Sandalwood News: ರೇಣುಕಾಸ್ವಾಮಿ ಹತ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ದರ್ಶನ್ ಅರೆಸ್ಟ್ ಆಗಿದ್ದು, ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಪ್ರಕರಣದ ಕುರಿತು ದರ್ಶನ್ ಪರ ವಕೀಲರು ಮಾತನಾಡಿದ್ದು, ದರ್ಶನ್ ಅವರು ಈ ಕೇಸ್ನಲ್ಲಿ ಭಾಗಿಯಾಗಿಲ್ಲ. ಕೊಲೆಯಾದ ನಂತರ ದರ್ಶನ್ಗೆ ಮಾಹಿತಿ ಗೊತ್ತಿಲ್ಲ ಎಂದು ಹೇಳಿದ್ದಾರೆ.
ರೇಣುಕಾಸ್ವಾಮಿ ಹತ್ಯೆಯಾದ ಸ್ಥಳದಲ್ಲಿ ದರ್ಶನ್ ಅವರು ಇರಲಿಲ್ಲ. ಪೊಲೀಸರು ಅರೆಸ್ಟ್ ಮಾಡಿದ ಬಳಿಕ ದರ್ಶನ್ ಅವರಿಗೆ ರೇಣುಕಾಸ್ವಾಮಿ ಕೊಲೆಯ ಬಗ್ಗೆ ಗೊತ್ತಾಗಿದೆ. ದರ್ಶನ್ ಅವರು ರೇಣುಕಾಸ್ವಾಮಿ ಅವರಿಗೆ ಹೊಡೆದಿದ್ದಾರೆ ಎಂಬುದಕ್ಕೆ ಸಾಕ್ಷಿಯೇ ಇಲ್ಲ. ಇಲ್ಲಿ ಪವಿತ್ರಾಗೌಡ ತಪ್ಪು ಇಲ್ಲ ಎಂದು ವಕೀಲರು ತಿಳಿಸಿದ್ದಾರೆ.
ಯಾರೋ ಹೊಡೆದಿರೋದಿಕ್ಕೆ ಆ ಥರ ದೇಹದಲ್ಲಿ ಗಾಯ ಆಗಿಲ್ಲ, ನಾಯಿ ಕಚ್ಚಿರುವ ಗಾಯ ಇದೆ. ಮರಣೋತ್ತರ ಪರೀಕ್ಷೆ ಬಂದಮೇಲೆ ಎಲ್ಲದಕ್ಕೂ ಉತ್ತರ ಸಿಗುತ್ತದೆ ಎಂದು ವಕೀಲ ನಾರಾಯಣಸ್ವಾಮಿ ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮುಗ್ಧರಿಗೆ ಶಿಕ್ಷೆ ಆಗಬಾರದು. ರೇಣುಕಾಸ್ವಾಮಿಗೆ ಕುಡಿತದ ಚಟ ಇರಬಹುದು. ಆತನಿಗೆ ಆರೋಗ್ಯ ಸಮಸ್ಯೆಯೂ ಇತ್ತು. ಯಾರೋ ಹೊಡೆದಿರಬಹುದು. ನಾವು ಕೊಂದಿದ್ದೇವೆ, ಹೊಡೆದಿದ್ದೇವೆ ಅಂತ ದರ್ಶನ್ ಆಗಲೀ, ಪವಿತ್ರಾ ಗೌಡ ಅವರಾಗಲೀ ಒಪ್ಪಿಕೊಂಡಿಲ್ಲ. ದರ್ಶನ್, ಪವಿತ್ರಾ ಗೌಡ ಆಗಲೀ ಅವರನ್ನು 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ತಗೊಂಡಿದ್ದಾರೆ. ಕೋರ್ಟ್‌ನಲ್ಲಿ ನಾವು ದಾಖಲಾತಿ ನೀಡುತ್ತೇವೆ ಎಂದು ದರ್ಶನ್ ಪರ ವಕೀಲರು ತಿಳಿಸಿದ್ದಾರೆ.
ಸ್ವಾಮಿ ಕೊಲೆಯಾದ ಪಟ್ಟಣಗೆರೆ ಶೆಡ್ನಲ್ಲಿ ಪೊಲೀಸರು ಸ್ಥಳ ಮಹಜರು ಮಾಡಿದ್ದಾರೆ. ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಿಂದ ಡಿಬಾಸ್ ಮತ್ತು ತಂಡವನ್ನು ಪೊಲೀಸರು ಕೊಲೆಯಾದ ಸ್ಥಳಕ್ಕೆ ಕರೆತಂದಿದ್ದು, ಯಾವಾಗ ಕೊಲೆಯಾಯ್ತು? ಹೇಗೆ ಕೊಲೆಯಾಯ್ತು? ಕೊಲೆಯಾದ ನಂತರ ಶವವನ್ನು ಎಲ್ಲಿ ಬಿಸಡಿದಿರಿ? ಎಂಬುದರ ಕುರಿತು ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ.
ರೇಣುಕಾ ಸ್ವಾಮಿ ಎಂಬುವವರನ್ನು ಹತ್ಯೆ ಮಾಡಿದ ಆರೋಪದಲ್ಲಿ ದರ್ಶನ್, ಪವಿತ್ರಾ ಗೌಡ, ವಿ. ವಿನಯ್, ಆರ್. ನಾಗರಾಜು, ಎಸ್. ಪ್ರದೋಶ್, ಎಂ. ಲಕ್ಷ್ಮಣ್, ಕೆ. ಪವನ್, ನಂದೀಶ್, ದೀಪಕ್ ಕುಮಾರ್, ಕಾರ್ತಿಕ್, ನಿಖಿಲ್ ನಾಯಕ್, ರಾಘವೇಂದ್ರ ಅಲಿಯಾಸ್ ರಾಘು, ಕೇಶವಮೂರ್ತಿ ಪೊಲೀಸರ ಅತಿಥಿ ಆಗಿದ್ದಾರೆ. ಎಲ್ಲರನ್ನೂ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಮೈಸೂರು ದಸರಾ ಆನೆ ಇನ್ನಿಲ್ಲ: ವಿದ್ಯುತ್ ತಂತಿ ತಗುಲಿ ಅಶ್ವತ್ಥಾಮ ಸಾವು