Sports News: Hyderabad: ಕೆಲವರಿಗೆ ಕ್ರಿಕೇಟ್ ಅಂದ್ರೆ ಬರೀ ಆಟವಷ್ಟೇ. ಇನ್ನು ಕೆಲವರಿಗೆ ಕ್ರಿಕೇಟ್ ಎಂದರೆ ಉಸಿರು. ಅಂಥವರು ತಮ್ಮ ನೆಚ್ಚಿನ ತಂಡ ಆಟದಲ್ಲಿ ಗೆದ್ದರೆ, ಆನಂದ ಬಾಷ್ಪ ಸುರಿಸಿ, ಖುಷಿ ಪಡುತ್ತಾರೆ. ಇನ್ನು ಕೆಲವರು ತಮ್ಮ ನೆಚ್ಚಿನ ಟೀಮ್ ಆಟದಲ್ಲಿ ಸೋತರೇ, ತಾವೇ ಜೀವನದಲ್ಲಿ ಸೋತು ಬಿಟ್ಟೆವು ಅನ್ನುವಷ್ಟು ಮನಸ್ಸಿಗೆ ಹಚ್ಚಿಕೊಳ್ಳುತ್ತಾರೆ. ಇಂಥದ್ದೇ ಒಂದು ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.
ನಿನ್ನೆ ಅಹಮದಾಬಾದ್‌ನ ಮೋದಿ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ಮತ್ತು ಭಾರತದ ವರ್ಲ್ಡ್ ಕಪ್ ಮ್ಯಾಚ್ ನಡೆದು, ಭಾರತಕ್ಕೆ ಸೋಲಾಯಿತು. ಇದನ್ನೇ ಮನಸ್ಸಿಗೆ ಹಚ್ಚಿಕೊಂಡು, ಟಿವಿ ಮುಂದೆ ಕುಸಿದು ಬಿದ್ದ ವ್ಯಕ್ತಿಯೋರ್ವ ಮೃತಪಟ್ಟಿದ್ದಾನೆ. ಹೈದರಾಬಾದ್‌ನ ತಿರುಪತಿಯಲ್ಲಿ ಈ ಘಟನೆ ನಡೆದಿದ್ದು, ಜ್ಯೋತಿಷ್ ಕುಮಾರ್ ಯಾದವ್(35) ಮೃತ ವ್ಯಕ್ತಿಯಾಗಿದ್ದಾನೆ.
ಈತ ಬೆಂಗಳೂರಿನಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. ದೀಪಾವಳಿ ರಜೆ ತೆಗೆದುಕೊಂಡು, ತನ್ನ ಊರು ತಿರುಪತಿಗೆ ಬಂದಿದ್ದ. ವಿಶ್ವಕಪ್ ಮ್ಯಾಚ್ ಇದ್ದ ಕಾರಣ, ಮನೆಯಲ್ಲೇ ಕುಳಿತು ಕುತೂಹಲದಿಂದ ಮ್ಯಾಚ್ ನೋಡಿದ್ದಾನೆ. ಮ್ಯಾಚ್ ಇನ್ನೇನು ಸೋಲುತ್ತದೆ ಎಂದು ಗೊತ್ತಾದಾಗ, ಜ್ಯೋತಿಶ್ ಟಿವಿಯ ಮುಂದೆ ಕುಸಿದು ಬಿದ್ದಿದ್ದಾನೆ. ಮನೆಯವರು ತಕ್ಷಣ, ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅದಾಗಲೇ ಜ್ಯೋತಿಷ್ ಪ್ರಾಣ ಹೋಗಿತ್ತು.
ಟ್ರೋಫಿ ಮೇಲೆ ಕಾಲಿಟ್ಟು ಕುಳಿತ ಆಸ್ಟ್ರೇಲಿಯಾ ಆಟಗಾರ: ಭಾರತಕ್ಕೆ ಸಿಕ್ಕಿದ್ರೆ ಪೂಜಿಸುತ್ತಿದ್ದೆವು ಎಂದ ನೆಟ್ಟಿಗರು
ವಿಶ್ವಕಪ್ ಫೈನಲ್ ಮ್ಯಾಚ್ ಇಂಡಿಯಾ ಗೆಲ್ಲಲಿ ಎಂದು ಹುಬ್ಬಳ್ಳಿಯಲ್ಲಿ ವಿಶೇಷ ಪೂಜೆ ಸಲ್ಲಿಕೆ..
World Cup ವಿಶೇಷ: ಮಣ್ಣಿನಲ್ಲಿ ಸಿದ್ಧವಾಯ್ತು 23 ಸೆ.ಮೀ. ಉದ್ದದ ವಿಶ್ವಕಪ್