Tuesday, May 21, 2024

Latest Posts

ಹಾಸನ, ಮಂಡ್ಯ, ಬೆ.ದಕ್ಷಿಣ ಕಾಂಗ್ರೆಸ್ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ನಡೆಸಿದ ಡಿಸಿಎಂ ಡಿಕೆಶಿ

- Advertisement -

Political News: ಡಿಸಿಎಂ ಡಿ.ಕೆ.ಶಿವಕುಮಾರ್ ನಿನ್ನೆ ಬೆಂಗಳೂರಿನ ರಾಜರಾಜೇಶ್ವರಿ ನರಗದಲ್ಲಿ ಪ್ರಚಾರ ಕಾರ್ಯ ಆರಂಭಿಸಿದರು. ದೇವಿ ರಾಜರಾಜೇಶ್ವರಿಯ ಆಶೀರ್ವಾದ ಪಡೆಯುವ ಮೂಲಕ ಚುನಾವಣಾ ಪ್ರಚಾರದಲ್ಲಿ ಭಾಗಿಯಾದ ಡಿಕೆಶಿ, ಇಂದು ಹಾಸನ, ಮಂಡ್ಯ ಮತ್ತು ಬೆಂಗಳೂರಿನ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ್ದಾರೆ.

ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯಾ ರೆಡ್ಡಿ ಸ್ಪರ್ಧಿಸುತ್ತಿದ್ದು, ಇವರನ್ನು ನೀವು ಮನೆಮಗಳು ಎಂದು ತಿಳಿದು ಗೆಲ್ಲಿಸಬೇಕು ಎಂದು ಡಿಕೆಶಿ ಜನರಲ್ಲಿ ಮನವಿ ಮಾಡಿದ್ದಾರೆ. ಈ ಭಾಗದಲ್ಲಿ ಬಿಜೆಪಿ ಕಡೆಯಿಂದ ತೇಜಸ್ವಿ ಸೂರ್ಯ ಸ್ಪರ್ಧಿಸುತ್ತಿದ್ದಾರೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಶ್ರೀಮತಿ ಸೌಮ್ಯ ರೆಡ್ಡಿ ಅವರ ನಾಮಪತ್ರ ಸಲ್ಲಿಕೆಗೂ ಮುನ್ನ ಬೃಹತ್‌ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದೆ. ವಿಜಯಕ್ಕೆ ನಾಯಕನಾದ ವಿನಾಯಕನ ದರ್ಶನ ಪಡೆದು ನಾಮಪತ್ರ ಸಲ್ಲಿಸುತ್ತಿದ್ದೇವೆ. ಇಡೀ ರಾಜ್ಯದಾದ್ಯಂತ ನಾನು ಹಾಗೂ ಮುಖ್ಯಮಂತ್ರಿಗಳು ಪ್ರವಾಸ ಮಾಡಿದ್ದೇವೆ. ಕರ್ನಾಟಕದಲ್ಲಿ ಖಂಡಿತ ಮೋದಿ ಅಲೆಯಾಗಲೀ, ಬಿಜೆಪಿ ಅಲೆಯಾಗಲೀ ಇಲ್ಲ. ಈಗ ಇರುವುದು ಗ್ಯಾರಂಟಿ ಅಲೆ ಮಾತ್ರ. ಹೆಣ್ಣನ್ನು ಶಕ್ತಿಸ್ವರೂಪಿಣಿ ಎನ್ನುತ್ತೇವೆ. ಈ ಬಾರಿ ಕರ್ನಾಟಕದಲ್ಲಿ 6 ಮಹಿಳೆಯರಿಗೆ ಲೋಕಸಭಾ ಟಿಕೆಟ್‌ ನೀಡುವ ಮೂಲಕ ಒಂದು ಇತಿಹಾಸ ಬರೆದಿದ್ದೇವೆ. ಸೌಮ್ಯ ರೆಡ್ಡಿ ಅವರನ್ನ ಕನಿಷ್ಠ ಒಂದು ಲಕ್ಷ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದೆ ಎಂದು ಡಿಕೆಶಿ ಟ್ವೀಟ್ ಮಾಡಿದ್ದಾರೆ.

