Kolar News: ಕೋಲಾರ: ಕೋಲಾರದ ಬಂಗಾರಪೇಟೆಯಲ್ಲಿ ಮರ್ಯಾದಾ ಹತ್ಯೆ ನಡೆದಿದ್ದು, ಬೇರೆ ಜಾತಿಯ ಯುವಕನನ್ನು ಪ್ರೀತಿಸಿದ್ದಕ್ಕೆ, ತಂದೆಯೇ ಮಗಳ ಕತ್ತು ಹಿಸುಕಿ ಹತ್ಯೆ ಮಾಡಿದ್ದಾರೆ.
ಬೋಡಗುರ್ಕಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸ್ಥಳದಲ್ಲಿ ಪೋಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಕೀರ್ತಿ(20) ಎನ್ನುವ ಯುವತಿ ಅದೇ ಗ್ರಾಮದ ಗಂಗಾಧರ(24) ಎಂಬುವವನನ್ನು ಪ್ರೀತಿಸುತ್ತಿದ್ದಳು. ಇದನ್ನು ವಿರೋಧಿಸಿದ ಕೀರ್ತಿ ತಂದೆ ಕೃಷ್ಣಮೂರ್ತಿ (49), ಮಗಳ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ.
ತಾನು ಪ್ರೀತಿಸಿದ ಯುವತಿಯ ಸಾವನ ಸುದ್ದಿ ಕೇಳಿ, ಗಂಗಾಧರ್ ರೈಲಿಗೆ ಸಿಲುಕಿ ಪ್ರಾಣ ಬಿಟ್ಟಿದ್ದಾನೆ. ದಾರುಣ ಅಂತ್ಯ ಕಂಡ ಪ್ರೇಮಿಗಳ ಅಂತ್ಯಸಂಸ್ಕಾರವನ್ನು ಈಗಾಗಲೇ ಮಾಡಲಾಗಿದ್ದು, ಮಗಳನ್ನ ಕೊಂದ ತಂದೆ ಪೊಲೀಸರ ಅತಿಥಿಯಾಗಿದ್ದಾನೆ. ಕಾಮಸಮುದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶತಮಾನದಷ್ಟು ಹಳೆಯದಾದ ಹುಣಸೂರು ಸೇತುವೆ ಶಿಥಿಲ, ನಿಷೇಧವಿದ್ದರೂ ಸಂಚರಿಸುವ ಭಾರಿ ವಾಹನಗಳು
ಅಕ್ಕಿ ಬರುವವರೆಗೂ 5 ಕೆಜಿ ಅಕ್ಕಿ ಬದಲಿಗೆ ಹಣ ನೀಡಲು ರಾಜ್ಯ ಸರ್ಕಾರ ನಿರ್ಧಾರ