿಯೇ ತೀರುತ್ತಾರೆ. ಇವರು ಕಾಂಗ್ರೆಸ್ ಪಕ್ಷಕ್ಕೆ ಕಷ್ಟ ಪಟ್ಟಷ್ಟು ಯಾರು ಪಟ್ಟಿಲ್ಲ. ನಮ್ಮ ಆಸೆ ಇರೋದು ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಅಂತ. ನಿಗಮ ಮಂಡಳಿ ಫೈಲ್ ಸತ್ತಿಲ್ಲ, ಜೀವಂತ ಇದೆ. ಜೈನರಿಗೆ ಕೊಟ್ಟು ಗೊತ್ತು, ಬೇಡಿ ಗೊತ್ತಿಲ್ಲ. ಆದ್ರೆ ಈಗ ನಿಗಮ ಮಂಡಲಿ ಬೇಡುತ್ತಿದ್ದೇವೆ. ನಮಗೆ ನಿಗಮ ಮಂಡಳಿ ಎಂದ ಜೈನ ಮುನಿ ಗುಣಧರನಂದಿ ಮಹಾರಾಜ ಮನವಿ ಮಾಡಿದರು.