Friday, April 11, 2025

Latest Posts

ದರ್ಶನ್ ಕೇಸ್- ಇದೆಲ್ಲ ಸುಳ್ಳು, ಸತ್ಯ ಬೇರೆಯೇ ಇದೆ: ಕವಿರಾಜ್ ವಿಶೇಷ ಸಂದರ್ಶನ

- Advertisement -

Sandalwood News: ಸ್ಯಾಂಡಲ್‌ವುಡ್‌ನಲ್ಲಿ ಸದ್ಯ ಸದ್ದು ಮಾಡುತ್ತಿರುವ ಪ್ರಕರಣ ಅಂದ್ರೆ, ರೇಣುಕಾಸ್ವಾಮಿ ಕೊಲೆ ಕೇಸ್. ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿದ್ದು, ಪ್ರಿಯತಮೆ ಪವಿತ್ರಾ ವಿಷಯವಾಗಿ, ಇದೀಗ ದರ್ಶನ್ ಜೈಲು ಕಂಬಿ ಎಣಿಸಬೇಕಾಗಿದೆ.

ಇದೀಗ ಕರ್ನಾಟಕ ಟಿವಿಯೊಂದಿಗೆ ಸಂದರ್ಶನದಲ್ಲಿ ಮಾತನಾಡಿರುವ ಕವಿರಾಜ್, ಚಿತ್ರರಂಗದ ಪರವಾಗಿ ಮಾತನಾಡಿದ್ದಾರೆ. ಸಾಮಾನ್ಯ ಮನುಷ್ಯನೇ ಸೆಲೆಬ್ರಿಟಿಯಾಗೋದು. ಆದರೆ ಸೆಲೆಬ್ರಿಟಿಗಳು ಏನೇ ಮಾಡಿದರೂ, ಅದನ್ನು ದೊಡ್ಡದು ಮಾಡೋದು ಯಾಕೆ ಅಂತ ಗೊತ್ತಿಲ್ಲ. ಸಿನಿಮಾದವರು ಕೊಲೆ ಮಾಡಿದ್ರೆ, ಅತ್ಯಾಚಾರ ಮಾಡಿದ್ರೆ, ಡ್ರಗ್ಸ್ ದಾಸರಾದ್ರೆ, ಅದನ್ನೇ ದೊಡ್ಡದು ಮಾಡುತ್ತಾರೆ.

ದೊಡ್ಡ ದೊಡ್ಡ ಕಾಲೇಜಿನ ಮುಂದೆ ನಿಂತು ನೋಡಿ, ಎಷ್ಟೋ ವಿದ್ಯಾರ್ಥಿಗಳು ಡ್ರಗ್ಸ್ ದಾಸರಾಗುತ್ತಿದ್ದಾರೆ. ಅವರನ್ನು ಹೋಗಿ ತಡೆಯಿರಿ. ಸಿನಿಮಾದವರು ಏನಾದ್ರೂ ಮಾಡಿಕೊಂಡು ಹೋಗಲಿ, ಅವರೇನು ಮುಖ್ಯವಲ್ಲ. ಅಲ್ಲಿ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತಿದೆ. ಅವರನ್ನು ಹೋಗಿ ತಡೆಯಿರಿ. ದೇಶದ ಉತ್ತಮ ಭವಿಷ್ಯಕ್ಕೆ ಬೇಕಾಗಿರುವುದು ವಿದ್ಯಾರ್ಥಿಗಳು ಹೊರತು ಸಿನಿಮಾದವರಲ್ಲ ಎಂದು ಕವಿರಾಜ್ ಹೇಳಿದ್ದಾರೆ.

ಇನ್ನು ದರ್ಶನ್ ಕೇಸ್ ಬಗ್ಗೆ ಮಾತನಾಡಿರುವ ಕವಿರಾಜ್, ಸತ್ಯವೇ ಬೇರೆ ಇದೆ. ಈಗ ಸಾಕಷ್ಟು ಸುಳ್ಳು ಸುದ್ದಿ ಬಂದಿದೆ. ಹಾಗಾಗಿ ತನಿಖೆ ಬಳಿಕ ಪ್ರತಿಕ್ರಿಯಿಸೋಣ. ಈಗಲೇ ಏನೇನೋ ಹೇಳೋದು, ಅಪರಾಧಿ ಎಂದು ಶಿಕ್ಷಿಸೋದು ತಪ್ಪು ಎಂದು ಕವಿರಾಜ್ ಹೇಳಿದ್ದಾರೆ. ಅವರ ಪೂರ್ತಿ ಸಂದರ್ಶನ ನೋಡಲು, ಈ ವೀಡಿಯೋ ಮೇಲೆ ಕ್ಲಿಕ್ ಮಾಡಿ.

- Advertisement -

Latest Posts

Don't Miss