Monday, December 23, 2024

Latest Posts

ಸರ್ಕಾರಿ ಜಾಗ ಕಬಳಿಸಿದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ: ಸಚಿವ ಕೃಷ್ಣಭೈರೇಗೌಡ..

- Advertisement -

Political News: ಬೆಂಗಳೂರು: ಸರ್ಕಾರಿ ಜಾಗಗಳನ್ನು ತಮ್ಮದೆಂದು ಕಬಳಿಕೆ ಮಾಡಿರರುವವರ ವಿರುದ್ಧ ರಾಜ್ಯ ಸರ್ಕಾರ, ಕ್ರಮ ಕೈಗೊಳ್ಳಲು ನಿರ್ಧರಿಸಿದ್ದು, ಅಧಿಕಾರಿಗಳೊಂದಿಗೆ ಸಚಿವ ಕೃಷ್ಣಭೈರೇಗೌಡರು ಈ ಬಗ್ಗೆ ಚರ್ಚಿಸಿದ್ದಾರೆ.

ದಾಖಲೆಗಳಲ್ಲಿ ‘ಸರ್ಕಾರಿ’ ಎಂದು ನಮೂದಾಗಿರುವ ಅನೇಕ ಜಮೀನುಗಳು ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಭೂಗಳ್ಳರ ಪಾಲಾಗುತ್ತಿರುವುದನ್ನು ತಪ್ಪಿಸಿ ಅಂತಹ ಆಸ್ತಿಗಳನ್ನು ಮತ್ತೆ ಸರ್ಕಾರಕ್ಕೆ ಪಡೆಯಲು ಗಂಭೀರ ಮತ್ತು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕಾಗಿರುತ್ತದೆ. ಈ ಸಂಬಂಧ ಅಧಿಕಾರಿಗಳ ಸರಣಿ ಸಭೆ ನಡೆಸಿ ಸೂಚನೆ ನೀಡಲಾಗಿದೆ.

ಯಲಹಂಕ ತಾಲ್ಲೂಕು ಜಾಲ ಹೋಬಳಿಯಲ್ಲಿ ಸರ್ಕಾರದ ವಶದಲ್ಲಿದ್ದ, ‘ಸರ್ಕಾರಿ’ ಎಂದು ದಾಖಲೆಯಲ್ಲಿದ್ದ ಅತ್ಯಂತ ಬೆಲೆ ಬಾಳುವ ಜಮೀನುಗಳನ್ನು ಕಳೆದ ಕೆಲವು ವರ್ಷಗಳಿಂದ ಅಕ್ರಮವಾಗಿ ನೈಜವಲ್ಲದ ದಾಖಲೆಗಳ ಆಧಾರದ ಮೇಲೆ ಖಾಸಗಿಯವರ ಹೆಸರಿಗೆ ದಾಖಲೆಗಳನ್ನು ಮಾಡಿಕೊಡಲಾಗಿರುವುದನ್ನು ಗಮನಿಸಲಾಗಿದೆ. ಇಂತಹ ಕೆಲವು ಪ್ರಕರಣಗಳನ್ನು ಈ ಕೆಳಕಂಡಂತಿವೆ.

# ನವರತ್ನ ಅಗ್ರಹಾರ ಸರ್ವೆ ನಂ.03ರಲ್ಲಿ 5-09 ಎಕರೆ ಮತ್ತು ಸರ್ವೆ ನಂ.13ರಲ್ಲಿ 5-00 ಎಕರೆ ಸುಮಾರು ರೂ. 25.00 ಕೋಟಿ ಬೆಲೆ ಬಾಳುವ ಸರ್ಕಾರದ ವಶದಲ್ಲಿದ ಜಮೀನು ಇಂದು ಖಾಸಗಿಯವರಿಗೆ ಪಾಲಾಗಿದೆ. ತಪ್ಪು ವರದಿಗಳನ್ನು ನೀಡಿ ಖಾಸಗಿಯವರಿಗೆ ಅನುಕೂಲ ಮಾಡಿಕೊಡಲಾಗಿದೆ ಎನ್ನುವ ಆರೋಪವಿದೆ.

# ಹುಣಸಮಾರನಹಳ್ಳಿ ಸರ್ವೆ ನಂ.179 ರಲ್ಲಿ 13 ಎಕರೆ ಸುಮಾರು ರೂ. 120.00 ಕೋಟಿ ಬೆಲೆ ಬಾಳುವ ಜಮೀನು ಹಿಂದೆ ಸತತವಾಗಿ ಸರ್ಕಾರಿ ಎಂದು ಆದೇಶವಾಗಿ, ಸರ್ಕಾರದ ವಶದಲ್ಲಿದ್ದರೂ, ಖಾಸಗಿಯವರ ಪಾಲಾಗಿದ್ದು ಹೇಗೆ ಎಂಬುದರ ಬಗ್ಗೆ ಪರಿಶೀಲಸಬೇಕಾಗಿರುತ್ತದೆ.