ಇನ್ನು ಹಾಸನದಲ್ಲಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ವಿರುದ್ಧ ಶ್ರೇಯಸ್ ಪಟೇಲ್ ಕಾಂಗ್ರೆಸ್ ಕ್ಯಾಂಡಿಡೇಟ್ ಆಗಿ ಸ್ಪರ್ಧಿಸುತ್ತಿದ್ದಾರೆ. ಶ್ರೇಯಸ್‌ಗೆ ಈ ಚುನಾವಣೆ ಬುನಾದಿ ಇದ್ದ ಹಾಗೆ. ಹಾಗಾಗಿ ಶ್ರೇಯಸ್‌ನನ್ನು ಗೆಲ್ಲಿಸಬೇಕು ಎಂದು ಡಿಕೆಶಿ ಮನವಿ ಮಾಡಿದ್ದಾರೆ. ನಕ್ಷತ್ರಗಳನ್ನು ಎಣಿಸಿಬಿಡಬಹುದೇನೋ, ಹಾಸನದ ಕಾಂಗ್ರೆಸ್‌ ಬೆಂಬಲಿಗರನ್ನು ಎಣಿಸೋದು ಅಸಾಧ್ಯ! ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಶ್ರೀ ಶ್ರೇಯಸ್‌ ಪಟೇಲ್‌ ಅವರ ನಾಮಪತ್ರ ಸಲ್ಲಿಕೆಗೂ ಮುನ್ನ ನಡೆದ ಬೃಹತ್‌ ರೋಡ್‌ಶೋನಲ್ಲಿ ಪಾಲ್ಗೊಂಡೆ. ಇಲ್ಲಿನ ಜನತೆ ನೀಡಿದ ಅಪಾರ ಬೆಂಬಲ, ಪ್ರೀತಿ, ಸಹಕಾರ ಕಾಂಗ್ರೆಸ್‌ ಗೆಲುವಿಗೆ ಮುನ್ನುಡಿ ಬರೆದಂತಿದೆ. ತಾಯಿ ಹಾಸನಾಂಬೆಯ ಕೃಪೆ ಇರಲಿ ಎಂದು ಶ್ರೇಯಸ್‌ ಪಟೇಲ್‌ ಅವರಿಗೆ ಶುಭ ಹಾರೈಸಿದೆ ಎಂದು ಡಿಕೆಶಿ ಟ್ವೀಟ್ ಮಾಡಿದ್ದಾರೆ

ಇನ್ನು ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಅವರು ಇಂದು ನಾಮಪತ್ರ ಸಲ್ಲಿಸಿದ್ದು, ಈ ವೇಳೆ ಡಿಕೆಶಿ ಹಾಜರಿದ್ದು, ಸ್ಟಾರ್ ಚಂದ್ರು ಅವರನ್ನು ಹಾರೈಸಿದ್ದಾರೆ. ಮಂಡ್ಯ ಹೇಳ್ತಿದೆ ಕಾಂಗ್ರೆಸ್‌ಗೆ ಜೈಹೋ! ಸಕ್ಕರೆ ನಗರಿ ಮಂಡ್ಯ ಜನರ ಮನಸ್ಸು ತುಂಬಾನೇ ಸಿಹಿ. ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಶ್ರೀ ವೆಂಕಟರಮಣೇಗೌಡ (ಸ್ಟಾರ್‌ ಚಂದ್ರು) ಅವರ ನಾಮಪತ್ರ ಸಲ್ಲಿಕೆಗೂ ಮುನ್ನ ಆಯೋಜಿಸಿದ್ದ ಪ್ರಚಾರ ಕಾರ್ಯಕ್ರಮದಲ್ಲಿ ಸಾವಿರಾರು ಜನರು ಪಾಲ್ಗೊಂಡು ಅದ್ಧೂರಿ ಸ್ವಾಗತ ನೀಡಿದರು. ಮಂಡ್ಯ ಜನರು ಬುದ್ಧಿವಂತರಿದ್ದಾರೆ. ಅವರು ಈ ಬಾರಿ ಯೋಚಿಸಿ ಮತದಾನ ಮಾಡಿ ನಮ್ಮ ಅಭ್ಯರ್ಥಿಯನ್ನು ಖಂಡಿತವಾಗಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸುವ ವಿಶ್ವಾಸವಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಕನಿಷ್ಠ 200 ಸ್ಥಾನಗಳನ್ನು ಗೆದ್ದು ತೋರಿಸಿ: ಬಿಜೆಪಿಗೆ ಮಮತಾ ಬ್ಯಾನರ್ಜಿ ಚಾಲೆಂಜ್

ಹುಟ್ಟುಹಬ್ಬಕ್ಕೆ ಅನ್ನದಾನ, ಪ್ರಚಾರ ಮಾಡಬೇಡಿ ಎಂದ ನಟಿ ಸಾರಾ ಅಲಿ ಖಾನ್

ರಾಜರಾಜೇಶ್ವರಿಯ ಆಶೀರ್ವಾದದೊಂದಿಗೆ ಪ್ರಚಾರ ಕಾರ್ಯ ಆರಂಭಿಸಿದ ಡಿಸಿಎಂ ಡಿಕೆಶಿ

- Advertisement -

Latest Posts

Don't Miss