Friday, February 7, 2025

Latest Posts

ನಿದ್ದೆ ಮಾಡಿದಾಗ ಭಯವಾಗುವುದು, ಕೆಟ್ಟ ಕನಸುಗಳು ಬೀಳುತ್ತಿದ್ದರೆ ಈ ಮಂತ್ರ ಜಪಿಸಿ

- Advertisement -

Spiritual Story: ಕೆಲವರಿಗೆ ಕತ್ತಲು ಕಂಡರೆ ಭಯವಾಗುತ್ತದೆ. ಮತ್ತೆ ಕೆಲವರಿಗೆ ಒಬ್ಬರೇ ಇದ್ದಾಗ ಹೆದರಿಕೆಯಾಗುತ್ತದೆ. ಇನ್ನು ಕೆಲವರಿಗೆ ನಿದ್ದೆ ಗಣ್ಣಲ್ಲೇ ಭಯವಾಗುತ್ತದೆ. ಕೆಟ್ಟ ಕೆಟ್ಟ ಕನಸು ಬೀಳುತ್ತದೆ. ಸರಿಯಾಗಿ ನಿದ್ರಿಸಲು ಸಾಧ್ಯವಾಗುವುದಿಲ್ಲ. ಅಂಥವರು ಈ ಒಂದು ಮಂತ್ರ ಜಪಿಸಿದರೆ, ನಿಮ್ಮ ಜೀವನದಲ್ಲಿನ ಭಯವೆಲ್ಲ ಹೊರಟು ಹೋಗುತ್ತದೆ. ನೀವು ಧೈರ್ಯವಂತರಾಗುತ್ತೀರಿ. ನಿಮ್ಮ ಜೀವನದ ಗುರಿ ತಲುಪಲು ಕೂಡ ಈ ಮಂತ್ರ ಸಹಾಯ ಮಾಡುತ್ತದೆ.

ಓಂ ನಮೋ ಭಗವತೇ ವಾಸುದೇವಾಯ ನಮಃ. ಎರಡನೇಯ ಮಂತ್ರ ಅಚ್ಯುತ್ತಾಯ ನಮಃ, ಅನಂತಾಯ ನಮಃ, ಗೋವಿಂದಾಯ ನಮಃ. ಇದೇ ಮಂತ್ರವನ್ನು ನೀವು ಜಪಿಸುತ್ತೀರಿ. ಇದನ್ನು ಮಲಗುವ ಮುನ್ನ, ಬೆಳಿಗ್ಗೆ ಸ್ನಾನವಾದ ಬಳಿಕ, ಸಂಜೆ ದೀಪ ಹಚ್ಚುವ ಸಮಯದಲ್ಲಿ ನೀವು ಹೇಳಬಹುದು. ಇದರ ಪಠಣೆಯಿಂದ ನಿಮ್ಮ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಹೆದರಿಕೆ ಹೊರಟು ಹೋಗುತ್ತದೆ.

ಇದಷ್ಟೇ ಅಲ್ಲದೇ, ನಿಮ್ಮ ಅಥವಾ ನಿಮ್ಮ ಮನೆ ಜನರ ಆರೋಗ್ಯ ಹಾಳಾಗಿದ್ದಲ್ಲಿ, ನೀವು ಅವರ ಪರವಾಗಿ ಭಕ್ತಿಯಿಂದ ಶ್ರೀವಿಷ್ಣುವನ್ನು ನೆನೆದು, ಈ ಮಂತ್ರ ಜಪಿಸಿದರೆ, ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ.

ಆರೋಗ್ಯ ಸರಿಯಾಗಲು ಮಹಾಮೃತ್ಯುಂಜಯ ಮಂತ್ರವನ್ನು ಹೇಳಲಾಗುತ್ತದೆ. ಈ ಮಂತ್ರ ಪಠಣೆಯಿಂದ ಮನುಷ್ಯ ತನ್ನ ಸಾವನ್ನೇ ಗೆದ್ದು ಬರುತ್ತಾನೆಂಬ ನಂಬಿಕೆ ಇದೆ. ಆದರೆ ಈ ಮಂತ್ರವನ್ನು ದೀಕ್ಷೆ ಪಡೆಯದೇ ಹೇಳುವ ಹಾಗಿಲ್ಲ. ಹಾಗಾಗಿ ಮಹಾ ಮೃತ್ಯುಂಜಯ ಮಂತ್ರ ಪಠಿಸದಿದ್ದರೂ, ನೀವು ಓಂ ನಮೋ ಭಗವತೇ ವಾಾಸುದೇವಾಯ ನಮಃ ಎಂಬ ಮಂತ್ರವನ್ನು ನೀವು ಪಠಿಸಬಹುದು. ಅಥವಾ, ಅಚ್ಯುತ್ತಾಯ ನಮಃ, ಅನಂತಾಯ ನಮಃ, ಗೋವಿಂದಾಯ ನಮಃ ಎಂಬ ಮಂತ್ರವನ್ನು ನೀವು ಪಠಿಸಬಹುದು.

- Advertisement -

Latest Posts

Don't Miss