# ಕಾಡಗಾನಹಳ್ಳಿ ಸರ್ವೆ ನಂ.23ರಲ್ಲಿ 01 ಎಕರೆ ರೂ. 6.00 ಕೋಟಿ ಬೆಲೆ ಬಾಳುವ ಸರ್ಕಾರದ ಜಮೀನು ಇಂದು ಖಾಸಗಿಯವರ ಪಾಲಾಗಿದೆ.

# ಕುದುರೆಗೆರೆ ಸರ್ವೆ ನಂ. 55ರಲ್ಲಿ 1.30 ಎಕರೆ ಮತ್ತು ಸರ್ವೆ ನಂ.59ರಲ್ಲಿ 7.05 ಎಕರೆ ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಮಂಜೂರಾಗಿದ್ದ ಸುಮಾರು ರೂ. 25.00 ಕೋಟಿ ಬೆಲೆ ಬಾಳುವ ಸರ್ಕಾರದ ಜಮೀನನ್ನು ಕೂಡ ಇಂದು ಖಾಸಗಿಯವರಿಗೆ ನೀಡಲಾಗಿದೆ.

# ಕಟ್ಟಿಗೇನಹಳ್ಳಿ ಸರ್ವೆ ನಂ.28ರಲ್ಲಿ 02 ಎಕರೆ ಸುಮಾರು ರೂ. 20.00 ಕೋಟಿ ಬೆಲೆ ಬಾಳುವ ಸರ್ಕಾರದ ಜಮೀನು ಇಂದು ಭೂಗಳ್ಳರ ಪಾಲಾಗಿದೆ ಮತ್ತು ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಮಂಜೂರಾಗಿರುವ 04 ಎಕರೆ ಜಮೀನು ಸುಮಾರು ರೂ. 40.00 ಕೋಟಿ ಬೆಲೆ ಬಾಳುವ ಸರ್ಕಾರದ ಜಮೀನನ್ನು ಕಬಳಿಸಲು ಖಾಸಗಿಯವರ ಸಂಚು ನಡೆಯುತ್ತಿರುವ ಮಾಹಿತಿ ಇದೆ.

# ತಿರುಮೇನಹಳ್ಳಿ ಸರ್ವೆ ನಂ.42ರಲ್ಲಿ 2-12 ಎಕರೆ ಸುಮಾರು ರೂ.22.00 ಕೋಟಿ ಬೆಲೆ ಬಾಳುವ ಸರ್ಕಾರದ ಜಮೀನು ಖಾಸಗಿಯವರಿಗೆ ಮಂಜೂರು ಮಾಡಲು ಪ್ರಯತ್ನ ನಡೆದಿರುವ ಆರೋಪ ಕೂಡ ಇದೆ.

ಜಾಲ ಹೋಬಳಿ, ಬೈಯಪ್ಪನಹಳ್ಳಿ ಸರ್ವೆ ನಂ.80ರಲ್ಲಿ 23.20 ಎಕರೆ ಜಮೀನನ್ನು ರಾಜೀವ್ಗಾಂಧಿ ವಸತಿ ನಿಗಮಕ್ಕೆ ಮಂಜೂರಾಗಿದ್ದ ಅದರಲ್ಲಿ 10 ಎಕರೆ ಜಮೀನಿನಲ್ಲಿ ಕಲ್ಲು ಬಂಡೆ ಇರುತ್ತದೆ, 2.20 ಎಕರೆ ಖಾಸಗಿ ವ್ಯಕ್ತಿಗಳಿಗೆ ಪಹಣಿಯಾಗಿರುತ್ತದೆ ಹಾಗೂ 3.00 ಎಕರೆ ಜಮೀನನ್ನು ಅನಾಧಿಕೃತ ವ್ಯಕ್ತಿಯು ತಮ್ಮದಾಗಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಕುರಿತು ಮಾಹಿತಿ ಇದೆ.

