ಕನ್ನಡ ಚಿತ್ರರಂಗದ ಹಿರಿಯ ನಟ ಅಶ್ವತ್ ನಾರಾಯಣ್ (Senior actor Ashwath Narayan) ನಿನ್ನೆ ವಯೋಸಹಜ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ. ಇವರು ಬಾಲನಟನಾಗಿ ಅಭಿನಯಿಸಿದ್ದಾರೆ. ಡಾ ರಾಜಕುಮಾರ್ (Dr. Rajkumar) ಅವರ ಬಹುತೇಕ ಚಿತ್ರಗಳಲ್ಲಿ ಇವರು ನಟನೆಯನ್ನು ಮಾಡಿದ್ದಾರೆ. ಹಾಗೆಯೇ ಶಿವರಾಜಕುಮಾರ್, ಪುನೀತ್ ರಾಜಕುಮಾರ್ (Puneeth Rajkumar), ಹಾಗೂ ರಾಘವೇಂದ್ರ ರಾಜಕುಮಾರ್ ಅವರ ಸಿನಿಮಾಗಳಲ್ಲಿಯೂ ಸಹ ಅಭಿನಯಿಸಿದ್ದಾರೆ. ಇವರು ತಮ್ಮ 11ನೇ ವಯಸ್ಸಿನಲ್ಲಿಯೇ ರಂಗಭೂಮಿಗೆ ಪದಾರ್ಪಣೆ ಮಾಡಿದ್ದಾರೆ. ಚಂದವಳ್ಳಿ ತೋಟ ಚಿತ್ರದ ಮೂಲಕ ಕನ್ನಡ ಚಿತ್ರರಂಗದ ಪ್ರವೇಶ ಮಾಡಿದರು. ಸುಮಾರು 350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅಷ್ಟೇ ಅಲ್ಲದೆ 600ಕ್ಕೂ ಹೆಚ್ಚು ನಾಟಕಗಳಲ್ಲಿಯೂ ಸಹ ಅಭಿನಯಿಸಿದ್ದಾರೆ. ಇವರು ಬೆಂಗಳೂರಿನ ಶಿವನಹಳ್ಳಿ ಹಳ್ಳಿ (village of Shivanahalli) ವಾಸವಿದ್ದು, ಇತ್ತೀಚಿಗೆ ಮಕ್ಕಳು ಕಿರುಕುಳ ನೀಡುತ್ತಿದ್ದಾರೆ ಎಂದು ತಮ್ಮ ಎರಡನೇ ಮಗಳ ಜೊತೆ ಬಸವೇಶ್ವರ ನಗರ ಪೊಲೀಸ್ ಠಾಣೆಗೆ (Basaveshwara City Police Station) ದೂರನ್ನು ಸಹ ನೀಡಿದ್ದರು. ಕೊರೋನಾ (Corona) ಸಮಯದಲ್ಲಿ ಇವರಿಗೆ ಅನೇಕರು ಸಹಾಯವನ್ನು ಮಾಡಿದ್ದಾರೆ. ಇವರಿಗೆ ಮಕ್ಕಳು ಹಣವನ್ನು ನೀಡುತ್ತಿಲ್ಲ ಎಂದು ಸಹ ಆರೋಪವನ್ನು ಮಾಡಿದ್ದರು. ಆದರೆ ಪತ್ನಿ ಹಾಗೂ ಮಕ್ಕಳು ಈ ದೂರನ್ನು ತಳ್ಳಿಹಾಕಿದ್ದಾರೆ. ನಾವು ಅವರನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ. ಏನೇ ಆಗಲಿ ತಮ್ಮ 82 ನೇ ವಯಸ್ಸಿನ ಕೊನೆಗಾಲದಲ್ಲಿ ನೆಮ್ಮದಿಯಿಂದ ಜೀವನ ಮುಗಿಸಬೇಕಾದ ಇವರು ನೋವುಗಳಿಂದ ಸಾವನ್ನಪ್ಪಿರುವುದು ವಿಷಾದಕರ ಸಂಗತಿ.