Wednesday, April 24, 2024

Latest Posts

ಧಾರವಾಡ ಲೋಕಸಭಾ ಬಿಜೆಪಿ‌ ಅಭ್ಯರ್ಥಿ ಜೋಶಿ ಬದಲಾವಣೆಗೆ ಪಟ್ಟು ಹಿಡಿದಿರೋ ದಿಂಗಲೇಶ್ವರರಿಂದ ಭಕ್ತರ ಸಭೆ

- Advertisement -

Dharwad News: ದಿನಕಳೆದಂತೆ ಧಾರವಾಡದಲ್ಲಿ ಲೋಕಸಭಾ ಚುನಾವಣೆ ಕಾವು ಏರುತ್ತಿದೆ. ಅಭ್ಯರ್ಥಿಗಳು ಈಗಾಗಲೇ ಚುನಾವಣೆ ತಯಾರಿಲ್ಲಿದ್ದು, ಆದರೆ ಕೇಂದ್ರ ಸರಕಾರದ ಹಾಲಿ ಸಚಿವರಾಗಿರುವ ಹಾಗೂ ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿಯವರ ಬದಲಾವಣೆಗೆ ಪಟ್ಟು ಹಿಡಿದಿರುವ ಶಿರಹಟ್ಟಿ ಫಕೀರ ದಿಂಗಾಲೇಶ್ವರ ಶ್ರೀಗಳು ಇಂದು ಧಾರವಾಡದಲ್ಲಿ ಭಕ್ತರ ಸಭೆ ಕರೆದಿದ್ದು, ಸಭೆಗೆ ಈಗ ಆರಂಭವಾಗಿದೆ.

ವೈ- ಧಾರವಾಡದ ಸೇವಾಲಯದಲ್ಲಿ ಶ್ರೀಗಳು ಭಕ್ತರ ಸಭೆ ಕರೆದಿದ್ದು, ಈಗಾಗಲೇ ನೂರಾರು ಸಂಖ್ಯೆಯಲ್ಲಿ ಭಕ್ತರು ಸೇರಿದ್ದಾರೆ.‌ ಶ್ರೀ ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳ ಅಧ್ಯಕ್ಷತೆಯಲ್ಲಿ ಸಭೆ ಈಗ ಆರಂಭವಾಗಿದೆ. ವೇದಿಕೆಯಲ್ಲಿ ಒಂದೇ ಒಂದು ಆಸನವನ್ನ ಹಾಕಲಾಗಿದ್ದು, ಬೇರೆ ಯಾವುದೇ ಮಠದ ಸ್ವಾಮಿಗಳು ಭಕ್ತರ ಸಭೆಯಲ್ಲಿ ಭಾಗವಹಿಸಿಲ್ಲ. ಇನ್ನೂ ಶ್ರೀಗಳು ತಾವು ತೆಗೆದುಕೊಂಡ ಧಾರವಾಡ ಲೋಕಸಭಾ ಅಭ್ಯರ್ಥಿ ಜೋಶಿ ಬದಲಾವಣೆ ನಿರ್ಧಾರ ಹಾಗೂ ಬಿಜೆಪಿ ನಾಯಕರ ನಡೆಯ ಬಗ್ಗೆ ಭಕ್ತರ ಮುಂದೆ ತೆರೆದಿಟ್ಡು, ಭಕ್ತರ ಅಭಿಪ್ರಾಯ ಸಂಗ್ರಹ ಮಾಡಲಿದ್ದಾರೆ. ಬಳಿಕ ಸಭೆಯಲ್ಲಿ ಕೆಲವು ನಿರ್ಣಯ ತೆಗೆದುಕೊಳ್ಳಲಿದ್ದು, ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಲಿದ್ದಾರೆ.‌ ಈಗಾಗಲೇ ಪ್ರಹ್ಲಾದ್ ಜೋಶಿಯವರ ವಿರುದ್ಧ ನಮ್ಮ ಸಮರ ನಿಲ್ಲುವುದಿಲ್ಲ ಎಂದು ಶ್ರೀಗಳ ಸ್ಪಷ್ಟಪಡಿಸಿದ್ದು, ಈಗ ದಿಂಗಾಲೇಶ್ವರ ಶ್ರೀಗಳ ಭಕ್ತರ ಸಭೆ ತೀವ್ರ ಕುತೂಹಲ ಮೂಡಿಸಿದೆ.

ಸುರೇಶಾ, ಸಿಮೆಂಟ್ ಮಂಜಾ ನಿನ್ನ ಬಿಡೋದಿಲ್ಲಾ, ಪ್ರೀತಂಗೌಡ ನಿನ್ನ ಸಮಾಧಿ ಮಾಡಿ ಬಿಡುತ್ತಾರೆ: ಜೆಡಿಎಸ್ ವಿರುದ್ಧ ಡಿಕೆಶಿ ವ್ಯಂಗ್ಯ

ವೀಣಾ ಕಾಶಪ್ಪನವರ್ ಕುರಿತು ಶಾಕಿಂಗ್ ಹೇಳಿಕೆ‌ ನೀಡಿದ ಸಚಿವ ಆರ್.ಬಿ.ತಿಮ್ಮಾಪೂರ್

ನಾಮಪತ್ರ ಸಲ್ಲಿಸಿದ ಯದುವೀರ್ ಒಡೆಯರ್: ಮಗನಿಗೆ ಸಾಥ್ ಕೊಟ್ಟ ರಾಜಮಾತೆ ಪ್ರಮೋದಾದೇವಿ

- Advertisement -

Latest Posts

Don't Miss