ಇಂತಹ ಬೆಲೆ ಬಾಳುವ ಸರ್ಕಾರಿ ಜಮೀನುಗಳು ಖಾಸಗಿಯವರ ವಶಕ್ಕೆ ಬಂದಿದ್ದು ಹೇಗೆ? ಅನುಭವದಲ್ಲಿ ಎಂದೂ ಇಲ್ಲದೆ ಇದ್ದರೂ ಖಾಸಗಿಯವರಿಗೆ ನೀಡಲು ಸಾಧ್ಯವೇ? ಇದರಲ್ಲಿ ತಪ್ಪುಗಳು/ಅಕ್ರಮಗಳು ನಡೆದಿವೆಯೇ? ದಾಖಲೆಗಳು ನೈಜವೇ? ಅಸಮರ್ಪಕ ದಾಖಲೆಗಳು, ತಪ್ಪು ಅಥವಾ ಉದ್ದೇಶಪೂರ್ವಕವಾಗಿ ದ್ವಂದ್ವ ವರದಿಗಳನ್ನು ನೀಡಲಾಗಿದೆಯೆ? ಎಂಬ ಕುರಿತು ಮಾಹಿತಿ ಕಲೆಹಾಕುವಂತೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರಿಗೆ ಆದೇಶಿಸಲಾಗಿದೆ.

(1) ಈ ಅಂಶಗಳನ್ನು ಪರಿಶೀಲಿಸಿ, ನಡೆದಿರಬಹುದಾದ ತಪ್ಪು/ಅಕ್ರಮಗಳ ಬಗ್ಗೆ ಮತ್ತು ತಪ್ಪು ಮಾಡಿರುವ, ತಪ್ಪು/ದ್ವಂದ್ವ ವರದಿ ನೀಡಿ ಸಹಕರಿಸಿರುವ ಅಧಿಕಾರಿಗಳು ಯಾರು ಎಂಬ ತನಿಖಾ ವರದಿಯನ್ನು ಒಂದು ತಿಂಗಳೊಳಗೆ ನೀಡಲು ಸೂಚಿಸಿದೆ.

(2) ತಪ್ಪುಗಳಿಂದ ಸರ್ಕಾರಿ ಆಸ್ತಿಗಳು ಖಾಸಗಿಯವರ ಪಾಲಗಿದ್ದರೆ, ಅವುಗಳನ್ನು ಮತ್ತೆ ಸರ್ಕಾರಕ್ಕೆ ವಶಪಡಿಸಿಕೊಳ್ಳಲು ಕ್ರಮವಹಿಸುವುದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಸರ್ಕಾರಿ ಭೂಮಿಯನ್ನು ಭೂಗಳ್ಳರು ಅಕ್ರಮವಾಗಿ ತಮ್ಮ ಹೆಸರಿಗೆ ದಾಖಲೆ ಮಾಡಿಕೊಂಡಿದ್ದಾರೆ. ಹೀಗೆ ಅಕ್ರಮವಾಗಿ ಕಬಳಿಸಲಾದ ಸರ್ಕಾರಿ ಭೂಮಿಯನ್ನು ಮತ್ತೆ ಸರ್ಕಾರದ ವಶಪಡಿಸಿಕೊಳ್ಳಲು ನಾವು ಬದ್ಧರಾಗಿದ್ದೇವೆ. ಈ ಸಂಬಂಧ ನಾವು ನೀಡಿದ ಆಶ್ವಾಸನೆಯನ್ನು ಇದೀಗ ಈಡೇರಿಸುವ ಸಮಯ ಬಂದಿದೆ. ಅತೀ ಶೀಘ್ರದಲ್ಲಿ ಖಾಸಗಿಯವರಿಂದ-ಭೂಗಳ್ಳರಿಂದ ಕಬಳಿಸಲಾದ ಎಲ್ಲ ಸರ್ಕಾರಿ ಜಮೀನುಗಳನ್ನೂ ಕಾನೂನಾತ್ಮಕವಾಗಿ ವಶಕ್ಕೆ ಪಡೆಯಲಾಗುವುದು.

(ಕೃಷ್ಣ ಬೈರೇಗೌಡ)

KT Ramarao: ಹುಟ್ಟು ಹಬ್ಬದ ಅಂಗವಾಗಿ  ಟೊಮಾಟೋ ವಿತರಿಸಿದ ಸಚಿವರು

ರಾಜ್ಯದಲ್ಲಿ ಚುರುಕಾದ ಮಳೆ, ಮುನ್ನೆಚ್ಚರಿಕಾ ಕ್ರಮವಹಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ: ಸಚಿವ ಕೃಷ್ಣಭೈರೇಗೌಡ

Dhakshina Kannada Rain : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ

- Advertisement -

Latest Posts

Don't Miss